Monkey: ಈ ಗ್ರಾಮದಲ್ಲಿರುವ 32 ಎಕರೆ ಜಮೀನು ಪೂರ್ವಜರಿಗೇ ಮೀಸಲು!
ಅಧಿಕೃತ ದಾಖಲೆಗಳ ಪ್ರಕಾರ ಮಂಗಗಳು ಗ್ರಾಮದಲ್ಲಿ 32 ಎಕರೆ ಭೂಮಿಯನ್ನು ಹೊಂದಿವೆ ಎಂದು ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಮಹಾನಿರ್ದೇಶಕ ಎಂವಿ ರಾವ್ ಅವರು ಟ್ವೀಟ್ ಮಾಡಿ ಖಚಿತಪಡಿಸಿದ್ದಾರೆ.
ಮುಂಬಯಿ: ಜಮೀನು ಅಂದ್ರೆ ಹೆಣಾನೂ ಬಾಯ್ಬಿಡುವ ಇಂದಿನ ದಿನ ಮಾನದಲ್ಲಿ ಮಹಾರಾಷ್ಟ್ರದ ಒಂದು ಹಳ್ಳಿಯಲ್ಲಿ ನಮ್ಮ ಪೂರ್ವಜರಿಗೇ 32 ಎಕರೆ ಜಮೀನನ್ನು ಮೀಸಲು ಇಡಲಾಗಿದೆ! ನಮ್ಮ ಪೂರ್ವಜರು ಅಂದ್ರೆ ಮಂಗನಿಂದ ಮಾನವ ಎಂಬಂತೆ ಮಂಗಗಳು! ಹೌದು ಈ ಹಳ್ಳಿಯಲ್ಲಿ ಮಂಗಗಳ ಹೆಸರಿಗೆ ಗುಂಟೆ ಅಲ್ಲ, ಒಂದೆಕರೆ ಅಲ್ಲ; ಬರೋಬ್ಬರಿ 32 ಎಕ್ರೆ ಜಮೀನು ಬಿಟ್ಟುಕೊಡಲಾಗಿದೆ! ಒಸ್ಮಾನಾಬಾದ್ (Osmanabad) ಜಿಲ್ಲೆಯ ಉಪ್ಪಾ ಗ್ರಾಮದಲ್ಲಿ (Upla gram panchayat) ಈ ರೀತಿ ಮಂಗಗಳ ಹೆಸರಿನಲ್ಲಿ ಜಮೀನು ಮೀಸಲಿಡಲಾಗಿದೆ. ಈ ಗ್ರಾಮದಲ್ಲಿ ಮಂಗಗಳಿಗೆ ವಿಶೇಷವಾದ ಮರ್ಯಾದೆ ಇದೆಯಂತೆ. ಪೂರ್ವಜರ ಕಾಲದಿಂದಲೂ ಮಂಗಗಳು ಮನೆ ಬಾಗಿಲಿಗೆ ಬಂದರೆ ಅವುಗಳಿಗೆ ಊಟ ಹಾಕುವ ವಾಡಿಕೆಯಿದೆ. ಹಾಗೆಯೇ ಊರಲ್ಲಿ ಯಾರದ್ದೇ ಮದುವೆಯಾದರೂ ಅಲ್ಲಿ ಮೊದಲನೇ ಉಡುಗೊರೆಯನ್ನು ಮಂಗಕ್ಕೆ ಕೊಡಲಾಗುತ್ತದೆ.
ಈ ಊರಿನಲ್ಲಿರುವ 32 ಎಕ್ರೆ ಜಮೀನು ಊರಿನ ಮಂಗಗಳ ಹೆಸರಿನಲ್ಲಿ ನೋಂದಣಿಯಾಗಿದೆ! ಆದರೆ ಅದನ್ನು ಯಾವ ಕಾಲದಲ್ಲಿ, ಯಾರು ನೋಂದಣಿ ಮಾಡಿಸಿದರು ಎನ್ನುವ ಬಗ್ಗೆ ನಮಗೂ ಮಾಹಿತಿಯಿಲ್ಲ ಎನ್ನುತ್ತಾರೆ ಈಗಿನ ಗ್ರಾಮ ಪಂಚಾಯತ್ ಅಧ್ಯಕ್ಷರು. ಊರಿನಲ್ಲಿ ಸುಮಾರು ನೂರು ಮಂಗಗಳು ಇವೆ. ಸದ್ಯ ಮಂಗಗಳ ಹೆಸರಿನಲ್ಲಿರುವ ಜಾಗವನ್ನು ಸರಕಾರ ಪ್ಲಾಂಟೇಶನ್ ಮಾಡಿದೆ. ಮಂಗಗಳು ಒಂದೇ ಸ್ಥಳದಲ್ಲಿ ಹೆಚ್ಚು ಕಾಲ ಇರದ ಕಾರಣ ವರ್ಷಗಳು ಕಳೆದಂತೆ ಅವುಗಳ ಸಂಖ್ಯೆ ಕಡಿಮೆಯಾಗಿದೆ. ಈ ಗ್ರಾಮವು ಈಗ ಸುಮಾರು 100 ಜನರಿಗೆ ನೆಲೆಯಾಗಿದೆ ಎಂದು ಪಿಟಿಐ ವರದಿ ಮಾಡಿದೆ .
ಅಧಿಕೃತ ದಾಖಲೆಗಳ ಪ್ರಕಾರ ಮಂಗಗಳು ಗ್ರಾಮದಲ್ಲಿ 32 ಎಕರೆ ಭೂಮಿಯನ್ನು ಹೊಂದಿವೆ ಎಂದು ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಮಹಾನಿರ್ದೇಶಕ ಎಂವಿ ರಾವ್ ಅವರು ಟ್ವೀಟ್ ಮಾಡಿ ಖಚಿತಪಡಿಸಿದ್ದಾರೆ.
Monkeys are owners of 32 acres land in this village?
Yes.. as per official record, true over the years also
Upala Gram Panchayat, Osmanabad district,Maharashtra
Land at present has plantation Number of owners ? @ 100 now pic.twitter.com/YU1hMl3YpI
— M V Rao @ Public Service (@mvraoforindia) October 16, 2022