Tamil Nadu: ಮದುವೆ ಸಂಭ್ರಮದಲ್ಲಿ ನಡೆಯಿತು ಭಾರೀ ಅನಾಹುತ, ಅಚಾನಕ್ ಆಗಿ ಕುದಿಯುವ ಸಾಂಬಾರ್ ಕಡಾಯಿಗೆ ಬಿದ್ದು ವ್ಯಕ್ತಿ ಸಾವು

|

Updated on: May 01, 2023 | 12:31 PM

ಕುದಿಯುತ್ತಿದ್ದ ಬಿಸಿ ಬಿಸಿ ಸಾಂಬಾರ್ ಕಡಾಯಿಗೆ 21 ವರ್ಷದ ಯುವಕ ಬಿದ್ದು ಸಾವನ್ನಪ್ಪಿರುವ ಘಟನೆ ತಮಿಳುನಾಡು ತಿರುವಳ್ಳೂರು ಜಿಲ್ಲೆಯಲ್ಲಿ ನಡೆದಿದೆ.

Tamil Nadu: ಮದುವೆ ಸಂಭ್ರಮದಲ್ಲಿ ನಡೆಯಿತು ಭಾರೀ ಅನಾಹುತ, ಅಚಾನಕ್ ಆಗಿ ಕುದಿಯುವ ಸಾಂಬಾರ್ ಕಡಾಯಿಗೆ ಬಿದ್ದು ವ್ಯಕ್ತಿ ಸಾವು
ಸಾಂದರ್ಭಿಕ ಚಿತ್ರ
Follow us on

ಚೆನ್ನೈ: ಕುದಿಯುತ್ತಿದ್ದ ಬಿಸಿ ಬಿಸಿ ಸಾಂಬಾರ್ ಕಡಾಯಿಗೆ 21 ವರ್ಷದ ಯುವಕ ಬಿದ್ದು ಸಾವನ್ನಪ್ಪಿರುವ ಘಟನೆ ತಮಿಳುನಾಡು (Tamil Nadu) ತಿರುವಳ್ಳೂರು ಜಿಲ್ಲೆಯಲ್ಲಿ ನಡೆದಿದೆ. ಯುವಕನ ದೇಹದ ಮೇಲೆ ಸುಟ್ಟ ಗಾಯಗಳ ಉರಿಯಿಂದ ಆಸ್ಪತ್ರೆ ಸಾಗಿಸುವ ಮುನ್ನವೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಸಾವನ್ನಪ್ಪಿರುವ ಯುವಕ ಕಾಲೇಜು ವಿದ್ಯಾರ್ಥಿಯಾಗಿದ್ದು, ಹೋಟೆಲ್​​​ನಲ್ಲಿ ಪಾರ್ಟ್ ಟೈಮ್​ ಆಗಿ ಕೆಲಸ ಮಾಡುತ್ತಿದ್ದ. ಕಳೆದ ವಾರ ಮದುವೆ ಸಮಾರಂಭವೊಂದರಲ್ಲಿ ಅತಿಥಿಗಳಿಗೆ ಊಟ ಬಡಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಮಾರಂಭದಲ್ಲಿ ಅತಿಥಿಗಳಿಗೆ ಸಾಂಬರು ಬಡಿಸಲೆಂದು ಸಾಂಬರು ಕಡಾಯಿ ಬಳಿ ಹೋದಾಗ ಅಚಾನಕ್ ಆಗಿ ​​ಕುದಿಯುತ್ತಿರುವ ಸಾಂಬರು ಕಡಾಯಿಗೆ ಬಿದ್ದಿದ್ದಾನೆ ಎಂದು ಹೇಳಲಾಗಿದೆ.

ಇದನ್ನೂ ಓದಿ:Tamil Nadu Weather: ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವೆಡೆ ಇಂದು ಗುಡುಗು ಸಹಿತ ಮಳೆ

ತೀವ್ರ ಸುಟ್ಟಗಾಯಗಳಾಗಿರುವ ಯುವಕನನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Published On - 12:19 pm, Mon, 1 May 23