’ಯಾರೋ ರೂಪಿಸಿಕೊಂಡ ಕಾನೂನಿಗೆಲ್ಲ ಷರಿಯತ್​ ಎನ್ನಲಾಗದು..’-ಕೇರಳ ರಾಜ್ಯಪಾಲ ಆರಿಫ್​ ಮೊಹಮ್ಮದ್​ ಖಾನ್​

| Updated By: Lakshmi Hegde

Updated on: Sep 12, 2021 | 10:39 AM

ದೇಶದಲ್ಲಿ ಮುಸ್ಲಿಂ ನಾಯಕತ್ವವನ್ನು ಮುಂಚೂಣಿಗೆ ತರಲು ಪ್ರಯತ್ನ ಮಾಡುತ್ತಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ವಿರುದ್ಧ ಅರೀಫ್​ ಮೊಹಮ್ಮದ್​ ಖಾನ್ ವಾಗ್ದಾಳಿ ನಡೆಸಿದ್ದಾರೆ.

’ಯಾರೋ ರೂಪಿಸಿಕೊಂಡ ಕಾನೂನಿಗೆಲ್ಲ ಷರಿಯತ್​ ಎನ್ನಲಾಗದು..’-ಕೇರಳ ರಾಜ್ಯಪಾಲ ಆರಿಫ್​ ಮೊಹಮ್ಮದ್​ ಖಾನ್​
ಅರೀಫ್​ ಮೊಹಮ್ಮದ್ ಖಾನ್​
Follow us on

ದೆಹಲಿ: ತಾಲಿಬಾನಿ (Taliban)ಗಳು ವಿದ್ಯಾಭ್ಯಾಸ ಮಾಡಿದ್ದು ಪಾಕಿಸ್ತಾನದ ದೇವಬಂಧಿ ಮದರಸಾಗಳಲ್ಲಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಕೇರಳ ರಾಜ್ಯಪಾಲ ಆರಿಫ್​ ಮೊಹಮ್ಮದ್​ ಖಾನ್​ ಹೇಳಿದ್ದಾರೆ. ಅಷ್ಟೇ ಅಲ್ಲ, ತಾಲಿಬಾನಿಗಳೇ ರೂಪಿಸಿಕೊಂಡಿರುವ ಕಾನೂನಿಗೆ ಷರಿಯತ್​ ಕಾನೂನು (ಇಸ್ಲಾಮಿಕ್​ ಲಾ) (Shariat) ಎಂದು ಕರೆಯಲು ಸಾಧ್ಯವೇ ಇಲ್ಲ ಎಂದೂ ಅವರು ಹೇಳಿದ್ದಾರೆ. ಹಾಗೇ, ಇದೀಗ ಅಫ್ಘಾನಿಸ್ತಾನದಲ್ಲಿರುವ ಬಂಡುಕೋರರ ಜತೆ ಮಾತುಕತೆ ನಡೆಸುವ ಮೂಲಕ ಭಾರತ ಸರ್ಕಾರ ಒಳ್ಳೆಯ ಕೆಲಸವನ್ನೇ ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಟೈಮ್ಸ್​ ನೌ ಮಾಧ್ಯಮದೊಂದಿಗೆ ಮಾತನಾಡಿದ ಆರಿಫ್​ ಮೊಹಮ್ಮದ್​ ಖಾನ್, ಇಡೀ ಜಗತ್ತಿನಲ್ಲಿ ಶಾಂತಿ ಸ್ಥಾಪನೆ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರ ಏನು ಬೇಕೋ ಅದನ್ನು ಮಾಡಲಿದೆ ಎಂದು ಹೇಳಿದ್ದಾರೆ.  ಇನ್ನು ಈಗ ತಾಲಿಬಾನಿಗಳು ಹೇಳುತ್ತಿರುವುದು ಖಂಡಿತ ಷರಿಯತ್​ ಕಾನೂನು ಅಲ್ಲ. ಕುರಾನ್​ಗೆ ಷರಿಯತ್ ಕಾನೂನು ಎಂದು ಕರೆಯಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಇವರು ತಮಗೆ ಬೇಕಾದಂತೆ ರೂಪಿಸಿಕೊಂಡ ಕಾನೂನಿಗೆ ಷರಿಯತ್​ ಎನ್ನಲಾಗುತ್ತಿದೆ ಎಂದು ಹೇಳಿದರು.

‘ಮನುಕುಲದ ಪ್ರಗತಿ ಧರ್ಮದ ಆಶಯ. ಧರ್ಮವು ಆಂತರಿಕ ಪ್ರಜ್ಞೆಗೆ ಸಂಬಂಧಪಟ್ಟ ವಿಚಾರ. ಆದರೆ ಮತಾಂಧತೆ ಎಂಬುದು ಧರ್ಮದ ಹೆಸರಲ್ಲಿ ಇತರರ ಮೇಲೆ ಪ್ರಾಬಲ್ಯ ಸಾಧಿಸುವುದಾಗಿದೆ ಎಂದು ಹೇಳಿದ ಆರಿಫ್​ ಮೊಹಮ್ಮದ್​ ಖಾನ್,  ತಾಲಿಬಾನಿಗಳ ಆಡಳಿತಕ್ಕೆ ಪಾಕಿಸ್ತಾನ ಎಷ್ಟು ಸಹಕಾರ ನೀಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತು ಎಂದೂ ಹೇಳಿದ್ದಾರೆ.  ಇನ್ನು ಕೇರಳದಲ್ಲಿ ಹಲವರು ಐಸಿಸ್​ ಉಗ್ರಸಂಘಟನೆ ಸೇರ್ಪಡೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸೇರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದರು.

ದೇಶದಲ್ಲಿ ಮುಸ್ಲಿಂ ನಾಯಕತ್ವವನ್ನು ಮುಂಚೂಣಿಗೆ ತರಲು ಪ್ರಯತ್ನ ಮಾಡುತ್ತಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ ಆರೀಫ್​ ಮೊಹಮ್ಮದ್​ ಖಾನ್​, ಈ ಜನರು ತಮಗೆ ಪ್ರತ್ಯೇಕ ಗುರುತು ಬೇಕು ಎಂಬ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು. ನಾನೊಬ್ಬ ಭಾರತೀಯ ಎಂಬುದೇ ಪ್ರತಿಯೊಬ್ಬನ ಗುರುತಾಗಿರಬೇಕು ಎಂದು ಹೇಳಿದರು.

ಇದನ್ನೂ ಓದಿ: ‘ಕುಡಿಯೋ ಎಂದು ಅಂಬರೀಷ್​ ಯಾವತ್ತೂ ಒತ್ತಾಯ ಮಾಡಲಿಲ್ಲ, ಅದು ದೊಡ್ಡಗುಣ’; ರವಿಚಂದ್ರನ್​

6 ತಿಂಗಳ ಹಿಂದೆ ಮೃತಪಟ್ಟ ಮಹಿಳೆ ಹೆಸರಲ್ಲಿ ಕೊವಿಡ್ ಎರಡನೇ ಲಸಿಕೆ ಸಕ್ಸಸ್! ಮೆಸೆಜ್ ನೋಡಿದ ಮನೆಯವರಿಗೆ ಶಾಕ್