ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಗ ಮತದಾನ ಮಾಡಲು ತಮಿಳು ನಟ ವಿಜಯ್ ಸೈಕಲ್ನಲ್ಲಿ ಮತಗಟ್ಟೆಗೆ ಆಗಮಿಸಿದ್ದರು. ಚೆನ್ನೈನ ರಸ್ತೆಯಲ್ಲಿ ಸೈಕಲ್ ತುಳಿಯುತ್ತಾ ವಿಜಯ್ ಬರುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಸೈಕಲ್ನಲ್ಲಿ ಬರುತ್ತಿರುವ ವ್ಯಕ್ತಿ ದಳಪತಿ ವಿಜಯ್ ಎಂದು ಜನರಿಗೆ ಗೊತ್ತಾದ ಕೂಡಲೇ ಕೆಲವರು ಹಿಂಬಾಲಿಸಿ ಫೊಟೊ ತೆಗೆಯಲು ಆರಂಭಿಸಿದಾಗ ವಿಜಯ್ ವೇಗವಾಗಿ ಸೈಕಲ್ ತುಳಿದು ಮತಗಟ್ಟೆಗೆ ಬಂದಿದ್ದರು. ಮತಗಟ್ಟೆಗೆ ಬಂದಾಗಲೂ ಅಭಿಮಾನಿಗಳು ಸುತ್ತುವರಿದಿದ್ದು, ಅವರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಗಿ ಬಂದಿತ್ತು.
ಸೈಕಲ್ ತುಳಿದು ವಿಜಯ್ ಮತಗಟ್ಟೆಗೆ ಬಂದಿರುವುದು ಸುದ್ದಿಯಾಗುತ್ತಿದ್ದಂತೆ, ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿ ವಿಜಯ್ ಸೈಕಲ್ ನಲ್ಲಿ ಬಂದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿತ್ತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಿಜಯ್ ಮೌನವಾಗಿ ಪ್ರತಿಭಟನೆ ತೋರಿದ್ದಾರೆ ಎಂಬ ಪೋಸ್ಟ್ ಗಳು ಫೇಸ್ಬುಕ್, ಟ್ವಿಟರ್ನಲ್ಲಿ ಹರಿದಾಡಿತ್ತು. ಆದರೆ ವಿಜಯ್ ಸೈಕಲ್ ಸವಾರಿ ಹಿಂದೆ ಯಾವುದೇ ಉದ್ದೇಶ ಇರಲಿಲ್ಲ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಟ್ವೀಟ್ ಮಾಡಿದ್ದಾರೆ.
ವಿಜಯ್ ಮನೆಯ ಪಕ್ಕವೇ ಮತಗಟ್ಟೆ ಇತ್ತು. ಕಿರಿದಾದ ರಸ್ತೆಯಲ್ಲಿ ಕಾರು ತೆಗೆದುಕೊಂಡು ಹೋಗಿ ವಾಹನ ದಟ್ಟಣೆಯುಂಟು ಮಾಡುವುದನ್ನು ತಪ್ಪಿಸಲು ಅವರು ಕಾರಿನ ಬದಲು ಸೈಕಲ್ನಲ್ಲಿ ಹೋಗಿದ್ದಾರೆ. ಇದರ ಹಿಂದೆ ಬೇರೆ ಯಾವ ಉದ್ದೇಶವೂ ಇಲ್ಲ ಎಂದು ವಿಜಯ್ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ರಿಯಾಜ್. ಕೆ. ಅಹಮದ್ ಟ್ವೀಟ್ ಮಾಡಿದ್ದಾರೆ.
#Vijay arrives in cycle to cast his vote #TamilNaduElections pic.twitter.com/iKY4bkIqA8
— BARaju (@baraju_SuperHit) April 6, 2021
Exclusive Video of #Thalapathy @actorvijay a Polling Booth ! #Master #TamilNaduElections2021
pic.twitter.com/CYmpvvzFSW— THALAPATHY FANS KERALA (@TFK_OfficiaI) April 6, 2021
ತಮಿಳುನಾಡಿನ ಆಡಳಿತರೂಢ ಪಕ್ಷ ಎಐಎಡಿಎಂಕೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ. ಇಂಧನ ಬೆಲೆ ಏರಿಕೆ ವಿರುದ್ಧ ವಿಜಯ್ ಸೈಕಲ್ ತುಳಿದು ಪ್ರತಿಭಟನೆಯ ಸಂದೇಶವನ್ನು ದಾಟಿಸಿದ್ದಾರೆ ಎಂದು ಡಿಎಂಕೆಯ ಹಲವಾರು ನಾಯಕರು ಹೇಳಿಕೆ ನೀಡಿದ ಬೆನ್ನಲ್ಲೇ ವಿಜಯ್ ಅವರ ತಂಡ ಈ ಸ್ಪಷ್ಟನೆ ನೀಡಿದೆ.
#TNElection #TNElections2021 #TNElection2021 #TNAssemblyElections2021 #tnelectionday #Election2021 #Elections2021 #Thalapathy #Vijay #thalapathyfansteam #Thalapathy @actorvijay @Jagadishbliss @BussyAnand @V4umedia_ pic.twitter.com/H6XVkAkKJm
— RIAZ K AHMED (@RIAZtheboss) April 6, 2021
ವಿಜಯ್ ಅವರು ಸೈಕಲ್ ನಲ್ಲಿ ಮತಗಟ್ಟೆಗೆ ಬಂದಿರುವುದು ಇಂಧನ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆ ಆಗಿರಲಿಲ್ಲ. ಇನ್ನೊಬ್ಬರ ಬೈಕ್ ಮೇಲೆ ಸವಾರಿ ಮಾಡುವುದನ್ನು ಡಿಎಂಕೆ ನಿಲ್ಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಖುಷ್ಬೂ ಸುಂದರ್ ಹೇಳಿದ್ದಾರೆ.
ಇದನ್ನೂ ಓದಿ: Thalapathy Vijay: ಸೈಕಲ್ನಲ್ಲಿ ಬಂದು ಮತದಾನ ಮಾಡಿದ ದಳಪತಿ ವಿಜಯ್! ಪೆಟ್ರೋಲ್ ಬೆಲೆ ಏರಿಕೆಗೆ ನಟನ ತಿರುಗೇಟು?
Tamil Nadu Elections 2021: ತಮಿಳುನಾಡಿನಲ್ಲಿ ಚುನಾವಣೆಗೆ ಮುನ್ನ ಹಣ ಹಂಚಲಾಗಿತ್ತು: ಕಮಲ್ ಹಾಸನ್ ಆರೋಪ