AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SC on Electoral Bonds: ಚುನಾವಣೆ ಬಾಂಡ್ ವಿತರಣೆಗೆ ತಡೆ ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್

ಚುನಾವಣೆ ಬಾಂಡ್​ಗಳ (ಎಲೆಕ್ಟೋರಲ್ ಬಾಂಡ್) ವಿತರಣೆಗೆ ತಡೆ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಶುಕ್ರವಾರದಂದು (ಮಾರ್ಚ್ 26, 2021) ಸುಪ್ರೀಂ ಕೋರ್ಟ್ ತಿಳಿಸಿದೆ. ಈ ಬಗ್ಗೆ ಎಡಿಆರ್​ನಿಂದ ಅರ್ಜಿ ಹಾಕಲಾಗಿತ್ತು.

SC on Electoral Bonds: ಚುನಾವಣೆ ಬಾಂಡ್ ವಿತರಣೆಗೆ ತಡೆ ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್
ಸುಪ್ರೀಂ ಕೋರ್ಟ್​
Srinivas Mata
|

Updated on:Mar 26, 2021 | 12:30 PM

Share

ನವದೆಹಲಿ: ಚುನಾವಣೆ ಬಾಂಡ್​ಗಳ (ಎಲೆಕ್ಟೋರಲ್ ಬಾಂಡ್) ವಿತರಣೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಮಾರ್ಚ್ 26ನೇ ತಾರೀಕಿನ ಶುಕ್ರವಾರ ಸುಪ್ರೀಂ ಕೋರ್ಟ್ ಹೇಳಿದೆ. ಇದರ ಪರಿಣಾಮವಾಗಿ, ಈಗ ವಿಧಾನಸಭೆ ಚುನಾವಣೆ ಘೋಷಣೆ ಆಗಿರುವ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮಬಂಗಾಲ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ ಹೊಸದಾಗಿ ಚುನಾವಣೆ ಬಾಂಡ್​ಗಳನ್ನು ಬಿಡುಗಡೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಹಾಕಿಕೊಂಡಿದ್ದ ಅರ್ಜಿಯ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯಮ್ ಅವರನ್ನು ಒಳಗೊಂಡ ಪೀಠವು ಮಾರ್ಚ್ 24ರಂದು ಕಾಯ್ದಿರಿಸಿತ್ತು.

2018 ಮತ್ತು 2019ರಲ್ಲಿ ಯಾವುದೇ ಅಡೆತಡೆ ಇಲ್ಲದೆ ಬಾಂಡ್​ಗಳನ್ನು ಬಿಡುಗಡೆ ಮಾಡಿದಾಗ ಅಗತ್ಯ ಪ್ರಮಾಣದ ಸುರಕ್ಷತಾ ಕ್ರಮಗಳು ಇದ್ದವು. ಸದ್ಯಕ್ಕೆ ಚುನಾವಣೆ ಬಾಂಡ್​ಗಳಿಗೆ ತಡೆ ನೀಡುವುದಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ಆದೇಶದಲ್ಲಿ ಹೇಳಿರುವುದಾಗಿ ಕಾನೂನು ಸಂಸ್ಥೆಯೊಂದು ತಿಳಿಸಿದೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ.

ಏನಿದು ಎಲೆಕ್ಟೋರಲ್ ಬಾಂಡ್? ಎಲೆಕ್ಟೋರಲ್ ಬಾಂಡ್ ಎಂಬುದು ಫೈನಾನ್ಷಿಯಲ್ ಇನ್​ಸ್ಟ್ರುಮೆಂಟ್. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದಕ್ಕೆ ಇದನ್ನು ಬಳಸಲಾಗುತ್ತಿದೆ. ಕೇವಲ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್​ಗಳು ಕೇಂದ್ರದ ಅನುಮತಿ ಮೇರೆ ವಿತರಿಸುತ್ತದೆ. ದೇಣಿಗೆ ನೀಡುವವರು ಚೆಕ್ ಮತ್ತು ಡಿಜಿಟಲ್ ಪಾವವತಿ ಮಾಡಬಹುದು. ನಗದಿನ ಮೂಲಕ ಖರೀದಿಸುವುದು ಸಾಧ್ಯವಿಲ್ಲ. ಬಾಂಡ್ ವಿತರಣೆ ಆದ ನಿರ್ದಿಷ್ಟ ಅವಧಿಯೊಳಗಾಗಿ ನೋಂದಾಯಿತ ರಾಜಕೀಯ ಪಕ್ಷಗಳು ಆಯಾ ಬ್ಯಾಂಕ್ ಖಾತೆಯಲ್ಲಿ ಹಣ ಪಡೆದುಕೊಳ್ಳಬಹುದು.

ಎಲೆಕ್ಟೋರಲ್ ಬಾಂಡ್​ಗಳ ಮೂಲಕ ರಾಜಕೀಯ ಪಕ್ಷಗಳು ಪಡೆಯುವ ಈ ನಿಧಿಯನ್ನು ಭಯೋತ್ಪಾದನೆಯಂಥ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸದಂತೆ ತಡೆಯುವುದಕ್ಕೆ ನಿಯಂತ್ರಣ ಇದೆಯೇ ಎಂದು ಮಾರ್ಚ್ 24ನೇ ತಾರೀಕಿನಂದು ಸುಪ್ರೀಂ ಕೋರ್ಟ್ ಪ್ರಶ್ನೆ ಎತ್ತಿತ್ತು. ಮುಖ್ಯನಾಯಮೂರ್ತಿ ಬೋಬ್ಡೆ ಅವರನ್ನು ಒಳಗೊಂಡ ಪೀಠವು ಅಟಾರ್ನಿ ಜನರಲ್ ಕೆ.ಕೆ. ವೇಣಿಗೋಪಾಲ್ ಅವರಿಗೆ ಸೂಚಿಸಿ, ಸರ್ಕಾರವು ಈ ಸಮಸ್ಯೆ ಕಡೆಗೆ ಗಮನ ಹರಿಸಬೇಕು. ಚುನಾವಣೆ ಬಾಂಡ್​ಗಳ ಮೂಲಕ ಪಡೆದ ಹಣವು ಭಯೋತ್ಪಾದನೆಯಂಥ ಕಾನೂನುಬಾಹಿರ ಉದ್ದೇಶಕ್ಕೆ ದುರ್ಬಳಕೆ ಆಗಬಾರದು ಎಂದಿತ್ತು.

ಯಾರು ಖರೀದಿಸುತ್ತಾರೆ ಎಂಬುದು ಗೊತ್ತಾಗಲ್ಲ ಎಡಿಆರ್ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ವಕಾಲತ್ತು ವಹಿಸಿದ್ದರು. ಚುನಾವಣೆ ಬಾಂಡ್​ಗಳನ್ನು ಮಾರಾಟ ಮಾಡಲು ಅವಕಾಶ ನೀಡಬಾರದು ಎಂದು ಕೇಳಿದ್ದರು. ಚುನಾವಣೆಗಳು ದೊಡ್ಡ ಮಟ್ಟದಲ್ಲಿ ಹಣದಿಂದ ಪ್ರಭಾವಿತ ಆಗುತ್ತಿದೆ. ಪೀಠವು ಸಹ ಗಮನಿಸಿದಂತೆ, ಚುನಾವಣೆಯಲ್ಲಿ ಹಣದ ಪ್ರಭಾವ ದೊಡ್ಡ ಮಟ್ಟದಲ್ಲಿದೆ ಎಂಬುದು ಬಹಳ ಮಂದಿಗೆ ತಿಳಿದಿದೆ ಎಂದಿದ್ದರು.

ಚುನಾವಣೆ ಬಾಂಡ್ ಯಾರು ಖರೀದಿ ಮಾಡುತ್ತಾರೆ ಎಂಬದು ಗೊತ್ತಾಗುವುದಿಲ್ಲ. ಅದನ್ನು ಬಹಿರಂಗ ಮಾಡುವುದಿಲ್ಲ. ಈ ಬಗ್ಗೆ ಹಿಂದೆ ಚುನಾವಣೆ ಆಯೋಗ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಷೇಪ ವ್ಯಕ್ತಪಡಿಸಿತ್ತು. ಇನ್ನು ಚುನಾವಣೆ ಬಾಂಡ್ ಮೂಲಕ ಬರುವ ಹಣ ಬಹುತೇಕ ಆಳುವ ಪಕ್ಷಗಳಿಗೆ ಬರುತ್ತದೆ ಎಂದಿದ್ದರು. ಪೀಠವು ಗಮನಿಸಿರುವ ಪ್ರಕಾರ, ಚುನಾವಣೆ ಬಾಂಡ್​ಗಳ ಮೂಲಕ ಹಣವು ಯಾವ ಪಕ್ಷಕ್ಕಾದರೂ ಬರಬಹುದು.

ಇದನ್ನೂ ಓದಿ: ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಸ್ಥಾನಕ್ಕೆ ಎನ್​.ವಿ.ರಮಣ ಹೆಸರನ್ನು ಶಿಫಾರಸು ಮಾಡಿದ ಸಿಜಿಐ ಬೋಬ್ಡೆ..; ಕೇಂದ್ರ ಸಚಿವರ ಪತ್ರಕ್ಕೆ ಉತ್ತರ

Published On - 12:05 pm, Fri, 26 March 21

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?