Andhra Bus Tragedy: ಬೆಂಕಿಯ ಜ್ವಾಲೆಯಿಂದಾಗಿ ಎಚ್ಚರವಾಯ್ತು, ವೇಗವಾಗಿ ಹರಡ್ತು, ವೋಲ್ವೊ ಬಸ್ಸಿನಲ್ಲಿದ್ದವರು ಹೇಳಿದ್ದೇನು?
ಹೈದರಾಬಾದ್ನಿಂದ ಬೆಂಗಳೂರಿಗೆ ಹೊರಟಿದ್ದ ಕಾವೇರಿ ಟ್ರಾವೆಲ್ಸ್ನ ವೋಲ್ವೊ ಬಸ್(Volvo Bus) ಅಪಘಾತದ ಬಳಿಕ ಬೆಂಕಿಗಾಹುತಿಯಾಗಿದೆ. ಅದರಲ್ಲಿದ್ದ 10ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗೆಯೇ ಬಸ್ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಬಸ್ ಒಳಗೆ ಏನೇನಾಯ್ತು ಎಂದು ವೋಲ್ವೊ ಬಸ್ಸಿನೊಳಗಿದ್ದ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ. ಎನ್ಡಿಟಿವಿ Iಈ ಕುರಿತು ವರದಿ ಮಾಡಿದೆ, ಹರಿಕಾ ಎಂಬುವವರು ಮಾತನಾಡಿ, ನಿದ್ರಿಸುತ್ತಿದ್ದಾಗ ಏಕಾಏಕಿ ಬಸ್ಗೆ ಬೆಂಕಿ ಹೊತ್ತಿಕೊಂಡಿತ್ತು.

ಕರ್ನೂಲ್, ಅಕ್ಟೋಬರ್ 24: ಹೈದರಾಬಾದ್ನಿಂದ ಬೆಂಗಳೂರಿಗೆ ಹೊರಟಿದ್ದ ಕಾವೇರಿ ಟ್ರಾವೆಲ್ಸ್ನ ವೋಲ್ವೊ ಬಸ್(Volvo Bus) ಅಪಘಾತದ ಬಳಿಕ ಬೆಂಕಿಗಾಹುತಿಯಾಗಿದೆ. ಅದರಲ್ಲಿದ್ದ 10ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗೆಯೇ ಬಸ್ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಬಸ್ ಒಳಗೆ ಏನೇನಾಯ್ತು ಎಂದು ವೋಲ್ವೊ ಬಸ್ಸಿನೊಳಗಿದ್ದ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ. ಎನ್ಡಿಟಿವಿ Iಈ ಕುರಿತು ವರದಿ ಮಾಡಿದೆ, ಹರಿಕಾ ಎಂಬುವವರು ಮಾತನಾಡಿ, ನಿದ್ರಿಸುತ್ತಿದ್ದಾಗ ಏಕಾಏಕಿ ಬಸ್ಗೆ ಬೆಂಕಿ ಹೊತ್ತಿಕೊಂಡಿತ್ತು.
ಬೆಂಕಿಯ ಜ್ವಾಲೆಯಿಂದಾಗಿ ಎಚ್ಚರವಾಗಿತ್ತು. ಏನು ನಡೆಯುತ್ತಿದೆ ಎಂದು ನೋಡುವಷ್ಟರಲ್ಲಿ ವೇಗವಾಗಿ ಬೆಂಕಿ ಹೊತ್ತಿಕೊಂಡಿತ್ತು. ಹಾಗೆಯೇ ತಾನು ಬಸ್ಸಿನ ಹಿಂಭಾಗದ ಗಾಜು ಒಡೆದು ಕೆಳಗೆ ಹಾರಿದೆ ಎಂದು ಹರಿಕಾ ಹೇಳಿಕೊಂಡಿದ್ದಾರೆ.
ತುರ್ತಾಗಿ ನಿರ್ಧಾರ ತೆಗೆದುಕೊಂಡ ಪರಿಣಾಮ ಬಸ್ಗೆ ಸಂಪೂರ್ಣವಾಗಿ ಬೆಂಕಿ ಹೊತ್ತಿಕೊಳ್ಳುವಷ್ಟರಲ್ಲಿ ಆಕೆ ಕೆಳಗೆ ಹಾರಿದ್ದರು. ಈ ಘಟನೆ ಬೆಳಗಿನ ಜಾವ 3.30ರ ಸುಮಾರಿಗೆ ನಡೆದಿದೆ. ವೋಲ್ವೊ ಬಸ್ ಬೈಕ್ಗೆ ಡಿಕ್ಕಿ ಹೊಡೆದ ಬಳಿಕ ಸುಮಾರು 100 ಮೀಟರ್ಗಳಷ್ಟು ದೂರದವರೆಗೆ ಬೈಕ್ ಅನ್ನು ತಳ್ಳಿಕೊಂಡೇ ಹೋಗಿತ್ತು. ಇದರಿಂದಾಗಿ ಬಸ್ಗೆ ಬೆಂಕಿ ಹೊತ್ತಿಕೊಂಡಿತ್ತು.
ಮತ್ತಷ್ಟು ಓದಿ: Video: ಹೈದರಾಬಾದ್ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಬೈಕ್ಗೆ ಡಿಕ್ಕಿ, ಕ್ಷಣಾರ್ಧದಲ್ಲಿ ಹೊತ್ತಿ ಉರಿದ ವೋಲ್ವೊ ಬಸ್
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಉಲ್ಲಿಂದಕೊಂಡ ಬಳಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಬಸ್ ಬೆಂಕಿಗೆ ಆಹುತಿಯಾಯಿತು . ದೂರದ ಮಾರ್ಗಗಳಲ್ಲಿ ಸಂಚರಿಸುವ ಸ್ಲೀಪರ್ ಬಸ್‌ಗಳಲ್ಲಿ, ಗೌಪ್ಯತೆಯನ್ನು ಕಾಪಾಡಲು ಸ್ಲೀಪರ್ ಸೀಟುಗಳಿಗೆ ಪರದೆಗಳನ್ನು ಅಳವಡಿಸಲಾಗುತ್ತದೆ.
ಬಸ್‌ನಿಂದ ಓಡಿಹೋಗುವ ಪ್ರಯಾಣಿಕರಿಗೆ ಇತರ ಸೀಟುಗಳಲ್ಲಿ ಜನರು ಇದ್ದರೋ ಇಲ್ಲವೋ ಎಂದು ನೋಡುವುದು ಕಷ್ಟವಾಗಿತ್ತು. ಇದು ಸ್ಲೀಪರ್ ಬಸ್ ಆಗಿರುವುದರಿಂದ, ನಾವು ಹತ್ತಿ ಮಲಗಿದ್ದೆವು. ಪರದೆಗಳಿಂದಾಗಿ ಎಷ್ಟು ಜನ ಇದ್ದಾರೆ ಎಂಬುದು ತಿಳಿಯಲಿಲ್ಲ ಎಂದು ಹರಿಕಾ ಹೇಳಿದ್ದಾರೆ.
ಮತ್ತೊಬ್ಬ ಪ್ರಯಾಣಿಕ ಸೂರ್ಯ ಎಂಬುವವರು ಮಾತನಾಡಿ, ಬೆಳಗಿನ ಜಾವ 2.45 ರ ಸುಮಾರಿಗೆ ಘಟನೆ ನಡೆದಿದೆ. ಒಂದು ಬೈಕ್ ಬಂತು, ಏನೋ ಆಯ್ತು. ನಮಗೆ ಸ್ಪಷ್ಟತೆ ಇಲ್ಲ. ಬೈಕ್ ಬಸ್ಸಿನ ಕೆಳಗೆ ಹೋಯಿತು, ಕಿಡಿಗಳು ಬರಲು ಪ್ರಾರಂಭಿಸಿದವು, ಮತ್ತು ನಂತರ ಬೆಂಕಿ ಹೊತ್ತಿಕೊಂಡಿತು. ಎಚ್ಚರವಿದ್ದವರು ಕೂಡಲೇ ಇಳಿದಿದ್ದಾರೆ. ಕೆಲವು ಶವಗಳು ಗುರುತು ಹಿಡಿಯಲಾಗದಷ್ಟು ಸಂಪೂರ್ಣವಾಗಿ ಸುಟ್ಟುಹೋಗಿವೆ .
ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50 ಸಾವಿರ ರೂಪಾಯಿಗಳ ಆರ್ಥಿಕ ನೆರವು ಘೋಷಿಸಿದ್ದಾರೆ. ಬೆಂಗಳೂರಿನಲ್ಲಿರುವ ಕಾವೇರಿ ಟ್ರಾವೆಲ್ಸ್ ಬಂದ್ ಮಾಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:09 am, Fri, 24 October 25




