ಸಂಸತ್ತಿನಲ್ಲಿ ಯಾವ ಕಾಯ್ದೆಯ ಬಗ್ಗೆಯೂ ಗುಣಮಟ್ಟದ ಚರ್ಚೆ ನಡೆಯುತ್ತಿಲ್ಲ, ಇದು ವಿಷಾದನೀಯ: ಸಿಜೆಐ ಎನ್​ ವಿ ರಮಣ

| Updated By: Lakshmi Hegde

Updated on: Aug 15, 2021 | 3:26 PM

ಸಂಸತ್ತಿನಲ್ಲಿ ಯಾವುದೇ ಮಸೂದೆಯನ್ನು ಮಂಡಿಸಿ, ಅದನ್ನು ಕಾಯ್ದೆಯನ್ನಾಗಿ ರೂಪಿಸುವ ಸಂದರ್ಭದಲ್ಲಿ ಅದಕ್ಕೆ ಸಂಬಂಧಿಸಿದಂತೆ ಆಳವಾಗಿ ಚರ್ಚೆ ನಡೆಯುವುದಿಲ್ಲ. ಆ ಚರ್ಚೆಯಲ್ಲಿ ಗುಣಮಟ್ಟದ ಕೊರತೆ ಎದ್ದು ಕಾಣುತ್ತದೆ ಎಂದು ಎನ್​.ವಿ.ರಮಣ ಹೇಳಿದ್ದಾರೆ.

ಸಂಸತ್ತಿನಲ್ಲಿ ಯಾವ ಕಾಯ್ದೆಯ ಬಗ್ಗೆಯೂ ಗುಣಮಟ್ಟದ ಚರ್ಚೆ ನಡೆಯುತ್ತಿಲ್ಲ, ಇದು ವಿಷಾದನೀಯ: ಸಿಜೆಐ ಎನ್​ ವಿ ರಮಣ
ಎನ್.ವಿ.ರಮಣ
Follow us on

ಇತ್ತೀಚೆಗಷ್ಟೇ ಸಿಬಿಐ ಮತ್ತು ಐಬಿಯಂಥ ತನಿಖಾ ಸಂಸ್ಥೆಗಳ ವಿರುದ್ಧ ಅಸಮಾಧನ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್ (Supremecourt) ಮುಖ್ಯ ನ್ಯಾಯಮೂರ್ತಿ (CJI) ಎನ್​. ವಿ.ರಮಣ (NV Ramana)ಇದೀಗ ದೇಶದ ಸಂಸತ್ತಿ (Parliament)ನ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಸಂಸತ್ತಿನಲ್ಲಿ ಯಾವುದೇ ವಿಚಾರದ ಬಗ್ಗೆ ಗುಣಮಟ್ಟದ, ಆರೋಗ್ಯಕರ, ಆಳವಾದ ಚರ್ಚೆಯಾಗುವುದಿಲ್ಲ. ಇದು ನಿಜಕ್ಕೂ ವಿಷಾದನೀಯ ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಯಾವುದೇ ಮಸೂದೆಯನ್ನು ಮಂಡಿಸಿ, ಅದನ್ನು ಕಾಯ್ದೆಯನ್ನಾಗಿ ರೂಪಿಸುವ ಸಂದರ್ಭದಲ್ಲಿ ಅದಕ್ಕೆ ಸಂಬಂಧಿಸಿದಂತೆ ಆಳವಾಗಿ ಚರ್ಚೆ ನಡೆಯುವುದಿಲ್ಲ. ಆ ಚರ್ಚೆಯಲ್ಲಿ ಗುಣಮಟ್ಟದ ಕೊರತೆ ಎದ್ದು ಕಾಣುತ್ತದೆ. ಹೀಗೆ ಸೂಕ್ತ ಚರ್ಚೆಯಿಲ್ಲದೆ ರೂಪುಗೊಳ್ಳುವ ಕಾನೂನುಗಳು ಮುಂದೆ ತೊಡಕುಂಟು ಮಾಡುತ್ತವೆ. ಹಲವು ರೀತಿಯ ವ್ಯಾಜ್ಯಗಳಿಗೆ ಕಾರಣವಾಗುತ್ತವೆ. ಆ ಕಾನೂನಿನ ಹಿಂದಿನ ಉದ್ದೇಶ ಮತ್ತು ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ನ್ಯಾಯಾಲಯಗಳಿಗೂ ಕಷ್ಟವಾಗುತ್ತದೆ ಎಂದು ಎನ್​.ವಿ.ರಮಣ ಹೇಳಿದ್ದಾರೆ.

ಈಗೀಗ ಹಲವು ಕಾನೂನುಗಳಲ್ಲಿ ಸ್ಪಷ್ಟತೆಯೇ ಇಲ್ಲದಂತಾಗಿದೆ. ಯಾವ ಉದ್ದೇಶಕ್ಕಾಗಿ ಕಾಯ್ದೆಗಳನ್ನು ಮಾಡಲಾಗಿದೆ ಎಂಬುದೇ ಅರ್ಥವಾಗುತ್ತಿಲ್ಲ. ಇದೇ ಕಾರಣದಿಂದ ಸಾಕಷ್ಟು ಅನನುಕೂಲತೆಗಳು ಆಗುತ್ತಿವೆ. ಹೆಚ್ಚೆಚ್ಚು ಮೊಕದ್ದಮೆಗಳನ್ನು ಹೂಡಲಾಗುತ್ತಿದೆ. ಸಾರ್ವಜನಿಕರಿಗೆ ತುಂಬ ತೊಂದರೆಯಾಗುತ್ತಿದೆ. ಯಾವುದೇ ಬಿಲ್​​ನ್ನು ಕಾಯ್ದೆಯಾಗಿಸುವಾಗ ಅದರ ಆಳವಾದ ಚರ್ಚೆಯಾಗಲೇಬೇಕು. ಆದರೆ ಸದನದಲ್ಲಿ ನುರಿತ, ವೃತ್ತಿಪರ ವಕೀಲರು ಇಲ್ಲದೆ ಇರುವುದರಿಂದ ಅದ್ಯಾವುದೂ ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟ ಎನ್​.ವಿ.ರಮಣ, ಕಾನೂನುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮತ್ತು ಸಂಸತ್ತಿನಲ್ಲಿ ಶಾಸನಗಳ ವಿಸ್ತೃತ ಚರ್ಚೆಯಾಗುವಂತೆ ನೋಡಿಕೊಳ್ಳಲು ವಕೀಲರ ಸಮುದಾಯ ಮುಂದಾಗಬೇಕು ಎಂದೂ ಹೇಳಿದರು.

ಇದನ್ನೂ ಓದಿ:ನಿಮ್ಮ ಸ್ಮಾರ್ಟ್​ಫೋನ್ ಡಿಸ್​ ಪ್ಲೇಯಲ್ಲಿ ಎರಡೆರಡು ಆ್ಯಪ್ ಬಳಸಿ: ಮಾಡಬೇಕಾದ್ದು ಇಷ್ಟೆ!

ಅಕ್ರಮ ವಲಸಿಗರು ಬೇಕೆಂದೇ ಸಣ್ಣಪುಟ್ಟ ಕೇಸ್ ಹಾಕಿಸಿಕೊಳ್ತಾರೆ; ವಲಸಿಗರ ಅಕ್ರಮದ ಬಗ್ಗೆ ಆರಗ ಜ್ಞಾನೇಂದ್ರ ಹೇಳಿಕೆ

(Supremecourt CJI NV Ramana criticised the lack of quality debates in Parliament today)

Published On - 3:06 pm, Sun, 15 August 21