Viral: ಧನ ಸಹಾಯ ಮಾಡಲು ಬಯಸುವವರು ದಯವಿಟ್ಟು ನನ್ನೊಂದಿಗೆ ಮಾತನಾಡಿ, ಬೆಂಗಳೂರು ಆಟೋ ಚಾಲಕನ ಪೋಸ್ಟ್
ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ರೆಡ್ಡಿಡ್‌ನಲ್ಲಿ ಕೆಲವೊಂದು ಇಂಟರೆಸ್ಟಿಂಗ್ ಸ್ಟೋರಿಗಳು ಹರಿದಾಡುತ್ತಿರುತ್ತವೆ. ಇದೀಗ ಬೆಂಗಳೂರಿನ ಆಟೋ ಚಾಲಕರೊಬ್ಬರಿಗೆ ಸಂಬಂಧಿಸಿದ ಸ್ಟೋರಿಯೊಂದು ವೈರಲ್ ಆಗಿದೆ. ಸ್ಟಾರ್ಟ್‌ಅಪ್ ಬ್ಯುಸಿನೆಸ್‌ನಲ್ಲಿ ಆಸಕ್ತಿ ಹೊಂದಿರುವ ಅವರು ತಮ್ಮ ಸೀಟ್ ಹಿಂಬದಿಯಲ್ಲಿ “ನನ್ನ ಸ್ಟಾರ್ಟ್‌ಅಪ್ ಉದ್ಯಮಕ್ಕೆ ಧನ ಸಹಾಯ ಮಾಡಲು ಇಚ್ಛಿಸುವವರು ದಯವಿಟ್ಟು ನಮ್ನೊಂದಿಗೆ ಮಾತಾಡಿ” ಎಂಬ ನೋಟೀಸ್ ಅಂಟಿಸಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಯಾವುದೇ ಸ್ವಂತ ಉದ್ದಿಮೆ ಅಥವಾ ಸ್ಟಾರ್ಟ್‌ಅಪ್ ಉದ್ಯಮವನ್ನು ಪ್ರಾರಂಭಿಸಲು ಇಂತಿಷ್ಟು ಹಣ ಅಥವಾ ಬಂಡವಾಳ ಹೂಡಿಕೆಯ ಅಗತ್ಯವಿರುತ್ತದೆ. ಅದರಲ್ಲಿ ಕೆಲವರು ಸ್ವಯಂ ಹೂಡಿಕೆ ಮಾಡಿದರೆ ಇನ್ನೂ ಕೆಲವರು ಸಾರ್ವಜನಿಕ ಮತ್ತು ಖಾಸಗಿ ವಲಯ ಬ್ಯಾಂಕುಗಳಿಂದ ಸಾಲವನ್ನು ಪಡೆಯುತ್ತಾರೆ. ಆದ್ರೆ ಇಲ್ಲೊಬ್ಬರು ಆಟೋ ಚಾಲಕ ತನ್ನ ಸ್ಟಾರ್ಟ್‌ಅಪ್ ಉದ್ಯಮಕ್ಕೆ ಫಂಡ್ ರೈಸ್ ಮಾಡಲು ತಮ್ಮ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಮೊರೆ ಹೋಗಿದ್ದಾರೆ. ಹೌದು “ನನ್ನ ಸ್ಟಾರ್ಟ್‌ಅಪ್ ಉದ್ಯಮಕ್ಕೆ ಧನ ಸಹಾಯ ಮಾಡಲು ಇಚ್ಛಿಸುವವರು ದಯವಿಟ್ಟು ನಮ್ನೊಂದಿಗೆ ಮಾತಾಡಿ” ಎಂಬ ನೋಟೀಸ್ ಅನ್ನು ಆಟೋದಲ್ಲಿ ಅಂಟಿಸುವ ಮೂಲಕ ಪ್ರಯಾಣಿಕರಿಂದ ಹಣ ಸಂಗ್ರಹಿಸಲು ಹೊಸ ಐಡಿಯಾವನ್ನು ಕಂಡು ಕೊಂಡಿದ್ದಾರೆ. ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ವಿಶೇಷವಾಗಿ ರೆಡ್ಡಿಡ್‌ನಲ್ಲಿ ಕುತೂಹಲಕಾರಿ ವಿಷಯಗಳಿಗೆ ಸಂಬಂಧಿಸಿದ ಪೋಸ್ಟ್‌ಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ನಮ್ಮ ಬೆಂಗಳೂರಿನ ಆಟೊ ಚಾಲಕರೊಬ್ಬರ ಪೋಸ್ಟ್ ಒಂದು ಸಖತ್ ವೈರಲ್ ಆಗಿದೆ. ಅವರು ತಮ್ಮ ಸ್ಟಾರ್ಟ್‌ಅಪ್‌ಗೆ ನಿಧಿ ಸಂಗ್ರಹಿಸಿಲು ಇವರ ವಿನೂತನ ಐಡಿಯಾವನ್ನು ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
Yet another Peak Bengaluru moment! byu/EconomyUpbeat6876 inBengaluru
ಈ ಕುರಿತ ಪೋಸ್ಟ್ ಒಂದನ್ನು r/Bengaluru ಹೆಸರಿನ ರೆಡ್ಡಿಡ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ಫೋಟೋದಲ್ಲಿ “ಹಾಯ್ ಪ್ರಯಾಣಿಕರೇ ನನ್ನ ಹೆಸರು ಸ್ಯಾಮ್ಯುಯೆಲ್ ಕ್ರಿಸ್ಟಿ. ನಾನು ಪಧವಿದರನಾಗಿದ್ದು, ನನ್ನ ಸ್ಟಾರ್ಟ್‌ಅಪ್ ವ್ಯವಹಾರಕ್ಕೆ ನಿಧಿ ಸಂಗ್ರಹಿಸಲು ಬಯಸುತ್ತಿದ್ದೇನೆ. ಧನ ಸಹಾಯ ಮಾಡಲು ನಿಮಗೆ ಆಸಕ್ತಿ ಇದ್ದರೆ ದಯವಿಟ್ಟು ನನ್ನೊಂದಿಗೆ ಮಾತನಾಡಿ” ಎಂಬ ನೋಟೀಸ್ ಒಂದನ್ನು ಆಟೋದಲ್ಲಿ ಅಂಟಿಸಿರುವಂತಹ ದೃಶ್ಯವನನು ಕಾಣಬಹುದು.
ಇದನ್ನೂ ಓದಿ: ಕುಡಿದು ವಾಹನ ಚಲಾಯಿಸುವವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿಯಲು ಪೊಲೀಸರ ವಿಶೇಷ ತಂತ್ರ
5 ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಮ್ಮ ಈ ಪ್ರಯತ್ನಕ್ಕೆ ಯಶಸ್ವಿಯಾಗಲಿ ಎಂದು ನಾನು ಆಶಿಸುತ್ತೇನೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅವರು ಸ್ಟಾರ್ಟ್‌ಅಪ್ ಉದ್ಯಮವನ್ನು ಪ್ರಾರಂಭಿಸಲು ನಾವು ಸಹಾಯ ಮಾಡುತ್ತೇವೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ