ಬಾಂಗ್ಲಾದೇಶಕ್ಕೆ ಅಕ್ರಮವಾಗಿ ನುಸುಳುತ್ತಿದ್ದ ತಮಿಳುನಾಡಿನ ಪೊಲೀಸ್ ಬಂಧನ
ಪೊಲೀಸ್ ಮೂಲಗಳ ಪ್ರಕಾರ ಬಂಧಿತರಾದ ಪೊಲೀಸ್ ಮಾರ್ಚ್ 19 ರಿಂದ ಅವರು ರಜೆ ಪಡೆದು ಹೋಗಿದ್ದಾರೆ. ಆದರೆ, ಅವರು 12 ದಿನಗಳ ವೈದ್ಯಕೀಯ ರಜೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪೋಸ್ಟ್ ಮೂಲಕ ಕಳುಹಿಸಿದ್ದಾರೆ. ಜಾನ್ ಸೆಲ್ವರಾಜ್ ಅವರು ತಿರುಚ್ಚಿಯ ಕ್ರಾಫರ್ಡ್‌ನವರಾಗಿದ್ದು, ಅವರು ತಮ್ಮ ಹೆಚ್ಚಿನ ಸೇವೆಯನ್ನು ತಿರುಚ್ಚಿಯಲ್ಲಿ ಪೂರೈಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೆನ್ನೈ ಮಾರ್ಚ್ 23 : ಚೆನ್ನೈನ ಸೆಲೈಯೂರ್ ಪೊಲೀಸ್ ಠಾಣೆಯ (Selaiyur police Station) ವಿಶೇಷ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಭಾರತ ಗಡಿಯ ಮೂಲಕ ಬಾಂಗ್ಲಾದೇಶಕ್ಕೆ (Bangladesh) ನುಸುಳಿದ್ದು ಅವರನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ. ಬಾಂಗ್ಲಾದೇಶದ ಗಡಿ ಭದ್ರತಾ ಅಧಿಕಾರಿಗಳು ಆತನನ್ನು ಬಂಧಿಸಿದಾಗ ಎಸ್‌ಎಸ್‌ಐ ಜಾನ್ ಸೆಲ್ವರಾಜ್ (John Selvaraj) ಬಾಂಗ್ಲಾದೇಶವನ್ನು ತಲುಪಲು ಭಾರತದ ಗಡಿಯನ್ನು ದಾಟಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಈ ಪ್ರಕರಣದಲ್ಲಿ ಬಾಂಗ್ಲಾದೇಶ ಪೊಲೀಸರು ತಮಿಳುನಾಡು ಪೊಲೀಸರನ್ನು ಪ್ರಶ್ನಿಸಿದ್ದಾರೆ.
“ಅವರು ಬಾಂಗ್ಲಾದೇಶಕ್ಕೆ ಹೋಗಿದ್ದು ಯಾಕೆ? ಅವರು ಒಬ್ಬರೇ ಹೋಗಿದ್ದಾರೆಯೇ ಅಥವಾ ಯಾರಾದರೂ ಜೊತೆಯಲ್ಲಿ ಹೋಗಿದ್ದಾರೆಯೇ? ಎಂದು ಕೇಳಿದ್ದು ನಮ್ಮ ಬಳಿ ಯಾವುದೇ ಉತ್ತರವಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಬಂಧನದ ವಿವರಗಳು ಇನ್ನಷ್ಟೇ ಬರಬೇಕಾಗಿದ್ದರೂ, ತಾಂಬರಂ ಕಮಿಷನರೇಟ್‌ನ ಅಧಿಕಾರಿಗಳು “ಎಸ್‌ಎಸ್‌ಐ ಜಾನ್ ಸೆಲ್ವರಾಜ್ ನಿವೃತ್ತ ಪೊಲೀಸ್ ಅಧಿಕಾರಿಯ ಕುಟುಂಬ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಎರಡು ದಿನಗಳನ್ನು ರಜೆ ತೆಗೆದುಕೊಂಡಿದದಾರೆ ಎಂದು ಹೇಳಿದ್ದಾರೆ.
ಬಂಧಿತ ಪೊಲೀಸ್ ವೈದ್ಯಕೀಯ ರಜೆಯಲ್ಲಿದ್ದಾರೆ
ಪೊಲೀಸ್ ಮೂಲಗಳ ಪ್ರಕಾರ, ಅವರು ಮಾರ್ಚ್ 19 ರಿಂದ ಅವರು ರಜೆ ಪಡೆದು ಹೋಗಿದ್ದಾರೆ. ಆದರೆ, ಅವರು 12 ದಿನಗಳ ವೈದ್ಯಕೀಯ ರಜೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪೋಸ್ಟ್ ಮೂಲಕ ಕಳುಹಿಸಿದ್ದಾರೆ. ಜಾನ್ ಸೆಲ್ವರಾಜ್ ಅವರು ತಿರುಚ್ಚಿಯ ಕ್ರಾಫರ್ಡ್‌ನವರಾಗಿದ್ದು, ಅವರು ತಮ್ಮ ಹೆಚ್ಚಿನ ಸೇವೆಯನ್ನು ತಿರುಚ್ಚಿಯಲ್ಲಿ ಪೂರೈಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಿರುಚ್ಚಿಯಲ್ಲಿ ಅವರೊಂದಿಗೆ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಯೊಬ್ಬರು “ಜಾನ್ ಸೆಲ್ವರಾಜ್ ಅವರು 2004 ರಿಂದ 2009 ರವರೆಗೆ ಪೊಲೀಸ್ ವಾಹನ ಚಾಲಕರಾಗಿ ಕೆಲಸ ಮಾಡಿದ್ದಾರೆ. ನಂತರ ಅವರು 2009 ರಿಂದ 2019 ರವರೆಗೆ ಸೇವೆಯಿಂದ ತೊರೆದರು. ಈ ಅವಧಿಯಲ್ಲಿ ಅವರು ಸಿಂಗಾಪುರದಲ್ಲಿದ್ದರು. ಅವರನ್ನು ಮತ್ತೆ ಪೊಲೀಸ್ ಆಗಿ ನೇಮಿಸಲಾಯಿತು, ಅವರು ಎಸ್‌ಎಸ್‌ಐ ಆಗಿ ಬಡ್ತಿ ಪಡೆದರು.
ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ಜರ್ಮನಿಯ ಹೇಳಿಕೆ ‘ಅನಗತ್ಯ ಹಸ್ತಕ್ಷೇಪ’: ಕೇಂದ್ರ ಸರ್ಕಾರ
ನಂತರ ಅವರನ್ನು ತಾಂಬರಂ ಕಮಿಷನರೇಟ್‌ಗೆ ನಿಯೋಜಿಸಲಾಯಿತು. ಜಾನ್ ಸೆಲ್ವರಾಜ್ ಕೂಡ ಕೆಲವು ತಿಂಗಳ ಹಿಂದೆ 60 ದಿನಗಳ ವೈದ್ಯಕೀಯ ರಜೆ ಮೇಲೆ ತೆರಳಿದ್ದರು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. “ಅವರು ವಿಶ್ವಾಸಾರ್ಹ ಅಧಿಕಾರಿಯಲ್ಲ, ಏಕೆಂದರೆ ಅವರು ಆಗಾಗ್ಗೆ ಕರ್ತವ್ಯದಿಂದ ತಪ್ಪಿಸಿಕೊಳ್ಳುತ್ತಿರುತ್ತಾರೆ” ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ