‘ತುಂಬಾ ಖುಷಿಯಾಗಿದೆ’: ಭಾರತದ ಕೊವಿಡ್ ಪರಿಹಾರ ಯೋಜನೆಯನ್ನು ಶ್ಲಾಘಿಸಿದ ಸುಪ್ರೀಂಕೋರ್ಟ್

| Updated By: ರಶ್ಮಿ ಕಲ್ಲಕಟ್ಟ

Updated on: Sep 23, 2021 | 5:23 PM

Supreme Court: "ನಮ್ಮ ಜನಸಂಖ್ಯೆಯ ಗಾತ್ರ, ಲಸಿಕೆ ವೆಚ್ಚಗಳು, ಆರ್ಥಿಕ ಪರಿಸ್ಥಿತಿ ಮತ್ತು ನಾವು ಎದುರಿಸಿದ ಪ್ರತಿಕೂಲ ಸನ್ನಿವೇಶಗಳನ್ನು ಗಮನಿಸಿದರೆ ನಾವು ಅನುಕರಣೀಯ ಕ್ರಮಗಳನ್ನು ಕೈಗೊಂಡಿದ್ದೇವೆ. ಭಾರತ ಮಾಡಿದ್ದನ್ನು ಬೇರೆ ಯಾವ ದೇಶವೂ ಮಾಡಲು ಸಾಧ್ಯವಾಗಲಿಲ್ಲ" ಎಂದು ನ್ಯಾಯಾಧೀಶರು ಹೇಳಿದರು.

‘ತುಂಬಾ ಖುಷಿಯಾಗಿದೆ’: ಭಾರತದ ಕೊವಿಡ್ ಪರಿಹಾರ ಯೋಜನೆಯನ್ನು ಶ್ಲಾಘಿಸಿದ ಸುಪ್ರೀಂಕೋರ್ಟ್
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕೊರೊನಾವೈರಸ್ (Coronavirus) ಸಾಂಕ್ರಾಮಿಕಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಮಾಡಿದ್ದನ್ನು ಬೇರೆ ಯಾವುದೇ ದೇಶವು ನಿರ್ವಹಿಸಲು ಸಾಧ್ಯವಾಗಲಿಲ್ಲ ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ (SupremeCourt) ಗುರುವಾರ ಸರ್ಕಾರದ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತಪಡಿಸಿದೆ. ಅದೇ ವೇಳೆ ಕೊವಿಡ್ -19 ಸಾವಿಗೆ ಪ್ರಸ್ತಾಪಿಸಿದ ₹ 50,000 ಪರಿಹಾರ ಪ್ರಕರಣದ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ. “ಇಂದು ನಾವು ತುಂಬಾ ಸಂತೋಷವಾಗಿದ್ದೇವೆ. ತೊಂದರೆ ಅನುಭವಿಸಿದ ವ್ಯಕ್ತಿಗಳಿಗೆ ಸ್ವಲ್ಪ ಸಾಂತ್ವನ ಸಿಗುತ್ತದೆ. ಸರ್ಕಾರ ನಡೆಸುತ್ತಿರುವ ಎಲ್ಲ ಕಾರ್ಯದ ಬಗ್ಗೆಯೂ ಖುಷಿಯಾಗಿದೆ. ಬಳಲುತ್ತಿರುವ ವ್ಯಕ್ತಿಯ ಕಣ್ಣೀರು ಒರೆಸಲು ಏನಾದರೂ ಮಾಡಲಾಗುತ್ತಿದೆ ಎಂದು ನಮಗೆ ಸಂತೋಷವಾಗಿದೆ ಎಂದು ನ್ಯಾಯಮೂರ್ತಿ ಎಂಆರ್ ಶಾ ಹೇಳಿದ್ದಾರೆ.

ಎರಡನೇ ಅಲೆಗೆ ಸನ್ನದ್ಧತೆಯ ಕೊರತೆ ಮತ್ತು ವೈದ್ಯಕೀಯ ಆಮ್ಲಜನಕದಂತಹ ಅಗತ್ಯತೆಗಳ ಕೊರತೆಯಿಂದಾಗಿ ಸಾವಿರಾರು ಸಾವುಗಳ ಮೇಲೆ ತೀವ್ರ ಪರಿಶೀಲನೆ ನಡೆಸಿದ ಕೊರೊನಾವೈರಸ್ ಸಾಂಕ್ರಾಮಿಕ ರೋಗಕ್ಕೆ ಭಾರತದ ಪ್ರತಿಕ್ರಿಯೆಯನ್ನು ನ್ಯಾಯಮೂರ್ತಿಗಳಾದ ಶಾ ಮತ್ತು ಎಎಸ್ ಬೋಪಣ್ಣ ಶ್ಲಾಘಿಸಿದರು.

“ನಮ್ಮ ಜನಸಂಖ್ಯೆಯ ಗಾತ್ರ, ಲಸಿಕೆ ವೆಚ್ಚಗಳು, ಆರ್ಥಿಕ ಪರಿಸ್ಥಿತಿ ಮತ್ತು ನಾವು ಎದುರಿಸಿದ ಪ್ರತಿಕೂಲ ಸನ್ನಿವೇಶಗಳನ್ನು ಗಮನಿಸಿದರೆ ನಾವು ಅನುಕರಣೀಯ ಕ್ರಮಗಳನ್ನು ಕೈಗೊಂಡಿದ್ದೇವೆ. ಭಾರತ ಮಾಡಿದ್ದನ್ನು ಬೇರೆ ಯಾವ ದೇಶವೂ ಮಾಡಲು ಸಾಧ್ಯವಾಗಲಿಲ್ಲ” ಎಂದು ನ್ಯಾಯಾಧೀಶರು ಹೇಳಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಕೊವಿಡ್ -19 ನಿಂದ ಮೃತಪಟ್ಟವರ ಕುಟುಂಬಕ್ಕೆ ₹ 50,000 ಪರಿಹಾರ ನೀಡಬೇಕೆಂದು ಶಿಫಾರಸು ಮಾಡಿದೆ ಎಂದು ಕೇಂದ್ರವು ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಸಾಂಕ್ರಾಮಿಕ ರೋಗವನ್ನು ಎದುರಿಸಲು ಸನ್ನದ್ಧತೆಗೆ ಸಂಬಂಧಿಸಿದ ಕೊವಿಡ್ -19 ಪರಿಹಾರ ಕಾರ್ಯಾಚರಣೆಗಳು ಅಥವಾ ಚಟುವಟಿಕೆಗಳಲ್ಲಿ ಭಾಗಿಯಾಗಿ ವೈರಸ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರವನ್ನು ನೀಡಲಾಗುವುದು ಎಂದು ಅದು ಹೇಳಿದೆ.

ಜೂನ್ 30 ರಂದು ನೀಡಲಾದ ಉನ್ನತ ನ್ಯಾಯಾಲಯದ ನಿರ್ದೇಶನಗಳನ್ನು ಅನುಸರಿಸಿ ಸೆಪ್ಟೆಂಬರ್ 11 ರಂದು ಎನ್ ಡಿಎಂಎ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ಸರ್ಕಾರ ಹೇಳಿದೆ. ಇದರಲ್ಲಿ ಹಣಕಾಸಿನ ಸಹಾಯಕ್ಕಾಗಿ ಮಾರ್ಗಸೂಚಿಗಳನ್ನು ಶಿಫಾರಸು ಮಾಡಲು ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ. ಸಾಂಕ್ರಾಮಿಕ ರೋಗದ ಮೊದಲ ಮತ್ತು ಎರಡನೇ ಅಲೆಯಲ್ಲಿ ಕೊವಿಡ್ -19 ಸಾವುಗಳಿಂದ ತೊಂದರೆಗೊಳಗಾದ ಕುಟುಂಬಗಳಿಗೆ ನೆರವು ಸೀಮಿತವಾಗಿರುವುದಿಲ್ಲ ಆದರೆ ಸಾಂಕ್ರಾಮಿಕ ರೋಗದ ಮುಂದಿನ ಹಂತಗಳಲ್ಲಿಯೂ ಮುಂದುವರಿಯುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.

ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ (SDRF) ಪರಿಹಾರವನ್ನು ರಾಜ್ಯಗಳು ಒದಗಿಸುತ್ತವೆ ಮತ್ತು ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿದ 30 ದಿನಗಳಲ್ಲಿ ಎಲ್ಲಾ ಹಕ್ಕುಗಳನ್ನು ಇತ್ಯರ್ಥಪಡಿಸಲಾಗುವುದು ಮತ್ತು ಆಧಾರ್ ಲಿಂಕ್ಡ್ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ ಪ್ರಕ್ರಿಯೆಗಳ ಮೂಲಕ ವಿತರಿಸಲಾಗುತ್ತದೆ.
ವಕೀಲ ಗೌರವ್ ಬನ್ಸಾಲ್ ಮತ್ತು ವಕೀಲ ಸುಮೀರ್ ಸೋಧಿ ಪ್ರತಿನಿಧಿಸಿದ ಮಧ್ಯಸ್ಥಿಕೆದಾರರು ಕೊವಿಡ್ -19 ಸಂತ್ರಸ್ತರ ಕುಟುಂಬ ಸದಸ್ಯರಿಗೆ ಪರಿಹಾರ ಕೋರಿ ಸಲ್ಲಿಸಿದ ಮನವಿಗಳ ಬಗ್ಗೆ ಕೇಂದ್ರ ಈ ರೀತಿಯ ಪ್ರತಿಕ್ರಿಯೆ ನೀಡಿದೆ.

ಇದನ್ನೂ ಓದಿ: ಕೊವಿಡ್ ಪಾಸಿಟಿವ್ ಆಗಿದ್ದು 30 ದಿನಗಳಲ್ಲಿ ಆತ್ಮಹತ್ಯೆ ಮಾಡಿದ್ದರೆ ಅದನ್ನು ಕೊವಿಡ್-19ನಿಂದ ಸಾವು ಎಂದು ಪರಿಗಣಿಸಲಾಗುತ್ತದೆ: ಕೇಂದ್ರ ಸರ್ಕಾರ

(Supreme Court praise for the government After India’s Covid Compensation Plan )