Kanwar yatra: ಕನ್ವರ್ ಯಾತ್ರಾ ಮಾರ್ಗದಲ್ಲಿ ಆಹಾರ ಮಳಿಗೆಯಲ್ಲಿ ಹೆಸರು ಪ್ರದರ್ಶನ; ಯುಪಿ ಆದೇಶಕ್ಕೆ ಸುಪ್ರೀಂ ತಡೆ

|

Updated on: Jul 22, 2024 | 2:29 PM

ಕನ್ವರ್ ಯಾತ್ರೆಯ ಹಾದಿಯಲ್ಲಿರುವ ಆಹಾರ ಮಳಿಗೆ, ಅಂಗಡಿ ಮಾಲೀಕರು ತಮ್ಮ ಹೆಸರನ್ನು ಅಂಗಡಿಯಲ್ಲಿ ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರ ನೀಡಿರುವ ಆದೇಶಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದೀಗ ಸುಪ್ರೀಂಕೋರ್ಟ್ ಈ ಆದೇಶವನ್ನು ತಡೆ ಹಿಡಿದಿದೆ.

Kanwar yatra: ಕನ್ವರ್ ಯಾತ್ರಾ ಮಾರ್ಗದಲ್ಲಿ ಆಹಾರ ಮಳಿಗೆಯಲ್ಲಿ ಹೆಸರು ಪ್ರದರ್ಶನ; ಯುಪಿ ಆದೇಶಕ್ಕೆ ಸುಪ್ರೀಂ ತಡೆ
ಸುಪ್ರೀಂಕೋರ್ಟ್
Follow us on

ದೆಹಲಿ ಜುಲೈ 22: ಕನ್ವರ್ ಯಾತ್ರಾ(Kanwar Yatra) ಮಾರ್ಗದಲ್ಲಿರುವ ಆಹಾರ ಮಳಿಗೆಗಳಲ್ಲಿ ಮಾಲೀಕರ ಹೆಸರು ಪ್ರದರ್ಶಿಸಬೇಕು ಎಂದು ಆದೇಶಿಸಿರುವ ಉತ್ತರಾಖಂಡ, ಉತ್ತರ ಪ್ರದೇಶ (Uttar Pradesh)  ಪೊಲೀಸರ ಆದೇಶಕ್ಕೆ ಸುಪ್ರೀಂಕೋರ್ಟ್ (Supreme Court) ಸೋಮವಾರ ತಡೆ ನೀಡಿದೆ. ಕನ್ವರ್ ಯಾತ್ರೆಯ ಹಾದಿಯಲ್ಲಿರುವ ಆಹಾರ ಮಳಿಗೆ, ಅಂಗಡಿ ಮಾಲೀಕರು ಅವರ ಮತ್ತು ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಹೆಸರುಗಳನ್ನು ಬಹಿರಂಗಪಡಿಸಬೇಕು ಎಂದು ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ಪೊಲೀಸರು ಆದೇಶಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್.ವಿ.ಎನ್.  ಭಟ್ಟಿ ಪೀಠವು ಆಹಾರ ಮಳಿಗೆಯಲ್ಲಿ,  ಮಾಲೀಕರು ಆಹಾರದ ಹೆಸರುಗಳನ್ನವು ಪ್ರದರ್ಶಿಸಬಹುದು. ಆದರೆ ಅವರ ಹೆಸರುಗಳು, ಜಾತಿ ಅಥವಾ ಅವರ ಉದ್ಯೋಗಿಗಳ ಹೆಸರನ್ನು ಪ್ರದರ್ಶಿಸುವ ಅಗತ್ಯವಿಲ್ಲ ಎಂದು  ಹೇಳಿದ್ದಾರೆ.

ಕನ್ವರ್ ಯಾತ್ರಾ ಮಾರ್ಗದಲ್ಲಿರುವ ತಿನಿಸುಗಳು ಅವುಗಳ ಮಾಲೀಕರ ಹೆಸರನ್ನು ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು  ಔಪಚಾರಿಕ ಆದೇಶವನ್ನು ಹೊರಡಿಸಿದ್ದಾರೆಯೇ ಎಂದು ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋದ ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಅವರನ್ನು ಪೀಠವು ಕೇಳಿದೆ.

ತಿನಿಸುಗಳ ಮಾಲೀಕರ ಹೆಸರನ್ನು ಪ್ರದರ್ಶಿಸಲು’ ಆದೇಶವನ್ನು ರವಾನಿಸಲಾಗಿದೆಯೇ?, ರಾಜ್ಯ ಸರ್ಕಾರಗಳು ಯಾವುದೇ ಔಪಚಾರಿಕ ಆದೇಶವನ್ನು ಅಂಗೀಕರಿಸಿದೆಯೇ” ಎಂದು  ಮಹುವಾ ಮೊಯಿತ್ರಾ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ  ಅವರಲ್ಲಿ ನ್ಯಾಯಪೀಠ ಕೇಳಿದೆ.

ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ಜಾರಿಗೆ ತಂದಿರುವ ಆದೇಶಗಳು  ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಸಿಂಘ್ವಿ ಹೇಳಿದರು.

ಕನ್ವಾರ್  ತೆರಳುವ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಇದು ಮೇಲ್ನೋಟಕ್ಕೆ ಉತ್ತರ ಪ್ರದೇಶ, ಉತ್ತರಾಖಂಡ, ದೆಹಲಿ ಮತ್ತು ಮಧ್ಯಪ್ರದೇಶವನ್ನು ಒಳಗೊಂಡಿರಬಹುದು. ರಾಜ್ಯಗಳು ಮನವಿ ಮಾಡಿಲ್ಲ ಆದರೆ ಯಾತ್ರೆಗೆ ಹೋಗುವ ಮಾರ್ಗದಲ್ಲಿ ಸ್ವಯಂ ಪ್ರೇರಿತವಾಗಿ ನೋಟಿಸ್ ನೀಡಲಾಗಿದೆ ಎಂದು ಹೇಳಲಾಗಿದೆ. ನ್ಯಾಯಾಲಯ ಪ್ರಕರದ ವಿಚಾರಣೆಯನ್ನು ಶುಕ್ರವಾರ  ನಡೆಸಲಿದೆ.

ಹಿರಿಯ ವಕೀಲ ಸಿಯು ಸಿಂಗ್ ಪ್ರತಿನಿಧಿಸಿದ ಅಸೋಸಿಯೇಷನ್ ​​ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಮತ್ತು ಟಿಎಂಸಿ ಸಂಸದ ೆಮಹುವಾ ಮೊಯಿತ್ರಾ ಅವರು ಸಲ್ಲಿಸಿದ ಇತರ ಎರಡು ಅರ್ಜಿಗಳನ್ನು ಹಿರಿಯ ವಕೀಲ ಎಎಂ ಸಿಂಘ್ವಿ ಮತ್ತು  ಚಿಂತಕ ಅಪೂರ್ವಾನಂದ್ ಝಾ ಮತ್ತು ಅಂಕಣಕಾರ ಆಕಾರ್ ಪಟೇಲ್ ಸಲ್ಲಿಸಿದ ಅರ್ಜಿಯ ಮೇಲೆ ಈ ಆದೇಶ ಬಂದಿದೆ.

ಈ ನಿರ್ದೇಶನಗಳು ರಾಷ್ಟ್ರದ ಜಾತ್ಯತೀತ ಸ್ವರೂಪದ ಮೇಲೆ ಪರಿಣಾಮ ಬೀರುತ್ತದೆ, ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾದಿಸಲಾದ ಆದರ್ಶಗಳು ಮತ್ತು ಮೌಲ್ಯಗಳನ್ನು ಉಲ್ಲಂಘಿಸುತ್ತದೆ. ಸಮಾನತೆ, ಜಾತಿ ತಾರತಮ್ಯ ಮತ್ತು ಜೀವನದ ಘನತೆಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಾದಿಸಿದರು.

ಈ ನಿರ್ದೇಶನಗಳು ಕನ್ವಾರ್ ಯಾತ್ರೆಯ ಮಾರ್ಗದ ಅಂಗಡಿಗಳಲ್ಲಿ ಕೆಲಸ ಮಾಡುವ ನೌಕರರನ್ನು ಬಲವಂತವಾಗಿ ಹಿಂಜರಿಯುವಂತೆ ಕಾರಣವಾಗಿವೆ, ಇದು ಜೀವನೋಪಾಯವನ್ನು ಗಳಿಸುವ ಅಥವಾ  ವ್ಯಾಪಾರ ಮಾಡುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ.

ಇದನ್ನೂ ಓದಿ: NEET ವಿವಾದ: ಕೇಂದ್ರ ವಿರುದ್ಧ ರಾಹುಲ್, ಅಖಿಲೇಶ್ ವಾಗ್ದಾಳಿಗೆ ಧರ್ಮೇಂದ್ರ ಪ್ರಧಾನ್ ತಿರುಗೇಟು

ಕವಾರಿಯಾಗಳಿಗೆ ಸಸ್ಯಾಹಾರಿ ಆಹಾರವನ್ನು ನೀಡಲಾಗುತ್ತದೆ, ನೈರ್ಮಲ್ಯದ ಮಾನದಂಡಗಳಿಗೆ ಅನುಗುಣವಾಗಿ ಮತ್ತು ಅವರ ಆದ್ಯತೆಗಳಿಗೆ ಅನುಗುಣವಾಗಿ ನೀಡುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಅನುಮತಿಸಲಾಗಿದೆ. ಆದಾಗ್ಯೂ, ಕಾನೂನಿನ ಬೆಂಬಲವಿಲ್ಲದೆ ಸ್ವಾತಂತ್ರ್ಯಗಳನ್ನು ನಿರ್ಬಂಧಿಸಲು ಅಧಿಕಾರಿಗಳಿಗೆ ಅಧಿಕಾರವಿಲ್ಲ.

ನಿರ್ದೇಶನಗಳ ಪರಿಣಾಮವು ಬಹು ರಾಜ್ಯಗಳಾದ್ಯಂತ ಹರಡುತ್ತದೆ . ಹಾಗಾಗಿ ಸುಪ್ರೀಂ ಕೋರ್ಟ್ ತಕ್ಷಣ ಮಧ್ಯಪ್ರವೇಶಿಸುವ ಅಗತ್ಯವಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:57 pm, Mon, 22 July 24