ಅತ್ತ ತಾಯಿಯೂ ಬದುಕುಳಿಯಲಿಲ್ಲ, ಇತ್ತ ಅಂತ್ಯಕ್ರಿಯೆಗೆ ಸಹಾಯ ಮಾಡುವವರೂ ಯಾರೂ ಇಲ್ಲ. ಕೊನೆಗೆ ಪುತ್ರನೊಬ್ಬ ತನ್ನ ತಾಯಿಯ ಮೃತದೇಹವನ್ನು ವ್ಹೀಲ್ಚೇರ್ನಲ್ಲಿ ಕೊಂಡೊಯ್ದ ಮನಕಲಕುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನಲ್ಲಿ, 60 ವರ್ಷದ ವ್ಯಕ್ತಿಯೊಬ್ಬ ತನ್ನ ತಾಯಿಯ ಮೃತದೇಹವನ್ನು ವೀಲ್ ಚೇರ್‌ನಲ್ಲಿ ಅಂತ್ಯಕ್ರಿಯೆಗಾಗಿ ಕೊಂಡೊಯ್ದಿದ್ದಾನೆ.
ವೃದ್ಧೆಯು ಸೋರಿಯಾಸಿಸ್ ಎಂಬ ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಯಾರೂ ಕೂಡ ಅಂತ್ಯಕ್ರಿಯೆಗೆ ಮುಂದೆಬರಲಿಲ್ಲ.
ಮನಪಾರೈನಲ್ಲಿರುವ ಕಾರ್ಪೊರೇಷನ್ ಸ್ಮಶಾನದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಈ ಕುರಿತು ಮಾಹಿತಿ ನೀಡಿದರು.
ಸ್ಮಶಾನವನ್ನು ನಿರ್ವಹಿಸುವ ಸ್ಥಳೀಯ ಲಯನ್ಸ್ ಕ್ಲಬ್ ಘಟಕದ ಟ್ರಸ್ಟಿ ಎನ್ ಶ್ರೀಧರನ್ ಅವರ ಪ್ರಕಾರ, “ಮನಪಾರೈ ಬಳಿಯ ಭಾರತಿಯಾರ್ ನಗರದಲ್ಲಿ ವಾಸಿಸುವ 60 ವರ್ಷದ ಎಲೆಕ್ಟ್ರಿಷಿಯನ್ ಮುರುಗಾನಂದಂ ಅವರು 84 ವರ್ಷದ ಮೃತ ತಾಯಿ ರಾಜೇಶ್ವರಿ ಅವರ ಶವವನ್ನು ವ್ಹೀಲ್ಚೇರ್ನಲ್ಲಿ ಸ್ಮಶಾನಕ್ಕೆ ತಂದಿದ್ದರು.
ಪಾರ್ಥಿವ ಶರೀರವನ್ನು ಗಾಲಿಕುರ್ಚಿಯಲ್ಲಿ ಸುಮಾರು 2.5 ಕಿ.ಮೀ. ಕೊಂಡೊಯ್ದಿದ್ದರು. ಶ್ರೀಧರನ್ ಮತ್ತಷ್ಟು ಹೇಳಿದರು, ಸೆಪ್ಟೆಂಬರ್ 8 ರಂದು ಬೆಳಿಗ್ಗೆ 6 ಗಂಟೆಗೆ ಹತ್ತಿರದ ಟೀ ಸ್ಟಾಲ್‌ನ ಮಾಲೀಕರಿಂದ ನನಗೆ ಕರೆ ಬಂತು. ಗಾಲಿಕುರ್ಚಿಯಲ್ಲಿದ್ದ ವ್ಯಕ್ತಿಯೊಬ್ಬರು ಶವವನ್ನು ಬಟ್ಟೆಯಲ್ಲಿ ಸುತ್ತಿ ತಂದು ಸ್ಮಶಾನದ ಮುಂದೆ ಕಾಯುತ್ತಿದ್ದಾರೆ ಎಂದು ಅವರು ನನಗೆ ತಿಳಿಸಿದರು. ನಾನು ಆ ಜಾಗಕ್ಕೆ ಓಡಿದೆ.”
ತಾಯಿ ಸೋರಿಯಾಸಿಸ್‌ನಿಂದ ಬಳಲುತ್ತಿದ್ದಾರೆ: ಶ್ರೀಧರನ್, “ಮುರುಗಾನಂದಂ ಅವರು ತಮ್ಮ ಪಾರ್ಶ್ವವಾಯು ಪೀಡಿತ ತಾಯಿ ದೀರ್ಘಕಾಲದ ಅನಾರೋಗ್ಯದಿಂದ ಮುಂಜಾನೆ 4 ಗಂಟೆಗೆ ನಿಧನರಾದರು ಮತ್ತು ಅವರ ಅಂತಿಮ ವಿಧಿಗಳನ್ನು ಮಾಡಬೇಕು ಎಂದು ಹೇಳಿದರು.
ತನ್ನ ತಾಯಿ ರಾಜೇಶ್ವರಿ ಹಲವು ವರ್ಷಗಳಿಂದ ಸೋರಿಯಾಸಿಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ತಾಯಿಗೆ ತೀವ್ರ ಅನಾರೋಗ್ಯ ಕಾಡಿದ ಪರಿಣಾಮ ಆಕೆಯನ್ನು ಮನೆಯಲ್ಲಿಯೇ ನೋಡಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಬಳಿಕ ರಾಜೇಶ್ವರಿ ಮೃತಪಟ್ಟಿದ್ದಾರೆ.
ಮರಣ ಪ್ರಮಾಣ ಪತ್ರ ಪಡೆದ ನಂತರ ಅಂತಿಮ ಸಂಸ್ಕಾರ
ನಾವು ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲಿಸಿದ್ದೇವೆ ಮತ್ತು ರಾಜೇಶ್ವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಬಳಿಯೂ ದೃಢಪಡಿಸಿದ್ದೇವೆ.
ಮುರುಗಾನಂದಂ ಅವರ ಅಂತ್ಯಕ್ರಿಯೆಗೆ ಹಣವಿಲ್ಲ ಎಂದು ಹೇಳಿದ್ದಾರೆ. ಅದರ ನಂತರ ನಾವು ಸರ್ಕಾರ ಮತ್ತು ಅನೇಕ ಎನ್‌ಜಿಒಗಳು ಆರ್ಥಿಕವಾಗಿ ದುರ್ಬಲರಾದವರಿಗೆ ತಮ್ಮ ಪ್ರೀತಿಪಾತ್ರರ ಅಂತಿಮ ಸಂಸ್ಕಾರ ಮಾಡಲು ಸಹಾಯ ಮಾಡುತ್ತವೆ ಎಂದು ಹೇಳಿದ್ದೇವೆ ಎಂದು ತಿಳಿಸಿದ್ದಾರೆ.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:23 pm, Fri, 9 September 22