ಸೂರತ್ನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೊಂದು ಉದ್ಘಾಟನೆಗೊಂಡ ಮರುದಿನವೇ ಬಾಗಿಲು ಮುಚ್ಚಿದೆ. ಇತ್ತೀಚಿನ ದಿನಗಳಲ್ಲಿ ನಕಲಿ ವೈದ್ಯರ ಸಂಖ್ಯೆ ಹೆಚ್ಚಾಗಿದೆ. ಯಾವುದೇ ಪದವಿ ಇಲ್ಲದ ಐವರು ಜನಸೇವೆಯ ಹೆಸರಿನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ತೆರೆದಿದ್ದರು. ಆಸ್ಪತ್ರೆ ಉದ್ಘಾಟನೆಗೆ ಮುದ್ರಿತವಾಗಿದ್ದ ಆಮಂತ್ರಣ ಪತ್ರಿಕೆಯಲ್ಲಿ ಸೂರತ್ ಪೊಲೀಸ್ ಉನ್ನತಾಧಿಕಾರಿಗಳು, ಪೊಲೀಸ್ ಕಮಿಷನರ್ ಮತ್ತು ಕಾರ್ಪೊರೇಷನ್ ಕಮಿಷನರ್ ಅವರ ಹೆಸರನ್ನೂ ಕೇಳದೆ ಮುದ್ರಿಸಲಾಗಿತ್ತು.
ಆಸ್ಪತ್ರೆಯ ಉದ್ಘಾಟನೆಗೆ ಯಾವುದೇ ಅಧಿಕಾರಿಗಳು ಹಾಜರಾಗದಿದ್ದರೂ, ಆಸ್ಪತ್ರೆಯ ಉದ್ಘಾಟನೆಯ ಮರುದಿನವೇ ಗುಜರಾತ್ ನ ಆರೋಗ್ಯ ಇಲಾಖೆ ಕ್ರಮ ಕೈಗೊಂಡು ಆಸ್ಪತ್ರೆಗೆ ಸೀಲ್ ಮಾಡಿದೆ. ನಕಲಿ ಪದವಿಗಳ ಹೆಸರಿನಲ್ಲಿ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ವಂಚಕರನ್ನು ಸೂರತ್ ಪೊಲೀಸರು ಬಂಧಿಸಿದ್ದಾರೆ.
ಐವರು ಆರೋಪಿಗಳ ಪೈಕಿ ಇಬ್ಬರ ನಕಲಿ ಪದವಿ ಬಹಿರಂಗಗೊಂಡ ನಂತರ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಉಳಿದ ಆರೋಪಿಗಳ ಪದವಿಯನ್ನು ತನಿಖೆ ನಡೆಸುತ್ತಿದ್ದಾರೆ. ಸೂರತ್‌ನ ಪಾಂಡೆಸರಾ ಪ್ರದೇಶದಲ್ಲಿ ಜನಸೇವಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಲಾಗಿತ್ತು. ಆಹ್ವಾನ ಪತ್ರಿಕೆಯಲ್ಲಿ ವೈದ್ಯರ ಹೆಸರನ್ನು ಬರೆಯಲಾಗಿದ್ದು, ಅದರಲ್ಲಿ ಒಬ್ಬ ವೈದ್ಯನ ಹೆಸರು ಬಬ್ಲು ರಾಮ್ ಆದರೆ ಶುಕ್ಲಾ ಎಂದು ತನ್ನನ್ನು ತಾನು ವೈದ್ಯ ಎಂದು ಕರೆದುಕೊಂಡಿದ್ದಾನೆ.
ಮತ್ತಷ್ಟು ಓದಿ: ಯೂಟ್ಯೂಬ್ ನೋಡಿ ಆಪರೇಷನ್ ಮಾಡಿದ ನಕಲಿ ವೈದ್ಯ, ಬಾಲಕ ಸಾವು
ಸೂರತ್ ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗೆಹ್ಲೋಟ್, ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಕಮಿಷನರ್ ಶಾಲಿನಿ ಅಗರ್ವಾಲ್ ಮತ್ತು ಜಂಟಿ ಪೊಲೀಸ್ ಕಮಿಷನರ್ ರಾಘವೇಂದ್ರ ವತ್ಸ್ ಅವರ ಹೆಸರನ್ನು ಸಹ ಈ ಆಸ್ಪತ್ರೆಯ ಆಹ್ವಾನ ಪತ್ರಿಕೆಯಲ್ಲಿ ಕೇಳದೆಯೇ ಪ್ರಕಟಿಸಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ