ತಮಿಳುನಾಡಿಗೆ ಹೊರಟಿದ್ದೀರಾ?; ಮಾಸ್ಕ್ ಧರಿಸದಿದ್ದರೆ 500 ರೂ. ದಂಡ ತೆರಬೇಕಾದೀತು ಎಚ್ಚರ!

| Updated By: ಸುಷ್ಮಾ ಚಕ್ರೆ

Updated on: Apr 22, 2022 | 4:12 PM

ಕೊವಿಡ್-19 ಪ್ರಕರಣಗಳ ಉಲ್ಬಣದ ಕಾರಣದಿಂದ ತಮಿಳುನಾಡು ಸರ್ಕಾರವು ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ನಿಯಮವನ್ನು ಇಂದಿನಿಂದ ಮತ್ತೆ ಜಾರಿಗೊಳಿಸಿದೆ.

ತಮಿಳುನಾಡಿಗೆ ಹೊರಟಿದ್ದೀರಾ?; ಮಾಸ್ಕ್ ಧರಿಸದಿದ್ದರೆ 500 ರೂ. ದಂಡ ತೆರಬೇಕಾದೀತು ಎಚ್ಚರ!
ಮಾಸ್ಕ್
Follow us on

ಚೆನ್ನೈ: ಭಾರತದಲ್ಲಿ ಕೊರೊನಾ ಕೇಸುಗಳು ಕಡಿಮೆಯಾಗಿವೆ ಎಂಬ ಕಾರಣಕ್ಕೆ ಹಲವು ರಾಜ್ಯಗಳಲ್ಲಿ ಕೊವಿಡ್ ನಿಯಮಗಳನ್ನು (Covid Guidelines) ಸಡಿಲಗೊಳಿಸಲಾಗಿದೆ. ಹಾಗಂತ ನೀವು ಕೊಂಚ ಮೈ ಮರೆತರೂ ಮತ್ತೆ ಸಂಕಷ್ಟಕ್ಕೀಡಾಗುವುದು ಗ್ಯಾರಂಟಿ. ನೀವು ನಾಳೆಯೋ, ನಾಡಿದ್ದೋ ತಮಿಳುನಾಡಿಗೆ ಹೋಗುವ ಪ್ಲಾನ್ ಇದೆಯಾ? ಹಾಗಿದ್ದರೆ ಹುಷಾರ್! ತಮಿಳುನಾಡಿಗೆ ಹೋಗುವುದಾದರೆ ಮಾಸ್ಕ್​ (Face Mask) ಹಾಕಿಕೊಂಡು ಹೋಗಲು ಮರೆಯಬೇಡಿ. ಕರ್ನಾಟಕದಲ್ಲಿ ಮಾಸ್ಕ್ ಕಡ್ಡಾಯ ನಿಯಮವನ್ನು ಸಡಿಲಗೊಳಿಸಿದ್ದಾರೆ ಎಂಬ ಕಾರಣಕ್ಕೆ ತಮಿಳುನಾಡಿಗೂ ಮಾಸ್ಕ್ ಧರಿಸದೆ ಹೋದರೆ 500 ರೂ. ದಂಡ ತೆರಬೇಕಾಗುತ್ತದೆ.

ಕೊವಿಡ್-19 ಪ್ರಕರಣಗಳ ಉಲ್ಬಣದ ಕಾರಣದಿಂದ ತಮಿಳುನಾಡು ಸರ್ಕಾರವು ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ನಿಯಮವನ್ನು ಇಂದಿನಿಂದ ಮತ್ತೆ ಜಾರಿಗೊಳಿಸಿದೆ. ಮಾಸ್ಕ್ ಧರಿಸದೆ ಓಡಾಡುವವರಿಗೆ 500 ರೂ. ದಂಡ ವಿಧಿಸಲು ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ರಾಜ್ಯಾದ್ಯಂತ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಆದೇಶಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನರು ಕೋವಿಡ್-19 ಪ್ರೋಟೋಕಾಲ್‌ಗಳನ್ನು ಅನುಸರಿಸುವಲ್ಲಿ ತೋರುತ್ತಿರುವ ಸಡಿಲತೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ 500 ರೂ ದಂಡವನ್ನು ಸಂಗ್ರಹಿಸಲು ನಿರ್ಧರಿಸಲಾಗಿದೆ ಎಂದು ಪ್ರಧಾನ ಆರೋಗ್ಯ ಕಾರ್ಯದರ್ಶಿ ಜೆ ರಾಧಾಕೃಷ್ಣನ್ ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಮುಖಕ್ಕೆ ಮಾಸ್ಕ್ ಧರಿಸದ ಸಾರ್ವಜನಿಕರಿಂದ ದಂಡ ವಸೂಲಿ ಮಾಡುವಂತೆ ಸ್ಥಳೀಯ ಆಡಳಿತ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಸೇರ್ಪಡೆಗಳು ಮತ್ತು ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು ಕಳೆದ ಕೆಲವು ದಿನಗಳಿಂದ ಹೆಚ್ಚುತ್ತಿವೆ. ತಮಿಳುನಾಡಿನಲ್ಲಿ ಗುರುವಾರ 39 ಹೊಸ ಸೋಂಕುಗಳು ಪತ್ತೆಯಾಗಿವೆ.

ಇದನ್ನೂ ಓದಿ: Masked Aadhaar: ಏನಿದು ಮಾಸ್ಕ್ಡ್ ಆಧಾರ್, ಇದರ ಪ್ರಯೋಜನ ಏನು, ಡೌನ್​ಲೋಡ್ ಹೇಗೆ?

ಕೊವಿಡ್: ದೆಹಲಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ; ನಿಯಮ ಉಲ್ಲಂಘಿಸಿದರೆ ₹500 ದಂಡ