ತಮಿಳುನಾಡು: ಲೈಂಗಿಕ ದೌರ್ಜನ್ಯ ವಿರೋಧಿಸಿದ್ದಕ್ಕೆ 5 ವರ್ಷದ ಬಾಲಕನ ಹತ್ಯೆ
ಲೈಂಗಿಕ ದೌರ್ಜನ್ಯ ವಿರೋಧಿಸಿದ್ದಕ್ಕೆ ವ್ಯಕ್ತಿಯೊಬ್ಬ 5 ವರ್ಷದ ಬಾಲಕನನ್ನು ಹೊಡೆದು ಕೊಂದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕಾಂಚಿಪುರಂನಲ್ಲಿ ಐದು ವರ್ಷದ ಬಾಲಕನ ಮೇಲೆ 22 ವರ್ಷದ ಯುವಕನೊಬ್ಬ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ, ತಡೆದು ತಪ್ಪಿಸಿಕೊಳ್ಳಲು ಯತ್ನಿಸಿದ್ದಕ್ಕೆ ಕೋಪಗೊಂಡು ಬಾಲಕನ್ನು ಕೊಲೆ ಮಾಡಿದ್ದಾನೆ. ಅಸ್ಸಾಂ ಮೂಲದ ಬೋಲ್ದೇವ್ ಮಸುವಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಕರುಮಂಗಝನಿ ಮೂಲದ ದಂಪತಿ ಕೆಲಸಕ್ಕೆಂದು ಕಾಂಚಿಪುರಂಗೆ ವಲಸೆ ಬಂದಿದ್ದರು

ಚೆನ್ನೈ, ಜೂನ್ 22: ಲೈಂಗಿಕ ದೌರ್ಜನ್ಯ ವಿರೋಧಿಸಿದ್ದಕ್ಕೆ ವ್ಯಕ್ತಿಯೊಬ್ಬ 5 ವರ್ಷದ ಬಾಲಕನನ್ನು ಹೊಡೆದು ಕೊಂದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕಾಂಚಿಪುರಂನಲ್ಲಿ ಐದು ವರ್ಷದ ಬಾಲಕನ ಮೇಲೆ 22 ವರ್ಷದ ಯುವಕನೊಬ್ಬ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ, ತಡೆದು ತಪ್ಪಿಸಿಕೊಳ್ಳಲು ಯತ್ನಿಸಿದ್ದಕ್ಕೆ ಕೋಪಗೊಂಡು ಬಾಲಕನ್ನು ಕೊಲೆ ಮಾಡಿದ್ದಾನೆ.
ಅಸ್ಸಾಂ ಮೂಲದ ಬೋಲ್ದೇವ್ ಮಸುವಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಕರುಮಂಗಝನಿ ಮೂಲದ ದಂಪತಿ ಕೆಲಸಕ್ಕೆಂದು ಕಾಂಚಿಪುರಂಗೆ ವಲಸೆ ಬಂದಿದ್ದರು. ಬಾಲಕ ಜೂನ್ 9ರಂದು ನಾಪತ್ತೆಯಾಗಿದ್ದ. ಪೋಷಕರು ನೀಡಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ಶುರುಮಾಡಲಾಗಿತ್ತು. ಕೆಲವು ದಿನಗಳ ನಂತರ, ಗ್ರಾಮದ ಸಮೀಪದ ನಿರ್ಜನ ಪ್ರದೇಶದಿಂದ ಮಗುವಿನ ಕೊಳೆತ ಶವ ಪತ್ತೆಯಾಗಿತ್ತು.
ಮೊದಲಿಗೆ, ಬಾಲಕ ಬಿದ್ದು ತಲೆಗೆ ಗಾಯವಾಗಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದಾಗ್ಯೂ, ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬಾಲಕನನ್ನು ಮಸುವಾ ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಈ ಸುಳಿವಿನ ಆಧಾರದ ಮೇಲೆ, ಆತನನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಮತ್ತಷ್ಟು ಓದಿ: ವಾಕಿಂಗ್ ಹೋಗಿದ್ದ 80 ವರ್ಷದ ಅಜ್ಜಿ ಮೇಲೆ ಅತ್ಯಾಚಾರ; ಆರೋಪಿಗೆ ಗುಂಡು ಹಾರಿಸಿದ ಪೊಲೀಸರು
ವಿಚಾರಣೆಯ ಸಮಯದಲ್ಲಿ, ಮಸುವಾ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಹುಡುಗ ಅಳಲು ಶುರುಮಾಡಿದ್ದ, ತನ್ನನ್ನು ವಿರೋಧಿಸಿದ್ದ ಆತ ಅಳ್ಳುವುದನ್ನು ತಡೆಯಲು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




