
ಛತ್ತರ್ಪುರ, ಆಗಸ್ಟ್ 28: ಛತ್ತರ್ಪುರ ಶಾಸಕ(MLA)ರೊಬ್ಬರ ಮಗನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕೆಲಸದಾಕೆಯ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಮುಖದ ಮೇಲೆ ನಾಯಿ ಕಚ್ಚಿದ ಗುರುತುಗಳು ಕೂಡ ಪತ್ತೆಯಾಗಿವೆ. ಸಪ್ನಾ ರೈಕ್ವಾರ್ ಎಂದು ಗುರುತಿಸಲಾದ ಕೆಲಸದಾಕೆ ಹಲವಾರು ವರ್ಷಗಳಿಂದ ಆ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು.
ಸೋಮವಾರ ಬೆಳಗ್ಗೆ ಛತ್ತರ್‌ಪುರದಲ್ಲಿರುವ ಖರ್ಗಪುರ ಶಾಸಕ ಚಂದಾ ಗೌರ್ ಅವರ ಪುತ್ರ ಅಭಿಯಂತ್ ಗೌರ್ ಅವರ ಮನೆಯಲ್ಲಿ ಆಕೆ ಶವವಾಗಿ ಪತ್ತೆಯಾಗಿದ್ದಾರೆ. ಮಾಹಿತಿಯ ಪ್ರಕಾರ, ಬೆಳಗ್ಗೆ 5.20 ರ ಸುಮಾರಿಗೆ ಮನೆಯ ಹಿಂಭಾಗದಲ್ಲಿ ಆಕೆಯ ಶವ ನೇತಾಡುತ್ತಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ. ಕುಟುಂಬ ಸದಸ್ಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು ತನಿಖೆ ಆರಂಭಿಸಿದ್ದಾರೆ.
ಪೊಲೀಸರು ಮನೆಯಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಯುವತಿ ದುಪಟ್ಟಾದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.ಮೃತರ ಮುಖದಲ್ಲಿ ಗಾಯದ ಗುರುತುಗಳನ್ನು ಅಧಿಕಾರಿಗಳು ಗಮನಿಸಿದರು. ನಂತರ ಪೊಲೀಸರು ಈ ಗುರುತುಗಳು ನಾಯಿ ಕಚ್ಚುವಿಕೆಯಿಂದ ಉಂಟಾಗಿವೆ ಎಂದು ಸ್ಪಷ್ಟಪಡಿಸಿದರು.
ಮತ್ತಷ್ಟು ಓದಿ:ಸತ್ತ ಅಮ್ಮ ಕನಸಿನಲ್ಲಿ ಬಂದು ಕರೆದಳೆಂದು ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಬಾಲಕ!
ಸಾವಿಗೆ ನಿಖರ ಕಾರಣವೇನೆಂಬುದನ್ನು ತಿಳಿಯಲು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆ ನಡೆದ ಸಮಯದಲ್ಲಿ ಅಭುಯಂತ್ ಗೌರ್ ಅವರ ಪತ್ನಿ ಹಾಗೂ ಮಗ ಮನೆಯಲ್ಲಿದ್ದರು.
ಪ್ರಕರಣವನ್ನು ಎಲ್ಲಾ ಸಂಭಾವ್ಯ ಕೋನಗಳಿಂದ ತನಿಖೆ ನಡೆಸಲಾಗುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಹೆಚ್ಚಿನ ವಿವರಗಳು ಸ್ಪಷ್ಟವಾಗುತ್ತವೆ ಎಂದು ಠಾಣೆಯ ಉಸ್ತುವಾರಿ ಬಾಲ್ಮಿಕ್ ಚೌಬೆ ಹೇಳಿದ್ದಾರೆ. ಘಟನೆಗೆ ಮುನ್ನ ಯಾವುದಾದರೂ ವಿಚಾರಕ್ಕೆ ಸಂಬಂಧಿಸಿದಂತೆ ಆಕೆ ಒತ್ತಡದಲ್ಲಿ ಇದ್ದಳೇ ಎಂದು ತಿಳಿಯಲು ಪೊಲೀಸರು ಆಕೆಯ ಸಂಬಂಧಿಕರು ಮತ್ತು ಪರಿಚಯದವರೊಂದಿಗೆ ಪೊಲೀಸರು ಮಾತನಾಡುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ