ಚೆನ್ನೈ ಮಾರ್ಚ್ 25: ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ (Tamilnadu) ಟುಟಿಕೋರಿನ್ ಪೊಲೀಸರು ತಮಿಳುನಾಡಿನ ಮೀನುಗಾರಿಕಾ ಸಚಿವ ಅನಿತ ಆರ್ ರಾಧಾಕೃಷ್ಣನ್ (Anitha R Radhakrishnan) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಕೆ.ಕಾಮರಾಜ್ ಅವರ ಹೆಸರು ಉಲ್ಲೇಖಿಸಿದ್ದರು. ಹಿಂದಿನ ಮದ್ರಾಸ್ ರಾಜ್ಯದ ಮಾಜಿ ಮುಖ್ಯಮಂತ್ರಿ ಕೆ ಕಾಮರಾಜ್, ತಮಿಳುನಾಡಿನ ಕಾಂಗ್ರೆಸ್ ಐಕಾನ್ ಆಗಿದ್ದರು. ಮೋದಿ ವಿರುದ್ಧ ಗುಡುಗಿದ ಸಚಿವರು,”ಕಾಮರಾಜ್ ಅವರು ಮಲಗಿದ್ದಾಗ ಅವರನ್ನು ಕೊಲ್ಲಲು ಬಯಸಿದವರು ನೀವು ಅಲ್ಲವೇ” ಎಂದು ಹೇಳಿರುವುದು ವಿಡಿಯೊದಲ್ಲಿದೆ.
ಬಿಜೆಪಿ ಪದಾಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ನಾವು 294B (ಸಾರ್ವಜನಿಕವಾಗಿ ಅಶ್ಲೀಲ ಪದಗಳನ್ನು ಬಳಸುವುದು) ಅಡಿಯಲ್ಲಿ ಸಚಿವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಮೇಘನಪುರಂ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಬಿಜೆಪಿ ,ಚುನಾವಣಾ ಆಯೋಗಕ್ಕೂ ಪತ್ರ ಬರೆದಿದೆ.
ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ವಿಡಿಯೊ ಹಂಚಿಕೊಂಡ ಬಿಜೆಪಿ ರಾಜ್ಯ ಮುಖ್ಯಸ್ಥ ಅಣ್ಣಾಮಲೈ, “ನಮ್ಮ ಗೌರವಾನ್ವಿತ ಪ್ರಧಾನಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ಮತ್ತು ಕ್ಷಮಿಸಲಾಗದ ಸಾರ್ವಜನಿಕ ಭಾಷಣವನ್ನು ಮಾಡುವ ಮೂಲಕ ಡಿಎಂಕೆ ನಾಯಕರು ತಮ್ಮ ಅಸಭ್ಯ ವರ್ತನೆಯಲ್ಲಿ ಕೀಳುಮಟ್ಟಕ್ಕೆ ತಲುಪಿದ್ದರೆ ಎಂದು ಹೇಳಿದರು.”ಡಿಎಂಕೆ ಸಂಸದೆ ಕನಿಮೊಳಿ ಅವರು ವೇದಿಕೆಯಲ್ಲಿದ್ದರು. ಆದರೆ ಅವರು ತಮ್ಮ ಸಹೋದ್ಯೋಗಿಯನ್ನು ತಡೆಯಲಿಲ್ಲ ಎಂದು ಅವರು ಹೇಳಿದರು.
DMK leaders have reached a new low in their uncouth behaviour by passing vile comments & unpardonable public discourse against our Hon PM Thiru @narendramodi avl.
When they have nothing to criticise, this is the level DMK leaders have stooped. DMK MP Smt Kanimozhi avl was on… pic.twitter.com/sTdQSNjkir
— K.Annamalai (மோடியின் குடும்பம்) (@annamalai_k) March 24, 2024
ಕಳೆದ ವಾರ ಸೇಲಂನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಅವರು ಕಾಮರಾಜ್ ಅವರ ಪ್ರಾಮಾಣಿಕತೆ ಮತ್ತು ಮಧ್ಯಾಹ್ನದ ಊಟದಂತಹ ಕ್ರಾಂತಿಕಾರಿ ಯೋಜನೆಗಳು ನಮಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು. ಪ್ರಧಾನಿಯನ್ನು ಗುರಿಯಾಗಿಸಿಕೊಂಡು ಡಿಎಂಕೆಯ ಅನಿತಾ ಆರ್ ರಾಧಾಕೃಷ್ಣನ್ ಅವರು, ‘ನೀವು ಕಾಮರಾಜರು ನಿಮ್ಮನ್ನು ತಬ್ಬಿಕೊಂಡಿದ್ದಾರೇನೋ ಎಂಬಂತೆ ಮಾತನಾಡುತ್ತೀರಿ’ ಎಂದು ವಿಡಿಯೊದಲ್ಲಿ ಹೇಳಿದ್ದೆ.
ಈ ಆರೋಪಗಳಿಗೆ ಡಿಎಂಕೆ ಇನ್ನೂ ಪ್ರತಿಕ್ರಿಯಿಸಿಲ್ಲ.
ಇದನ್ನೂ ಓದಿ: ಅಸ್ಸಾಂ: ಪತ್ನಿಗೆ ಲೋಕಸಭಾ ಟಿಕೆಟ್ ಕೈತಪ್ಪಿದ ಹಿನ್ನೆಲೆ ಕಾಂಗ್ರೆಸ್ ತೊರೆದ ಶಾಸಕ ಭರತ್ ಚಂದ್ರ ನಾರಾ
ಅಂದಹಾಗೆ ಅನಿತ ರಾಧಾಕೃಷ್ಣನ್ ವಿವಾದಕ್ಕೀಡಾಗಿರುವುದು ಇದೇ ಮೊದಲೇನೂ ಅಲ್ಲ. ಭಾರತದ ಬಾಹ್ಯಾಕಾಶ ಸಂಸ್ಥೆಗಾಗಿ ಎರಡನೇ ಉಡಾವಣಾ ಪ್ಯಾಡ್‌ನ ರಚನೆಯನ್ನು ಶ್ಲಾಘಿಸಿ, ಅವರು ನೀಡಿದ ಪತ್ರಿಕೆಯ ಜಾಹೀರಾತು ಕಳೆದ ತಿಂಗಳು ತೀವ್ರ ಟೀಕೆಗೊಳಗಾಗಿತ್ತು. ಜಾಹೀರಾತು ಪೋಸ್ಟರ್‌ನಲ್ಲಿದ್ದ ರಾಕೆಟ್‌ನಲ್ಲಿ ಚೀನಾದ ಧ್ವಜದ ಚಿತ್ರವಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:13 pm, Mon, 25 March 24