ದೀಪಾವಳಿ ಪ್ರಯುಕ್ತ ವಾಘಾ ಗಡಿಯಲ್ಲಿ ಬಿಎಸ್ಎಫ್-ಪಾಕ್ ಯೋಧರ ನಡುವೆ ಸಿಹಿ ವಿನಿಮಯ
ಭಾರತದ ಗಡಿ ಭದ್ರತಾ ಪಡೆ ಮತ್ತು ಪಾಕಿಸ್ತಾನ ರೇಂಜರ್‌ಗಳು ಅಟ್ಟಾರಿ-ವಾಘಾ ಗಡಿಯಲ್ಲಿ ಸಿಹಿ ವಿನಿಮಯ ಮಾಡಿಕೊಂಡಿದ್ದು,ಪಾಕ್ ಸೇನೆ ದೀಪಾವಳಿಯ ಶುಭಾಶಯ ತಿಳಿಸಿದೆ.
ದೆಹಲಿ: ಸೋಮವಾರ ದೀಪಾವಳಿ ಆಚರಣೆಯ ಅಂಗವಾಗಿ ಭಾರತದ ಗಡಿ ಭದ್ರತಾ ಪಡೆ (BSF) ಮತ್ತು ಪಾಕಿಸ್ತಾನ ರೇಂಜರ್‌ಗಳು ಅಟ್ಟಾರಿ-ವಾಘಾ ಗಡಿಯಲ್ಲಿ ಸಿಹಿ ವಿನಿಮಯ ಮಾಡಿಕೊಂಡರು. ದೀಪಾವಳಿ ಆಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಧರ ಜತೆ ಕಾರ್ಗಿಲ್‌ನಲ್ಲಿ ವಂದೇ ಮಾತರಂ ಹಾಡಿ, ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದ್ದಾರೆ. ಈ ವಿಡಿಯೊವನ್ನು ಟ್ವೀಟ್ ಮಾಡಿರುವ ಮೋದಿ A spirited Diwali in Kargil ಎಂದು ಶೀರ್ಷಿಕೆ ನೀಡಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ ಸೈನಿಕರಿಂದ ಸಿಹಿತಿಂಡಿ ವಿನಿಮಯ
West Bengal | Border Security Force’s (BSF) 176 Battalion exchanged sweets with Border Guard Bangladesh (BGB) at Fulbari, India-Bangladesh border near Siliguri, to mark the occasion of #Diwali pic.twitter.com/GtQd5XRK38
— ANI (@ANI) October 24, 2022
ಗಡಿ ಭದ್ರತಾ ಪಡೆಯ (BSF) 176 ಬೆಟಾಲಿಯನ್ ದೀಪಾವಳಿ ಸಂದರ್ಭದಲ್ಲಿ ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಪಶ್ಚಿಮ ಬಂಗಾಳದ ಫುಲ್ಬರಿಯಲ್ಲಿ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (BGB) ಜೊತೆಗೆ ಸಿಹಿ ವಿನಿಮಯ ಮಾಡಿಕೊಂಡಿತು.
A spirited Diwali in Kargil! pic.twitter.com/qtIGesk98x
— Narendra Modi (@narendramodi) October 24, 2022
ಯೋಧರೊಂದಿಗೆ ದೀಪಾವಳಿ ಆಚರಿಸಲು ರಜೌರಿಗೆ ಆಗಮಿಸಿದ ಜನರಲ್ ಅನಿಲ್ ಚೌಹಾಣ್
ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ನಿಯೋಜಿಸಲಾದ ಸೇನಾ ಯೋಧರೊಂದಿಗೆ ದೀಪಾವಳಿ ಆಚರಿಸಲು ಭಾರತದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ರಜೌರಿಗೆ ಆಗಮಿಸಿದರು.
ಸಶಸ್ತ್ರ ಪಡೆಗಳು ಗಡಿಗಳನ್ನು ರಕ್ಷಿಸುತ್ತಿರುವುದರಿಂದ ನೆಮ್ಮದಿಯಿಂದ ಮಲಗಬಹುದು
ಸಶಸ್ತ್ರ ಪಡೆಗಳು ನಮ್ಮ ಗಡಿಯನ್ನು ರಕ್ಷಿಸುತ್ತಿರುವುದರಿಂದ ಭಾರತದ ಪ್ರತಿಯೊಬ್ಬ ಪ್ರಜೆಯೂ ನೆಮ್ಮದಿಯಿಂದ ನಿದ್ರಿಸುತ್ತಿದ್ದಾರೆ ಎಂದು ಪ್ರಧಾನಿ ಕಾರ್ಗಿಲ್‌ನಲ್ಲಿ ಹೇಳಿದರು. “ಭಾರತದ ಸಶಸ್ತ್ರ ಪಡೆಗಳ ಉತ್ಸಾಹಕ್ಕೆ ನಾನು ತಲೆಬಾಗುತ್ತೇನೆ. ನಿಮ್ಮ ತ್ಯಾಗಗಳು ಯಾವಾಗಲೂ ನಮ್ಮ ದೇಶವನ್ನು ಹೆಮ್ಮೆಪಡುವಂತೆ ಮಾಡಿದೆ” ಎಂದು ಅವರು ಹೇಳಿದರು.
“ಕಳೆದ ಎಂಟು ವರ್ಷಗಳಲ್ಲಿ ಭಾರತವು 5 ನೇ ಅತಿದೊಡ್ಡ ಆರ್ಥಿಕತೆಯಾಗಿದ್ದು 5 ಸ್ಥಾನ ಮೇಲಕ್ಕೇರಿದೆ ಎಂದು ನೀವೆಲ್ಲರೂ ಹೆಮ್ಮೆಪಡುತ್ತೀರಿ ಎಂದು ನನಗೆ ತಿಳಿದಿದೆ. ಪ್ರಪಂಚದಾದ್ಯಂತ ವಿವಿಧ ನಾಗರಿಕತೆಗಳು ಅಭಿವೃದ್ಧಿ ಹೊಂದಿದವು ಮತ್ತು ಅಂತ್ಯಗೊಂಡಿವೆ, ಆದರೆ ಭಾರತದ ನಾಗರಿಕತೆಯು ಯಾವಾಗಲೂ ಸಾಧ್ಯವಿರುವ ಎಲ್ಲ ಸವಾಲುಗಳಿಂದ ಪುನರುಜ್ಜೀವನಗೊಂಡಿದೆ ಎಂದು ಕಾರ್ಗಿಲ್‌ನಲ್ಲಿ ಪ್ರಧಾನಿ ಮೋದಿ ಹೇಳಿದರು.
Published On - 1:51 pm, Mon, 24 October 22