Vijay Mallya: ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಪ್ರಕರಣ -ಜುಲೈ 11 ರಂದು ತೀರ್ಪು ನೀಡಲಿರುವ ಸುಪ್ರೀಂಕೋರ್ಟ್​

Supreme Court: ಕೇಂದ್ರ ಸರ್ಕಾರವು ಬ್ರಿಟನ್‌ನಲ್ಲಿ ಇರುವ ವಿಜಯ್ ಮಲ್ಯ ಅವರನ್ನು ಗಡಿಪಾರು ಮಾಡಿಸುವ ಮೂಲಕ ಭಾರತಕ್ಕೆ ಕರೆತರಲು ನಿರಂತರ ಪ್ರಯತ್ನ ನಡೆಸುತ್ತಿದೆ. ಈ ನಡುವೆಯೇ ಮಲ್ಯಗೆ ಇನ್ನು ಸುಪ್ರೀಂ ಕೋರ್ಟ್ ಕಂಟಕ ಎದುರಾಗಲಿದೆ.

Vijay Mallya: ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಪ್ರಕರಣ -ಜುಲೈ 11 ರಂದು ತೀರ್ಪು ನೀಡಲಿರುವ ಸುಪ್ರೀಂಕೋರ್ಟ್​
ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಪ್ರಕರಣ: ಜುಲೈ 11 ರಂದು ತೀರ್ಪು ನೀಡಲಿರುವ ಸುಪ್ರೀಂಕೋರ್ಟ್​
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 09, 2022 | 7:26 PM

ಹೊಸದಿಲ್ಲಿ: ದೇಶಭ್ರಷ್ಟ ಆರ್ಥಿಕ ಅಪರಾಧಿಯಾಗಿರುವ ಉದ್ಯಮಿ ವಿಜಯ್ ಮಲ್ಯ (Vijay Mallya) ಅವರ ವಿರುದ್ಧದ ನ್ಯಾಯಾಂಗ ನಿಂದನೆ (contempt of court) ಆರೋಪ ಪ್ರಕರಣದಲ್ಲಿ ಶಿಕ್ಷೆ ವಿಧಿಸುವ ಕುರಿತಾದ ವಾದ ವಿವಾದ ಆಲಿಸಿದ್ದು, ಜುಲೈ 11 ರಂದು ತೀರ್ಪು ಪ್ರಕಟಿಸುವುದಾಗಿ ಸುಪ್ರೀಂ ಕೋರ್ಟ್ (Supreme Court ) ಹೇಳಿದೆ. ಕೇಂದ್ರ ಸರ್ಕಾರವು ಬ್ರಿಟನ್‌ನಲ್ಲಿ ಇರುವ ವಿಜಯ್ ಮಲ್ಯ ಅವರನ್ನು ಗಡಿಪಾರು ಮಾಡಿಸುವ ಮೂಲಕ ಭಾರತಕ್ಕೆ ಕರೆತರಲು ನಿರಂತರ ಪ್ರಯತ್ನ ನಡೆಸುತ್ತಿದೆ. ಈ ನಡುವೆಯೇ ಮಲ್ಯಗೆ ಇನ್ನು ಸುಪ್ರೀಂ ಕೋರ್ಟ್ ಕಂಟಕ ಎದುರಾಗಲಿದೆ.

ವಿಜಯ್​ ಮಲ್ಯಗೆ ಭಾರೀ ಮೊತ್ತದ ಸಾಲ ನೀಡಿರುವ ಭಾರತೀಯ ಸ್ಟೇಟ್​ ಬ್ಯಾಂಕ್​ ದಾಖಲಿಸಿರುವ ಪ್ರಕರಣದಲ್ಲಿ ಕೋರ್ಟ್​ ಆದೇಶ ಕಡೆಗಣಿಸಿ, 40 ದಶ ಲಕ್ಷ ಡಾಲರ್ ಹಣವನ್ನು ತಮ್ಮ ಮಕ್ಕಳ ಹೆಸರಿಗೆ ವರ್ಗಾಯಿಸಿದ್ದಾರೆ. ಈ ಪ್ರಕರಣದಲ್ಲಿ ವಿಜಯ್​ ಮಲ್ಯ ತಪ್ಪಿತಸ್ಥ ಎಂದು 2017ರಲ್ಲಿ ಸಾಬೀತಾಗಿತ್ತು.

2017ರ ಮೇ 9ರಂದು ನೀಡಲಾಗಿದ್ದ ನ್ಯಾಯಾಂಗ ನಿಂದನೆ ತೀರ್ಪಿನ ವಿರುದ್ಧ ಮಲ್ಯ ಸಲ್ಲಿಸಿದ್ದ ಪರಾಮರ್ಶನಾ ಅರ್ಜಿಯನ್ನು 2020ರ ಆಗಸ್ಟ್ 30ರಂದು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

14 ನಾನಾ ಬ್ಯಾಂಕ್‌ಗಳಿಗೆ ವಿಜಯ್‌ ಮಲ್ಯ 9 ಸಾವಿರ ಕೋಟಿ ರೂ.ಗಳ ಸಾಲ ಮರುಪಾವತಿಸದೇ ಲಂಡನ್​​ಗೆ ಪರಾರಿಯಾಗಿದ್ದಾರೆ. ವಿಜಯ್ ಮಲ್ಯ ಭಾರತದಲ್ಲಿ ಇಲ್ಲದಿದ್ದರೂ ಅವರ ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಅವರ ಶಿಕ್ಷೆಯ ಪ್ರಮಾಣ ಪ್ರಕಟಿಸಲು ಯಾವುದೇ ಅಡ್ಡಿಯಿಲ್ಲ ಎಂದು ನ್ಯಾಯಮೂರ್ತಿಗಳಾದ ಉದಯ್ ಯು ಲಲಿತ್, ಎಸ್. ರವೀಂದ್ರ ಭಟ್ ಮತ್ತು ಬೇಲಾ ಎಂ ತ್ರಿವೇದಿ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.

Published On - 7:17 pm, Sat, 9 July 22