ದೆಹಲಿ: ಈ ಮೊದಲ 6 ವರ್ಷದ ಫಲಿತಾಂಶ ಆಧರಿಸಿ 12ನೇ ತರಗತಿ ಫಲಿತಾಂಶ ನೀಡುವ ಬಗ್ಗೆ ಸುಪ್ರೀಂ ಕೋರ್ಟ್ ತಾತ್ವಿಕ ಒಪ್ಪಿಗೆ ಸೂಚಿಸಿದೆ. CBSE ಹಾಗೂ ICSE ಪರೀಕ್ಷಾ ಫಲಿತಾಂಶಗಳ ಮಾನದಂಡಕ್ಕೆ ಸುಪ್ರೀಂ ಕೋರ್ಟ್ ತಾತ್ವಿಕ ಒಪ್ಪಿಗೆ ನೀಡಿದೆ. ICSE ಪರ ವಕೀಲರು, ಸುಪ್ರೀಂ ಕೋರ್ಟ್‌ಗೆ ತಮ್ಮ ನಿಲುವು ತಿಳಿಸಿದ್ದರು.
ಈ ಬಗ್ಗೆ ಜೂನ್ 21ರಂದು ಸುಪ್ರೀಂ ಕೋರ್ಟ್ ವಿಸ್ತೃತ ಆದೇಶ ನೀಡಲಿದೆ. ICSE ಯಿಂದ ಕಳೆದ ಆರು ವರ್ಷದ ಫಲಿತಾಂಶ ಆಧಾರದ ಮೇಲೆ 12 ನೇ ತರಗತಿ ಫಲಿತಾಂಶ ಪ್ರಕಟ ಮಾಡುವ ಬಗ್ಗೆ ಯೋಜಿಸಲಾಗಿದೆ. ಸುಪ್ರೀಂ ಕೋರ್ಟ್ ಗೆ ICSE ಪರ ವಕೀಲರು ತಮ್ಮ ನಿಲುವು ತಿಳಿಸಿದ್ದಾರೆ. CBSE, ICSE ಪರೀಕ್ಷಾ ಫಲಿತಾಂಶಗಳ ಮಾನದಂಡಕ್ಕೆ ಸುಪ್ರೀಂ ಕೋರ್ಟ್ ತಾತ್ವಿಕ ಒಪ್ಪಿಗೆ ನೀಡಿದೆ. ಈ ಬಗ್ಗೆ ಜೂನ್ 21 ರಂದು ವಿಸ್ತೃತ ಆದೇಶ ನೀಡುವ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದೆ.
ಸಿಬಿಎಸ್ಇ 12ನೇ ತರಗತಿಯ ಫಲಿತಾಂಶ ಜುಲೈ 31ರ ಹಾಗೆ ಪ್ರಕಟವಾಗುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಫಲಿತಾಂಶಕ್ಕೆ ಸಂಬಂಧಿಸಿದಂತೆ ಅಂಕ ಪರಿಗಣನೆಯ ಮಾನದಂಡದ ಕುರಿತು ಸುಪ್ರೀಂಕೋರ್ಟ್ಗೆ ಮಾಹಿತಿ ನೀಡುತ್ತಿರುವ ಸಿಬಿಎಸ್ಇ ಬೋರ್ಡ್, 12ನೇ ತರಗತಿ ಮಕ್ಕಳ ಅಂಕವನ್ನು 11ನೇ ತರಗತಿ ಮತ್ತು 10ನೇ ತರಗತಿ ಪರೀಕ್ಷಾ ಫಲಿತಾಂಶದ ಸಹಾಯದೊಂದಿಗೆ ನಿರ್ಧರಿಸುವುದಾಗಿ ತಿಳಿಸಿತ್ತು. ಅಲ್ಲದೇ, ಒಟ್ಟಾರೆ ಫಲಿತಾಂಶಕ್ಕೆ 12ನೇ ತರಗತಿ ಮಕ್ಕಳ ಈ ಹಿಂದಿನ ಪೂರ್ವ ಸಿದ್ಧತಾ ಪರೀಕ್ಷೆಗಳ ಅಂಕವೂ ಪರಿಗಣಿಸಲ್ಪಡುತ್ತದೆ ಎಂದು ಮಾಹಿತಿ ನೀಡಿತ್ತು.
ಈ ಪೈಕಿ ಶೇ.40ರಷ್ಟು ಅಂಕವು 12ನೇ ತರಗತಿಯಲ್ಲಿ ನಡೆಸಲಾದ ಬೇರೆ ಪರೀಕ್ಷೆಗಳ ಆಧಾರದಿಂದ ಪರಿಗಣಿಸಲ್ಪಟ್ಟರೆ ಶೇ.60ರಷ್ಟು ಅಂಕವು 11 ಹಾಗೂ 10ನೇ ತರಗತಿಯ ಪರೀಕ್ಷೆಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸುಪ್ರೀಂಕೋರ್ಟ್ಗೆ ತಿಳಿಸಲಾಗಿತ್ತು. ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ಹಾಗೂ ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ಪೀಠವು ಬೋರ್ಡ್ನ ಅಭಿಪ್ರಾಯವನ್ನು ಇಂದು (ಜೂನ್ 17) ಆಲಿಸುತ್ತಿದ್ದು, ಶೀಘ್ರದಲ್ಲಿ ಸ್ಪಷ್ಟ ಚಿತ್ರಣ ದೊರಕಲಿದೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ: Karnataka PUC Result 2021: ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟ್ ತಡೆ
ಜುಲೈ ತಿಂಗಳ 3ನೇ ವಾರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ, ಹೇಗಿದೆ ಗೊತ್ತಾ ಶಿಕ್ಷಣ ಇಲಾಖೆ ತಯಾರಿ
Published On - 3:37 pm, Thu, 17 June 21