AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಕ್ಷೆ ವಿಧಿಸುವ ನಿಬಂಧನೆಗಳಿಗೆ ಯಾವುದೇ ತಿದ್ದುಪಡಿ ತಂದಿಲ್ಲ: ಕಪಿಲ್ ಸಿಬಲ್​ ಆರೋಪಕ್ಕೆ PIB Fact Check ಸ್ಪಷ್ಟನೆ

ಐಟಿ ನಿಯಮಗಳನ್ನು ತಿದ್ದುಪಡಿ ಮಾಡುವ ಅಧಿಸೂಚನೆಯನ್ನು ಹೊರಡಿಸಿರು ಬಗ್ಗೆ ಕೇಂದ್ರ ಮಾಜಿ ಸಚಿವ ಕಪಿಲ್ ಸಿಬಲ್ ಆರೋಪಕ್ಕೆ ಪ್ರೆಸ್​ ಇನ್​ಫಾರ್ಮೇಷನ್ ಬ್ಯೂರೋ ಫ್ಯಾಕ್ಟ್ ಚೆಕ್ ಸ್ಪಷ್ಟನೆ ಕೊಟ್ಟಿದೆ.

ಶಿಕ್ಷೆ ವಿಧಿಸುವ ನಿಬಂಧನೆಗಳಿಗೆ ಯಾವುದೇ ತಿದ್ದುಪಡಿ ತಂದಿಲ್ಲ: ಕಪಿಲ್ ಸಿಬಲ್​ ಆರೋಪಕ್ಕೆ PIB Fact Check ಸ್ಪಷ್ಟನೆ
Kapil Sibal
TV9 Web
| Edited By: |

Updated on:Oct 29, 2022 | 10:09 PM

Share

ನವದೆಹಲಿ: ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಸಾಮಾನ್ಯ ಜನರ ಮೇಲೆ ಗುರಾಣಿ ಬಳಸುತ್ತಿದೆ. ನಿಯಮಗಳ ಅಡಿಯಲ್ಲಿ ಮಾನಹಾನಿ ಪ್ರಕರಣದ ಹೆಸರಿನಲ್ಲಿ ಸಾರ್ವಜನಿಕರಿಗೆ ಶಿಕ್ಷೆ ವಿಧಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆವಾಗಿದೆ ಎಂದು ಕೇಂದ್ರ ಮಾಜಿ ಸಚಿವ ಕಪಿಲ್ ಸಿಬಲ್ ಆರೋಪಿಸಿದ್ದಾರೆ. ಆದ್ರೆ, ಕಪಿಲ್ ಸಿಬಲ್ ಅವರ ಈ ಆರೋಪವನ್ನು ಕೇಂದ್ರ ಸರ್ಕಾರದ ಪ್ರೆಸ್​ ಇನ್​ಫಾರ್ಮೇಷನ್ ಬ್ಯೂರೋ ಫ್ಯಾಕ್ಟ್ ಚೆಕ್ ತಳ್ಳಿಹಾಕಿದೆ.

ಐಟಿ ನಿಯಮಗಳ ಶಿಕ್ಷೆ ವಿಧಿಸುವ ನಿಬಂಧನೆಗಳಿಗೆ ಕೇಂದ್ರ ಸರ್ಕಾರ ಯಾವುದೇ ತಿದ್ದುಪಡಿ ತಂದಿಲ್ಲ. ಮೊದಲಿನ ನಿಯಮಗಳೇ ಮುಂದುವರಿಯಲಿವೆ. ತಿದ್ದುಪಡಿ ಮಾಡಲಾದ ಐಟಿ ನಿಯಮಗಳು ಕಾನೂನು ಕ್ರಮಕ್ಕೆ ಯಾವುದೇ ಹೊಸ ನಿಬಂಧನೆಯನ್ನು ಸೇರಿಸಿಲ್ಲ ಹಾಗಾಗಿ, ಕಪಿಲ್‌ ಸಿಬಲ್‌ ನೀಡಿರುವ ಹೇಳಿಕೆ ಜನರ ದಾರಿ ತಪ್ಪಿಸುವಂತಿದೆ ಎಂದು ಪ್ರೆಸ್​ ಇನ್​ಫಾರ್ಮೇಷನ್ ಬ್ಯೂರೋ ಫ್ಯಾಕ್ಟ್ ಚೆಕ್ ಮೂಲಕ ಸ್ಪಷ್ಟಪಡಿಸಿದೆ.

ತಪ್ಪು ಮಾಹಿತಿ ಹರಡುವಿಕೆ ವಿರುದ್ಧ ಹೊಸ ಐಟಿ ಕಾನೂನು ಪರಿಣಾಮಕಾರಿ: ರಾಜೀವ್ ಚಂದ್ರಶೇಖರ್

ಸಾಮಾಜಿಕ ಮಾಧ್ಯಮ ಜಾಲತಾಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಐಟಿ ನಿಯಮಗಳಿಗೆ ತಿದ್ದುಪಡಿ ತಂದಿದೆ. ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ತಿದ್ದುಪಡಿ ನಿಯಮ ಗೆಜೆಟ್‌ನಲ್ಲಿ ಪ್ರಕಟಿಸಿದ್ದು, ಯಾವುದೇ ಸಾಮಾಜಿಕ ಜಾಲ ತಾಣಗಳು ಭಾರತೀಯ ಕಾನೂನಿಗನುಸಾರವಾಗಿ ನಡೆದುಕೊಳ್ಳಬೇಕು. ಭಾರತದ ಸಂವಿಧಾನದ ನಿಬಂಧನೆಗಳು ಮತ್ತು ಭಾರತದ ಸಾರ್ವಭೌಮ ಕಾನೂನುಗಳನ್ನು ಪಾಲಿಸುವುದನ್ನು ಕಡ್ಡಾಯಗೊಳಿಸುವ ಹೊಸ ಐಟಿ ನೀತಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ.

ಯಾವುದೇ ಸಾಮಾಜಿಕ ಜಾಲ ತಾಣಗಳು ಭಾರತೀಯ ಕಾನೂನಿಗನುಸಾರವಾಗಿ ನಡೆದುಕೊಳ್ಳಬೇಕು. ಭಾರತದ ಸಂವಿಧಾನದ ನಿಬಂಧನೆಗಳು ಮತ್ತು ಭಾರತದ ಸಾರ್ವಭೌಮ ಕಾನೂನುಗಳನ್ನು ಪಾಲಿಸುವುದನ್ನು ಕಡ್ಡಾಯಗೊಳಿಸುವ ಹೊಸ ಐಟಿ ನೀತಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಫೇಸ್​ಬುಕ್, ವಾಟ್ಸಪ್, ಟ್ವಿಟ್ಟರ್​ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ತಪ್ಪು ಮಾಹಿತಿಗಳು ದೇಶದ ಸಮಗ್ರತೆ, ಭದ್ರತೆಗೆ ಧಕ್ಕೆ ತರುವಂತಹ ಸಂದೇಶಗಳು, ಲೈಂಗಿಕ ದೌರ್ಜನ್ಯದ ವಿಚಾರಗಳನ್ನು ಹರಡುವುದಕ್ಕೆ ಕಡಿವಾಣ ಹಾಕಲು ಈ ಹೊಸ ಐಟಿ ಕಾಯ್ದೆಯನ್ನು ಜಾರಿ ಮಾಡಲಾಗಿದೆ ಎಂದು ಕೇಂದ್ರದ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

Published On - 9:18 pm, Sat, 29 October 22