Fact Check: ಮಹಾರಾಷ್ಟ್ರದಲ್ಲಿ ನಡೆದ ಕಾಂಗ್ರೆಸ್​ನ ಚುನಾವಣಾ ರ್ಯಾಲಿಯಲ್ಲಿ ಪಾಕಿಸ್ತಾನ ಧ್ವಜದ ಪ್ರದರ್ಶನ?

ಈ ವಿಡಿಯೋ ಮಹಾರಾಷ್ಟ್ರದ ಲಾತೂರ್‌ನಲ್ಲಿ ಈದ್-ಎ-ಮಿಲಾದ್ ಬೈಕ್ ಮೆರವಣಿಗೆಯದ್ದಾಗಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಅಭ್ಯರ್ಥಿಯ ಚುನಾವಣಾ ರ್ಯಾಲಿಗೂ ಈ ವಿಡಿಯೋಕ್ಕು ಯಾವುದೇ ಸಂಬಂಧವಿಲ್ಲ.

Fact Check: ಮಹಾರಾಷ್ಟ್ರದಲ್ಲಿ ನಡೆದ ಕಾಂಗ್ರೆಸ್​ನ ಚುನಾವಣಾ ರ್ಯಾಲಿಯಲ್ಲಿ ಪಾಕಿಸ್ತಾನ ಧ್ವಜದ ಪ್ರದರ್ಶನ?
ವೈರಲ್​​ ವಿಡಿಯೋ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 19, 2024 | 2:22 PM

ನವೆಂಬರ್ 20 ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮತದಾನ ಮಾಡಲು ತಯಾರಿ ನಡೆಸುತ್ತಿರುವಾಗ, ಕಾಂಗ್ರೆಸ್ ಪಕ್ಷದ ರ್ಯಾಲಿಯನ್ನು ತೋರಿಸುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಕ್ಲಿಪ್‌ನಲ್ಲಿ, ಬೈಕ್ ಮತ್ತು ಕಾರುಗಳಲ್ಲಿ ಜನರ ದೊಡ್ಡ ಗುಂಪನ್ನು ಕಾಣಬಹುದು. ಇದು ಅಕೋಲಾ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಜಿದ್ ಖಾನ್ ಅವರ ಚುನಾವಣಾ ರ್ಯಾಲಿ, ಇದರಲ್ಲಿ ಪಾಕಿಸ್ತಾನ ಧ್ವಜ ಪ್ರದರ್ಶಿಸಲಾಗಿದೆ ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಅಪ್ಲೋಡ್ ಮಾಡಿಕೊಂಡು, ‘‘ಇದು ಮಹಾರಾಷ್ಟ್ರದ ಅಕೋಲದಲ್ಲಿ ನಡೆದ ಕಾಂಗ್ರೆಸ್ MLA ಅಭ್ಯರ್ಥಿ ಸಾಜೀದ್ ಖಾನ್ ಪರವಾಗಿ ನಡೆಸಿದ ಎಲೆಕ್ಷನ್ ರ್ಯಾಲಿ. ಇಲ್ಲಿ ಇರಾನ್, ಪ್ಯಾಲೆಸ್ಟೈನ್, ಪಾಕಿಸ್ತಾನ್ ಹೀಗೆ ಹಲವಾರು ಬಾವುಟಗಳ ಆರ್ಭಟ ಇದೆ. ಇದರಲ್ಲಿ ಭಾರತದ ಬಾವುಟ ಹುಡುಕಿ ತೋರಿಸಿದವರಿಗೆ ಬಹುಮಾನ ಕೊಡಲಾಗುವುದು’’ ಎಂದು ಬರೆದುಕೊಂಡಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವಿಡಿಯೋ ಮಹಾರಾಷ್ಟ್ರದ ಲಾತೂರ್‌ನಲ್ಲಿ ಈದ್-ಎ-ಮಿಲಾದ್ ಬೈಕ್ ಮೆರವಣಿಗೆಯದ್ದಾಗಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಅಭ್ಯರ್ಥಿಯ ಚುನಾವಣಾ ರ್ಯಾಲಿಗೂ ಈ ವಿಡಿಯೋಕ್ಕು ಯಾವುದೇ ಸಂಬಂಧವಿಲ್ಲ.

ನಿಜಾಂಶ ಕಂಡುಹಿಡಿಯಲು ನಾವು ವೈರಲ್ ವಿಡಿಯೋದ ಕೀಫ್ರೇಮ್‌ಗಳನ್ನು ಹಿಮ್ಮುಖವಾಗಿ ಹುಡುಕಿದ್ದೇವೆ. ಆಗ ಅಕ್ಟೋಬರ್ 2024 ರಲ್ಲಿ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವುದು ನಮಗೆ ಕಂಡುಬಂದಿದೆ. ಅದರ ಶೀರ್ಷಿಕೆಯ ಪ್ರಕಾರ, ವಿಡಿಯೋ ಮಹಾರಾಷ್ಟ್ರದ ಲಾತೂರ್‌ನಲ್ಲಿ ನಡೆದ ಈದ್-ಇ-ಮಿಲಾದ್ ಬೈಕ್ ರ್ಯಾಲಿಯದ್ದಾಗಿದೆ.

ಈ ಮಾಹಿತಿಯ ಆಧಾರದ ಮೇಲೆ ನಾವು ಲಾತೂರ್‌ನಲ್ಲಿ ನಡೆದ ಈದ್-ಎ-ಮಿಲಾದ್ ರ್ಯಾಲಿಯಿಂದ ಹಲವಾರು ಇತರ ವಿಡಿಯೋಗಳನ್ನು ಕಂಡುಕೊಂಡಿದ್ದೇವೆ. ಸೆಪ್ಟೆಂಬರ್ 19, 2024 ರಂದು ಲಾತೂರ್ ನ್ಯೂಸ್ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ, ವೈರಲ್ ವೀಡಿಯೊವನ್ನು ಹೋಲುವ ದೃಶ್ಯಗಳನ್ನು ಕಾಣಬಹುದು.

ವಿಡಿಯೋ ಕುರಿತು ಹೆಚ್ಚಿನ ಮಾಹಿತಿಗಾಗಿ, ಖಾಸಗಿ ವೆಬ್​ಸೈಟ್ ಒಂದು ಅಕೋಲಾ ಪಶ್ಚಿಮದ ಕಾಂಗ್ರೆಸ್ ಅಭ್ಯರ್ಥಿ ಸಾಜಿದ್ ಖಾನ್ ಪಠಾಣ್ ಅವರನ್ನು ಸಂಪರ್ಕಿಸಿದೆ. ವೈರಲ್ ವಿಡಿಯೋ ಅವರ ರ್ಯಾಲಿಯದ್ದಲ್ಲ ಅಥವಾ ಅಂತಹ ಯಾವುದೇ ರ್ಯಾಲಿಯನ್ನು ಅವರು ಆಮಡಿಲ್ಲ ಎಂದು ಸಾಜಿದ್ ಖಾನ್ ತಿಳಿಸಿದ್ದಾರೆ.

ಕೆಲ ಬಳಕೆದಾರರು ಕೆಲವು ತಿಂಗಳ ಹಿಂದೆ ಹರ್ಯಾಣದ ಮೇವಾತ್‌ನಲ್ಲಿ ನಡೆದ ಕಾಂಗ್ರೆಸ್ ರ್ಯಾಲಿಗೆ ಲಿಂಕ್ ಮಾಡಿ ಇದೇ ವೈರಲ್ ಕ್ಲಿಪ್ ಅನ್ನು ಹಂಚಿಕೊಂಡಿದ್ದರು. ಅಕೋಲಾ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಜಿದ್ ಖಾನ್ ಪಠಾಣ್ ಅವರ ಚುನಾವಣಾ ಪ್ರಚಾರದ ವಿಡಿಯೋಗಳನ್ನು ಕೂಡ ನಾವು ನೋಡಿದ್ದೇವೆ. ಅದು ಈ ವೈರಲ್ ಕ್ಲಿಪ್‌ಗೆ ಯಾವುದೇ ಹೋಲಿಕೆಯನ್ನು ಹೊಂದಿಲ್ಲ.

ಆದರೆ, ವಿಡಿಯೋ ಉತ್ತಮ ಕ್ವಾಲಿಟಿಯಲ್ಲಿ ಇಲ್ಲದ ಕಾರಣ ರ್ಯಾಲಿಯಲ್ಲಿ ಕಂಡುಬರುವ ಧ್ವಜಗಳು ಪ್ಯಾಲೆಸ್ಟೈನ್, ಪಾಕಿಸ್ತಾನ, ಇರಾನ್, ಇರಾಕ್, ISIS ಅಥವಾ ಹೆಜ್ಬುಲ್ಲಾಗೆ ಸಂಬಂಧಿಸಿವೆಯೇ ಎಂಬುದನ್ನು ಪರಿಶೀಲಿಸಲು ನಮಗೆ ಸಾಧ್ಯವಾಗಲಿಲ್ಲ. ಆದರೆ, ಲಾತೂರ್‌ನಲ್ಲಿ ನಡೆದ ಈದ್-ಎ-ಮಿಲಾದ್ ರ್ಯಾಲಿಯ ವಿಡಿಯೋ ಕಾಂಗ್ರೆಸ್ ಅಭ್ಯರ್ಥಿಯ ಚುನಾವಣಾ ರ್ಯಾಲಿ ಎಂದು ಶೇರ್ ಆಗುತ್ತಿರುವುದು ಖಚಿತವಾಗಿದೆ.

ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಂಪುಟ ಪುನಾರಚನೆ ಬಗ್ಗೆ ಗೊತ್ತಿಲ್ಲ, ಸಿಎಂರನ್ನು ಕೇಳಬೇಕು: ಹರಿಪ್ರಸಾದ್
ಸಂಪುಟ ಪುನಾರಚನೆ ಬಗ್ಗೆ ಗೊತ್ತಿಲ್ಲ, ಸಿಎಂರನ್ನು ಕೇಳಬೇಕು: ಹರಿಪ್ರಸಾದ್
ಮುಡಾ ಹಿಂದಿನ ಆಯುಕ್ತ ಡಿಬಿ ನಟೇಶ್ ಮುಡಾ ಹಿಂದಿನ ಆಯುಕ್ತ ಡಿಬಿ ನಟೇಶ್
ಮುಡಾ ಹಿಂದಿನ ಆಯುಕ್ತ ಡಿಬಿ ನಟೇಶ್ ಮುಡಾ ಹಿಂದಿನ ಆಯುಕ್ತ ಡಿಬಿ ನಟೇಶ್
ಪಿಎಂ ಮೋದಿ ಹಂಚಿಕೊಂಡ ಬ್ರೆಜಿಲ್​ನ ಜಿ-20 ಶೃಂಗಸಭೆಯ ಮೊದಲ ದಿನದ ಝಲಕ್
ಪಿಎಂ ಮೋದಿ ಹಂಚಿಕೊಂಡ ಬ್ರೆಜಿಲ್​ನ ಜಿ-20 ಶೃಂಗಸಭೆಯ ಮೊದಲ ದಿನದ ಝಲಕ್
ಕೇವಲ ಒಂದು ಆರೋಪದಲ್ಲಿ ಬಿಜೆಪಿಗೆ ಕ್ಲೀನ್ ಚಿಟ್ ಸಿಕ್ಕಿದೆ: ಪರಮೇಶ್ವರ್
ಕೇವಲ ಒಂದು ಆರೋಪದಲ್ಲಿ ಬಿಜೆಪಿಗೆ ಕ್ಲೀನ್ ಚಿಟ್ ಸಿಕ್ಕಿದೆ: ಪರಮೇಶ್ವರ್
ಉಡುಪಿ ಜಿಲ್ಲೆ ಪೀತೆಬೈಲ್ ಅರಣ್ಯಪ್ರದೇಶದಲ್ಲಿ ನಕ್ಸಲರೊಂದಿಗೆ ಗುಂಡಿನ ಚಕಮಕಿ
ಉಡುಪಿ ಜಿಲ್ಲೆ ಪೀತೆಬೈಲ್ ಅರಣ್ಯಪ್ರದೇಶದಲ್ಲಿ ನಕ್ಸಲರೊಂದಿಗೆ ಗುಂಡಿನ ಚಕಮಕಿ
ಇಟಲಿ ಪ್ರಧಾನಿ ಮೆಲೋನಿಯನ್ನು ಭೇಟಿಯಾದ ಪ್ರಧಾನಿ ಮೋದಿ
ಇಟಲಿ ಪ್ರಧಾನಿ ಮೆಲೋನಿಯನ್ನು ಭೇಟಿಯಾದ ಪ್ರಧಾನಿ ಮೋದಿ
ಸಚಿವ ಸ್ಥಾನಕ್ಕೆ ಬೇಡಿಕೆಯಲ್ಲ, ನನ್ನ ಹಕ್ಕು ಎಂದ ಶಾಸಕ ನರೇಂದ್ರಸ್ವಾಮಿ
ಸಚಿವ ಸ್ಥಾನಕ್ಕೆ ಬೇಡಿಕೆಯಲ್ಲ, ನನ್ನ ಹಕ್ಕು ಎಂದ ಶಾಸಕ ನರೇಂದ್ರಸ್ವಾಮಿ
‘ಹೆಂಗ್ ಮಾತಾಡ್ತಾಳೋ ಯಪ್ಪಾ’; ಶೋಭಾ ಕೂಗಾಟ ನೋಡಿ ಹನುಮಂತ ಸೈಲೆಂಟ್
‘ಹೆಂಗ್ ಮಾತಾಡ್ತಾಳೋ ಯಪ್ಪಾ’; ಶೋಭಾ ಕೂಗಾಟ ನೋಡಿ ಹನುಮಂತ ಸೈಲೆಂಟ್
ಪತ್ನಿ ಗರ್ಭವತಿಯಾಗಿದ್ದಾಗ ಮನೆಗೆ ಅಡಿಪಾಯ ಹಾಕಬಹುದಾ? ವಿಡಿಯೋ ನೋಡಿ
ಪತ್ನಿ ಗರ್ಭವತಿಯಾಗಿದ್ದಾಗ ಮನೆಗೆ ಅಡಿಪಾಯ ಹಾಕಬಹುದಾ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ಆರ್ಥಿಕ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ಆರ್ಥಿಕ ಯೋಗವಿದೆ