Tamilnadu Rains: ತಮಿಳುನಾಡಿನಲ್ಲಿ ಎಂದಿಗಿಂತಲೂ ಶೇ.68ರಷ್ಟು ಅಧಿಕ ಮಳೆ; 24ಗಂಟೆಯಲ್ಲಿ ಮೂವರು ಸಾವು, ಕೃಷಿಭೂಮಿಗಳೆಲ್ಲ ಜಲಾವೃತ

24ಗಂಟೆಯಿಂದ ತಮಿಳುನಾಡಿನ 37 ಜಿಲ್ಲೆಗಳಲ್ಲಿ ಒಂದೇ ಸಮನೆ ಮಳೆ ಸುರಿಯುತ್ತಿದೆ. ಅದರಲ್ಲೂ ತಿರುಪತೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 39.91 ಎಂಎಂ ಮಳೆ ಸುರಿದಿದೆ.

Tamilnadu Rains: ತಮಿಳುನಾಡಿನಲ್ಲಿ ಎಂದಿಗಿಂತಲೂ ಶೇ.68ರಷ್ಟು ಅಧಿಕ ಮಳೆ; 24ಗಂಟೆಯಲ್ಲಿ ಮೂವರು ಸಾವು, ಕೃಷಿಭೂಮಿಗಳೆಲ್ಲ ಜಲಾವೃತ
ತುಂಬಿ ಹರಿಯುತ್ತಿರುವ ಪಾಲ ನದಿ (ಪಿಟಿಐ ಚಿತ್ರ)
Follow us
TV9 Web
| Updated By: Lakshmi Hegde

Updated on:Nov 20, 2021 | 5:19 PM

ತಮಿಳುನಾಡು ವರುಣಾರ್ಭಟಕ್ಕೆ (Tamil Nadu Rains) ಅಕ್ಷರಶಃ ನಲುಗಿದೆ. ಇದೀಗ ಈಶಾನ್ಯ ಮಾನ್ಸೂನ್​ ಅವಧಿಯಾಗಿದ್ದು, ತಮಿಳುನಾಡಿನಲ್ಲಿ ಈ ಸಮಯದಲ್ಲಿ ಎಂದಿಗಿಂತಲೂ ಆಗುವ ಮಳೆಯ ಶೇ.68ರಷ್ಟು ಹೆಚ್ಚು ಮಳೆ ಬಿದ್ದಿದೆ ಎಂದು ರಾಜ್ಯದ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಸಚಿವ ಕೆಕೆಎಸ್​ಎಸ್​ಆರ್ ಸಚಿವ ರಾಮಚಂದ್ರನ್​ ಹೇಳಿದ್ದಾರೆ. ಹಾಗೇ, ತಮಿಳುನಾಡಿನಲ್ಲಿ ಅಕ್ಟೋಬರ್​ 1ರಿಂದ ಇಲ್ಲಿಯವರೆಗೆ ಒಟ್ಟಾರೆ 518.99 ಎಂಎಂ ಮಳೆಯಾಗಿದ್ದಾಗಿಯೂ ಮಾಹಿತಿ ನೀಡಿದ್ದಾರೆ.

ತಮಿಳುನಾಡಿನಲ್ಲಿ ಮಳೆಯಿಂದ ಆಗುವ ಅನಾಹುತ, ಅವಘಡಗಳು ಹೆಚ್ಚುತ್ತಲೇ ಇವೆ. ಕಳೆದ 24ಗಂಟೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಇನ್ನು 300ಕ್ಕೂ ಹೆಚ್ಚು ಜಾನುವಾರಗಳು ಸಾವನ್ನಪ್ಪಿವೆ ಎಂದು ಸರ್ಕಾರ ಮಾಹಿತಿ ನೀಡಿದೆ. ಅದರಲ್ಲೂ ಕಾವೇರಿ ನದಿ ಮುಖಜಭೂಮಿಯ ಜಿಲ್ಲೆಗಳಿಗೆ ನೀರು ಒದಗಿಸುವ ಸೇಲಂನ ಮೆಟ್ಟೂರು ಸೇರಿ ಕೆಲವು ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಹೊರಬಿಡಲಾಗುತ್ತಿರುವುದು ಇನ್ನಷ್ಟು ಅಪಾಯದ ಆತಂಕಕ್ಕೆ ಕಾರಣವಾಗಿದೆ. ವಿಲ್ಲುಪುರಂನ ತೆನ್​ಪೆನ್ನೈ ಮತ್ತು ಕಾಂಚಿಪುರಂನ ಪಾಲಾರ್​ ನದಿಗಳು ತುಂಬಿ ಹರಿಯುತ್ತಿವೆ. ಮೆಟ್ಟೂರು ಜಲಾಶಯದಿಂದ 65 ಸಾವಿರ ಕ್ಯೂಸೆಕ್ಸ್​ ಮತ್ತು ಪೂಂಡಿ ಜಲಾಶಯದಿಂದ 29,684 ಕ್ಯೂಸೆಕ್ಸ್​ ನೀರು ಬಿಡಲಾಗುತ್ತಿದೆ.

ವಿಲ್ಲುಪುರಂನ ತೆನ್‌ಪೆನ್ನೈ ನದಿ ಉಕ್ಕಿ ಹರಿಯುತ್ತಿದ್ದರೆ, ಕಾಂಚೀಪುರಂನ ಪಾಲಾರ್‌ ತುಂಬಿ ಹರಿಯುತ್ತಿದೆ. ಕಳೆದ 24ಗಂಟೆಯಿಂದ ತಮಿಳುನಾಡಿನ 37 ಜಿಲ್ಲೆಗಳಲ್ಲಿ ಒಂದೇ ಸಮನೆ ಮಳೆ ಸುರಿಯುತ್ತಿದೆ. ಅದರಲ್ಲೂ ತಿರುಪತೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 39.91 ಎಂಎಂ ಮಳೆ ಸುರಿದಿದೆ. ವಿಲ್ಲುಪುರಂನಲ್ಲಿ ಬರೋಬ್ಬರಿ 18,500 ಹೆಕ್ಟೇರ್​​ಗಳಷ್ಟು ಕೃಷಿ ಭೂಮಿ ಜಲಾವೃತಗೊಂಡಿದೆ.  ರಾಜ್ಯಾದ್ಯಂತ ಅದರಲ್ಲೂ ಚೆನ್ನೈ, ಕಾಂಚಿಪುರಂ, ತಿರುವಲ್ಲೂರ್​ ಮತ್ತು ವೆಲ್ಲೋರ್​​ಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಎನ್​ಡಿಆರ್​ಎಫ್​ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಕೆಳಪ್ರದೇಶಗಳಲ್ಲಿರುವ ಜನರನ್ನು ಸ್ಥಳಾಂತರ ಮಾಡುವ ಕಾರ್ಯ ಭರದಿಂದ ಸಾಗುತ್ತಿವೆ.

ಇದನ್ನೂ ಓದಿ: ‘ಸಾಧು ನನ್ನ ಕೈಗೆ ಸಿಕ್ಕಿದ್ದರೆ ಒಂದೆರಡು ಏಟು ಚೆನ್ನಾಗಿ ಬಿದ್ದಿರುತ್ತಿತ್ತು’: ರವಿಚಂದ್ರನ್​

Published On - 5:19 pm, Sat, 20 November 21

ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ