ತಮಿಳುನಾಡು: ದಿಂಡಿಗಲ್ ಕಲೆಕ್ಟರ್ ಕಚೇರಿ ಎದುರು ಪಟಾಕಿ ಅಂಗಡಿ ಸ್ಫೋಟ, ಓರ್ವ ಸಾವು

ತಮಿಳುನಾಡಿನ ದಿಂಡಿಗಲ್ ಕಲೆಕ್ಟರ್ ಕಚೇರಿ ಎದುರು ಪಟಾಕಿ ಅಂಗಡಿ ಸ್ಫೋಟಗೊಂಡಿದ್ದು, ಸ್ಥಳದಲ್ಲೇ ಓರ್ವ ಸಾವನ್ನಪ್ಪಿರುವ ಕುರಿತು ವರದಿಯಾಗಿದೆ.

ತಮಿಳುನಾಡು: ದಿಂಡಿಗಲ್ ಕಲೆಕ್ಟರ್ ಕಚೇರಿ ಎದುರು ಪಟಾಕಿ ಅಂಗಡಿ ಸ್ಫೋಟ, ಓರ್ವ ಸಾವು
Fire
Updated By: ನಯನಾ ರಾಜೀವ್

Updated on: Jun 22, 2022 | 4:38 PM

ಚೆನ್ನೈ: ತಮಿಳುನಾಡಿನ ದಿಂಡಿಗಲ್ ಕಲೆಕ್ಟರ್ ಕಚೇರಿ ಎದುರು ಪಟಾಕಿ ಅಂಗಡಿ ಸ್ಫೋಟಗೊಂಡಿದ್ದು, ಸ್ಥಳದಲ್ಲೇ ಓರ್ವ ಸಾವನ್ನಪ್ಪಿರುವ ಕುರಿತು ವರದಿಯಾಗಿದೆ.

ಪಟಾಕಿ ಅಂಗಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ನೋಡನೋಡುತ್ತಿದ್ದಂತೆ ಅಂಗಡಿ ಹೊರಗೂ ಬೆಂಕಿಯ ಕೆನ್ನಾಲಿಗೆ ಹಬ್ಬಿ ಕಾರು ಕೂಡ ಹೊತ್ತಿ ಉರಿದಿತ್ತು. ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ದಿಂಡಿಗಲ್ ಎಸ್​ಪಿ ವಿ, ಭಾಸ್ಕರನ್ ತಿಳಿಸಿದ್ದಾರೆ.

ಘಟನೆಯಲ್ಲಿ ಓರ್ವ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ, ಇನ್ನೂ ಘಟನೆಯ ವಿವರ ಬರಬೇಕಿದೆ.

Published On - 4:32 pm, Wed, 22 June 22