ಆಂಧ್ರ ಪ್ರದೇಶ ಟೋಲ್ ಸಿಬ್ಬಂದಿ ಜತೆ ತಮಿಳುನಾಡು ವಿದ್ಯಾರ್ಥಿಗಳ ಜಗಳ, ವಾಹನ ಸಂಚಾರಕ್ಕೆ ಅಡ್ಡಿ
ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಕಾನೂನು ವಿದ್ಯಾರ್ಥಿಗಳನ್ನು ಹಿಡಿದು ನಿಲ್ಲಿಸಿ ಟೋಲ್ ಪ್ಲಾಜಾದಲ್ಲಿ ವಾಹನಗಳಿಗೆ ತೊಂದರೆಯಾಗದಂತೆ ನೋಡಿಕೊಂಡರೂ ಘರ್ಷಣೆ ಕೆಲಕಾಲ ಮುಂದುವರಿಯಿತು
ಪಾವತಿ ಸಂಬಂಧಿತ ವಿಷಯಕ್ಕೆ ಆಂಧ್ರಪ್ರದೇಶದ (Andhra Pradesh) ತಿರುಪತಿಯ ಟೋಲ್ ಪ್ಲಾಜಾದಲ್ಲಿ ಭಾನುವಾರ ತಮಿಳುನಾಡಿನ ಕಾನೂನು ಕಾಲೇಜಿನ ವಿದ್ಯಾರ್ಥಿಗಳನ್ನು (Tamil Nadu) ತಡೆದು ನಿಲ್ಲಿಸಿದ್ದಕ್ಕೆ ವಾಗ್ವಾದ ನಡೆದು ಪರಸ್ಪರ ಹೊಡೆದಾಡಿದ ಘಟನೆ ನಡೆದಿದೆ ವಿದ್ಯಾರ್ಥಿಗಳು ಟೋಲ್ ಬೂತ್ ಸಿಬ್ಬಂದಿಯ ಮೇಲೆ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿ, ಅಲ್ಲಿದ್ದ ಕೆಲವು ವಾಹನಗಳಿಗೆ ಹಾನಿ ಮಾಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಕಾನೂನು ವಿದ್ಯಾರ್ಥಿಗಳನ್ನು ಹಿಡಿದು ನಿಲ್ಲಿಸಿ ಟೋಲ್ ಪ್ಲಾಜಾದಲ್ಲಿ ವಾಹನಗಳಿಗೆ ತೊಂದರೆಯಾಗದಂತೆ ನೋಡಿಕೊಂಡರೂ ಘರ್ಷಣೆ ಕೆಲಕಾಲ ಮುಂದುವರಿಯಿತು ಎಂದು ಎನ್ಡಿಟಿವಿ ವರದಿ ಮಾಡಿದೆ.ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಹಿಂತಿರುಗುತ್ತಿದ್ದಾಗ ಕಾನೂನು ವಿದ್ಯಾರ್ಥಿಯೊಬ್ಬನ ಫಾಸ್ಟ್‌ಟ್ಯಾಗ್ ಸರಿಯಾಗಿ ನಿರ್ವಹಿಸದ ಕಾರಣ ಟೋಲ್ ಪ್ಲಾಜಾದಲ್ಲಿ ವಾಹನ ನಿಲ್ಲಿಸಲಾಗಿತ್ತು. ನಂತರ ವಿದ್ಯಾರ್ಥಿಯಲ್ಲಿ ಆತನ ಕಾರನ್ನು ಹಿಂದಕ್ಕೆ ಸರಿಸಿ ಹಿಂದೆ ಸರತಿಯಲ್ಲಿದ್ದ ಇತರ ವಾಹನಗಳಿಗೆ ದಾರಿ ಮಾಡಿಕೊಡಲು ಕೇಳಲಾಯಿತು.ಇದರಿಂದ ಕುಪಿತಗೊಂಡ ವಿದ್ಯಾರ್ಥಿಗಳು ಸಿಬ್ಬಂದಿ ಮೇಲೆ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
Students of a law college in Tamil Nadu attacked toll plaza staff in Andhra Pradesh's Tirupati district over toll fees and the ruckus led to a clash between two groups#TamilNadu #LawStudents #Tirupati #AndhraPradesh pic.twitter.com/SUv456gEG3
— Arun Pruthvy Sandilya (@arunsandilya) October 23, 2022
ಸ್ಥಳಕ್ಕೆ ಧಾವಿಸಿದ ಪೊಲೀಸರು ಇತರ ವಾಹನಗಳಿಗೆ ತೊಂದರೆ ಮಾಡದಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು. ಆದರೆ ವಿದ್ಯಾರ್ಥಿಗಳು ಪಟ್ಟುಬಿಡದೆ ತಮಿಳುನಾಡು ನೋಂದಣಿ ಹೊಂದಿರುವ ವಾಹನಗಳಿಗೆ ಮಾತ್ರ ದಾರಿ ಮಾಡಿಕೊಟ್ಟು ಆಂಧ್ರಪ್ರದೇಶದ ವಾಹನಗಳನ್ನು ಹಾದು ಹೋಗದಂತೆ ತಡೆದಿದ್ದಾರೆ ಎನ್ನಲಾಗಿದೆ. ಇದು ವಿದ್ಯಾರ್ಥಿಗಳು ಮತ್ತು ಸ್ಥಳೀಯರ ಗುಂಪಿನ ನಡುವೆ ಭಾರೀ ವಾಗ್ವಾದಕ್ಕೆ ಕಾರಣವಾಯಿತು.
ಘಟನೆಯ ಸಂಪೂರ್ಣ ತನಿಖೆಯನ್ನು ಪೊಲೀಸರು ಆರಂಭಿಸಿದ್ದು, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
Published On - 12:54 pm, Mon, 24 October 22