ಚೆಂಗಲ್ಪಟ್ಟು: ಸೇನಾ ತರಬೇತಿ ಕೇಂದ್ರದಲ್ಲಿ ಮೂರು ರಾಕೆಟ್ ಗ್ರೆನೇಡ್‌ಗಳು ಪತ್ತೆಯಾಗಿವೆ. ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಸಿಂಗಪೆರುಮಾಳ್ ದೇವಸ್ಥಾನದ ಪ್ರದೇಶದ ಬಳಿ ತೊರೆದು ಹೋಗಿರುವ ಸೇನಾ ತರಬೇತಿ ಕೇಂದ್ರದಲ್ಲಿ ಮೂರು ರಾಕೆಟ್ ಗ್ರೆನೇಡ್‌ಗಳು ಪತ್ತೆಯಾಗಿವೆ.
ಕುರುಬರ ಸಮುದಾಯ ಜನರಿಂದ ಪೊಲೀಸರಿಗೆ ಈ ಬಗ್ಗೆ ತಿಳಿಸಲಾಗಿದೆ. ನಂತರದಲ್ಲಿ ಪೊಲೀಸರು ಗ್ರೆನೇಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಚೆಂಗಲ್ಪಟ್ಟು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಬಾಂಬ್ ಸ್ಕ್ವಾಡ್ ತಂಡದ ಸಹಾಯದಿಂದ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಂಗಪೆರುಮಾಳ್ ದೇಗುಲದ ಬಳಿ ಇರುವ ಸೇನಾ ತರಬೇತಿ ಕೇಂದ್ರ ಕೆಲ ದಿನಗಳಿಂದ ಕೆಲಸಗಳನ್ನು ನಡೆಸುತ್ತಿರಲಿಲ್ಲ. ಸದ್ಯಕ್ಕೆ ಪೊಲೀಸರು ಸ್ಥಳದಲ್ಲಿ ಪತ್ತೆಯಾದ ಗ್ರೆನೇಡ್‌ನ ಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published On - 7:30 pm, Sat, 29 October 22