ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಮಾರ್ಕ್ಸ್‌ವಾದಿ ನಾಯಕ ಎನ್ ಶಂಕರಯ್ಯ ನಿಧನ
ಶಂಕರಯ್ಯ ಅವರು 1940 ರಲ್ಲಿ ಕಮ್ಯುನಿಸ್ಟ್ ಚಳುವಳಿಗೆ ಸೇರಿದರು. 1964 ರಲ್ಲಿ ಸಿಪಿಐ-ಎಂ ಸ್ಥಾಪಿಸಲು ಹೊರನಡೆದ 32 ರಾಷ್ಟ್ರೀಯ ಕೌನ್ಸಿಲ್ ಸದಸ್ಯರಲ್ಲಿ ಒಬ್ಬರು. ಅವರು 1967, 1977 ಮತ್ತು 1980 ರಲ್ಲಿ ರಾಜ್ಯ ವಿಧಾನಸಭೆಗೆ ಮೂರು ಬಾರಿ ಆಯ್ಕೆಯಾದರು. 1921 ರಲ್ಲಿ ಕೋವಿಲ್ಪಟ್ಟಿಯಲ್ಲಿ ಜನಿಸಿದ್ದ ಶಂಕರಯ್ಯ 1995 ರಿಂದ 2002 ರವರೆಗೆ ತಮಿಳುನಾಡಿನ ಸಿಪಿಐ-ಎಂ ರಾಜ್ಯ ಕಾರ್ಯದರ್ಶಿಯೂ ಆಗಿದ್ದರು.

ಚೆನ್ನೈ ನವೆಂಬರ್ 15: ದೇಶದ ಹಿರಿಯ ಕಮ್ಯುನಿಸ್ಟ್ ನಾಯಕ (communist leaders), ಸ್ವಾತಂತ್ರ್ಯ ಹೋರಾಟಗಾರ (Freedom fighter) ಎನ್ ಶಂಕರಯ್ಯ (N Sankaraiah) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಬೆಳಗ್ಗೆ ಚೆನ್ನೈನ (Chennai) ಆಸ್ಪತ್ರೆಯಲ್ಲಿ ನಿಧನರಾದರು. ಅವರು 102 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ಶಂಕರಯ್ಯ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಅವರು ಬುಧವಾರ ಬೆಳಿಗ್ಗೆ 9 ಗಂಟೆಯ ನಂತರ ನಿಧನರಾದರು ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮುಖಂಡರು ತಿಳಿಸಿದ್ದಾರೆ. ಅವರ ಪಾರ್ಥಿವ ಶರೀರವನ್ನು ಚೆನ್ನೈನ ಸಿಪಿಐ-ಎಂ ಕಚೇರಿಯಲ್ಲಿರಿಸಲಾಗಿದ್ದು ಜನರಿಗೆ ಗೌರವ ಸಲ್ಲಿಸಲು ಅನುವು ಮಾಡಿಕೊಡಲಾಗುವುದು. ನವೆಂಬರ್ 16 ರಂದು ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶಂಕರಯ್ಯ ಅವರು ದೇಶದಲ್ಲಿ ದೇಶದ ಕಮ್ಯುನಿಸ್ಟ್ ಚಳವಳಿಯ ಮಾರ್ಗದರ್ಶಿ ಶಕ್ತಿ ಮತ್ತು ಸ್ಫೂರ್ತಿಯ ಮೂಲ ಎಂದು ಬಣ್ಣಿಸಿದರು.
ಕಮ್ಯುನಿಸ್ಟ್ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಶಂಕರಯ್ಯ ಅವರು ಚಿಕ್ಕ ವಯಸ್ಸಿನಲ್ಲಿ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದರು. ಅವರು 102 ನೇ ವಯಸ್ಸಿನವರೆಗೆ ಭಾರತ, ಕಾರ್ಮಿಕ ವರ್ಗ ಮತ್ತು ತಮಿಳರ ನೆಲಕ್ಕಾಗಿ ಬದುಕಿದ್ದರು. ಅವರ ತ್ಯಾಗ. ತಮಿಳುನಾಡಿನ ಇತಿಹಾಸದಲ್ಲಿ ಉಳಿಯುತ್ತದೆ ಎಂದು ಹೇಳಿದ್ದಾರೆ.
தோழர் என்.சங்கரய்யா அவர்களின் உடல் இறுதி அஞ்சலி செலுத்துவதற்காக #CPIM மாநிலக்குழு அலுவலகத்தில் வைக்கப்பட்டுள்ளது. #ComradeNS #NSankaraiah #FreedomFighter #CommunistLeader #CPIMLeader More: https://t.co/qwiG4pOmCQ pic.twitter.com/kLNRDqvOms
— CPIM Tamilnadu (@tncpim) November 15, 2023
ಸ್ಟಾಲಿನ್ ಸರ್ಕಾರವು ಶಂಕರಯ್ಯ ಅವರು 2021 ರಲ್ಲಿ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು ಸ್ಥಾಪಿಸಿದ ತಗೈಸಲ್ ತಮಿಝರ್ (ಪ್ರಖ್ಯಾತ ತಮಿಳು) ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿಯಾಗಿದ್ದರು.
ಶಂಕರಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸುವ ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯದ ಕ್ರಮವನ್ನು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ಕಾರವೂ ಬೆಂಬಲಿಸಿತು ಆದರೆ ಈ ಪ್ರಯತ್ನವನ್ನು ರಾಜಭವನ ಸ್ಥಗಿತಗೊಳಿಸಿತು. ನವೆಂಬರ್ 2 ರಂದು ವಿಶ್ವವಿದ್ಯಾನಿಲಯದ ಘಟಿಕೋತ್ಸವದ ಸಮಯದಲ್ಲಿ ಕಡತಕ್ಕೆ ಸಹಿ ಹಾಕದ ರಾಜ್ಯಪಾಲ ಆರ್‌ಎನ್ ರವಿ ಅವರ ನಿರ್ಧಾರವನ್ನು ವಿರೋಧಿಸಿ ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಅವರು ಎರಡು ವಿಶ್ವವಿದ್ಯಾಲಯದ ಘಟಿಕೋತ್ಸವಗಳನ್ನು ಬಹಿಷ್ಕರಿಸಿದರು. ಬುಧವಾರ, ಸ್ಟಾಲಿನ್ ರವಿ ಹೆಸರನ್ನು ಹೇಳದೆ, ಶಂಕರಯ್ಯ ಅವರನ್ನು ಗೌರವಿಸಲು ವಿಳಂಬದ ಬಗ್ಗೆ ಉಲ್ಲೇಖವನ್ನು ಮಾಡಿದರು.
“ಈ ಸಮಯದಲ್ಲಿ ತಮಿಳುನಾಡಿನ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ತಿಳಿದಿಲ್ಲದ ಸಣ್ಣ ಮನಸ್ಸಿನ ಜನರ ಬಗ್ಗೆ ನಾನು ವಿಷಾದಿಸುತ್ತೇನೆ ಮತ್ತು ಅವರ ದ್ರೋಹದಿಂದ ನಾನು ದುಃಖಿತನಾಗಿದ್ದೇನೆ” ಎಂದು ಸ್ಟಾಲಿನ್ ಹೇಳಿದರು.
ಇದನ್ನೂ ಓದಿ: ಛತ್ತೀಸ್‌ಗಢ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹೀನಾಯ ಸೋಲು ಖಚಿತ: ಮೋದಿ
ಮಧುರೈನ ಅಮೆರಿಕನ್ ಕಾಲೇಜಿನಲ್ಲಿ ಇತಿಹಾಸದ ವಿದ್ಯಾರ್ಥಿಯಾಗಿದ್ದ ಶಂಕರಯ್ಯ ಅವರು ತಮ್ಮ ಅಂತಿಮ ಪರೀಕ್ಷೆಗಳಿಗೆ ಮುನ್ನವೇ ಬಂಧಿಸಲ್ಪಟ್ಟಿದ್ದರಿಂದ ಪದವಿಯನ್ನು ಪಡೆದಿಲ್ಲ ಎಂದು ಸಿಪಿಎಂ ಹೇಳಿಕೆ ಒತ್ತಿಹೇಳಿದೆ. ಸ್ವಾತಂತ್ರ್ಯದ ಮುನ್ನಾದಿನದವರೆಗೆ ಅವರು ಎಂಟು ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದರು.
ಶಂಕರಯ್ಯ ಅವರು 1940 ರಲ್ಲಿ ಕಮ್ಯುನಿಸ್ಟ್ ಚಳುವಳಿಗೆ ಸೇರಿದರು. 1964 ರಲ್ಲಿ ಸಿಪಿಐ-ಎಂ ಸ್ಥಾಪಿಸಲು ಹೊರನಡೆದ 32 ರಾಷ್ಟ್ರೀಯ ಕೌನ್ಸಿಲ್ ಸದಸ್ಯರಲ್ಲಿ ಒಬ್ಬರು. ಅವರು 1967, 1977 ಮತ್ತು 1980 ರಲ್ಲಿ ರಾಜ್ಯ ವಿಧಾನಸಭೆಗೆ ಮೂರು ಬಾರಿ ಆಯ್ಕೆಯಾದರು. 1921 ರಲ್ಲಿ ಕೋವಿಲ್ಪಟ್ಟಿಯಲ್ಲಿ ಜನಿಸಿದ್ದ ಶಂಕರಯ್ಯ 1995 ರಿಂದ 2002 ರವರೆಗೆ ತಮಿಳುನಾಡಿನ ಸಿಪಿಐ-ಎಂ ರಾಜ್ಯ ಕಾರ್ಯದರ್ಶಿಯೂ ಆಗಿದ್ದರು. ಅವರು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ