ಐಟಿಆರ್​ ವೆಬ್​ಸೈಟ್​​ನಲ್ಲಿ ತಾಂತ್ರಿಕ ದೋಷ; ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಕೆ ಗಡುವು ಮತ್ತೆ ವಿಸ್ತರಣೆಯಾಗುವ ಸಾಧ್ಯತೆ?

ಐಟಿಆರ್​ ವೆಬ್​ಸೈಟ್​​ನಲ್ಲಿ ತಾಂತ್ರಿಕ ದೋಷ; ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಕೆ ಗಡುವು ಮತ್ತೆ ವಿಸ್ತರಣೆಯಾಗುವ ಸಾಧ್ಯತೆ?
ಸಾಂಕೇತಿಕ ಚಿತ್ರ

ಆದರೆ ಕೊನೇ ದಿನ ಇನ್ನೆರಡು ದಿನ ಇರುವಾಗ ಮತ್ತೆ ಗಡುವು ಮುಂದೂಡುವಂತೆ ಆದಾಯ ತೆರಿಗೆ ಪಾವತಿದಾರರು ಆಗ್ರಹ ಮಾಡುತ್ತಿದ್ದಾರೆ. ಹೀಗಾಗಿ ಐಟಿ ರಿಟರ್ನ್ಸ್​ ಸಲ್ಲಿಕೆ ಗಡುವು ಮತ್ತೆ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ.

TV9kannada Web Team

| Edited By: Lakshmi Hegde

Dec 29, 2021 | 9:57 AM

2020-21ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ (Income Tax Return)​ ಸಲ್ಲಿಕೆಗೆ ಡಿ.31 ಕೊನೇ ದಿನವಾಗಿದೆ. ಆದರೆ ಸೋಷಿಯಲ್ ಮೀಡಿಯಾ(Social Media)ದಲ್ಲಿ #Extend_Due_Date_Immediately ಎಂಬ ಹ್ಯಾಷ್​ಟ್ಯಾಗ್​ ಸಿಕ್ಕಾಪಟೆ ಟ್ರೆಂಡ್ ಆಗುತ್ತಿದೆ. ಅಂದರೆ ಆದಾಯ ತೆರಿಗೆ ರಿಟರ್ನ್ಸ್​ ಪಾವತಿಗೆ ನೀಡಲಾದ ಗಡುವನ್ನು ಕೂಡಲೇ ಮುಂದೂಡಬೇಕು ಎಂದು ಆದಾಯ ತೆರಿಗೆ ಪಾವತಿದಾರರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸುತ್ತಿದ್ದಾರೆ. ಆದಾಯ ತೆರಿಗೆ ರಿಟರ್ನ್ಸ್​​ ವೆಬ್​ಸೈಟ್​​ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ, ತೆರಿಗೆ ಪಾವತಿದಾರರು ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಕೆ ಮಾಡಲು ತೀವ್ರ ಕಷ್ಟಪಡುತ್ತಿದ್ದಾರೆ.   

ವಾಸ್ತವದಲ್ಲಿ 2020-21ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್​​​ ಸಲ್ಲಿಕೆಗೆ 2021ರ ಜುಲೈ 31ನ್ನು ಕೊನೇದಿನವೆಂದು ಕೇಂದ್ರ ಸರ್ಕಾರ ಘೋಷಿಸಿತ್ತು. ಆದರೆ ಕೊರೊನಾ ಎರಡನೇ ಅಲೆ ಮತ್ತು ಆಗಲೂ ಕೂಡ ಐಆರ್​ಟಿ ವೆಬ್​ಸೈಟ್​​ನಲ್ಲಿ ತಾಂತ್ರಿಕ ದೋಷ ಕಾಣಿಸಿದ ಹಿನ್ನೆಲೆಯಲ್ಲಿ ಗಡುವನ್ನು 2021ರ  ಡಿಸೆಂಬರ್​ 31ರವರೆಗೆ ವಿಸ್ತರಿಸಲಾಗಿತ್ತು. ಆದರೆ ಕೊನೇ ದಿನ ಇನ್ನೆರಡು ದಿನ ಇರುವಾಗ ಮತ್ತೆ ಗಡುವು ಮುಂದೂಡುವಂತೆ ಆದಾಯ ತೆರಿಗೆ ಪಾವತಿದಾರರು ಆಗ್ರಹ ಮಾಡುತ್ತಿದ್ದಾರೆ. ಹೀಗಾಗಿ ಐಟಿ ರಿಟರ್ನ್ಸ್​ ಸಲ್ಲಿಕೆ ಗಡುವು ಮತ್ತೆ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ.

ಡಿಸೆಂಬರ್​ 31 ಕೊನೇ ದಿನ ಎಂಬ ಕಾರಣಕ್ಕೆ ಇದೀಗ ವೆಬ್​ಸೈಟ್​​ನಲ್ಲಿ ಒಂದೇ ಬಾರಿಗೆ ಲಾಗಿನ್​ ಆಗುವವರ ಸಂಖ್ಯೆ ಅಧಿಕವಾಗಿದೆ. ಹೀಗೆ ಒಂದೇ ಸಲಕ್ಕೆ ಸಾವಿರಾರು, ಲಕ್ಷ ಜನರು ಒಂದು ವೆಬ್​ಸೈಟ್​ಗೆ ಲಾಗಿನ್​ ಆದರೆ ಅಲ್ಲಿ ತಾಂತ್ರಿಕ ದೋಷ ಆಗುವುದು ಸಾಮಾನ್ಯ. ಈಗ ಕಳೆದ ಎರಡು ಮೂರು ದಿನಗಳಿಂದಲೂ ಐಆರ್​ಟಿ ವೆಬ್​ಸೈಟ್​ ಲಾಗಿನ್​ ಸಾಧ್ಯವಾಗುತ್ತಿಲ್ಲ ಎಂದು ಟ್ಯಾಕ್ಸ್​ ಪಾವತಿದಾರರು ದೂರುತ್ತಿದ್ದಾರೆ. ಈ ಡಿಸೆಂಬರ್​ 31 ಎಂಬುದು ತೆರಿಗೆಪಾವತಿದಾರರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಕೊನೇ ದಿನವೋ ಅಥವಾ ವೆಬ್​ಸೈಟ್​ ಸಾಫ್ಟ್​ವೇರ್​ ಡೆವಲಪರ್​​ಗಳಿಗೆ ಕೊನೇ ದಿನವೋ? ಲಾಗಿನ್​ ಆಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೂಡಲೇ ಗಡುವನ್ನು ವಿಸ್ತರಿಸಿ ಎಂದು ಟ್ವಿಟರ್ ಬಳಕೆದಾರರೊಬ್ಬರು ಹೇಳಿದ್ದಾರೆ. ಮತ್ತೊಬ್ಬರು ಸ್ಟಕ್​ ಆಗಿರುವ ಐಟಿಆರ್​ ವೆಬ್​ಸೈಟ್​ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಪ್ರತಿದಿನ ಇಂಥ ದೋಷ, ಎರರ್​ ತೋರಿಸುವಂಥ ವೆಬ್​ಸೈಟ್​ ಡೆವಲಪ್​ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದು ವ್ಯಂಗ್ಯವಾಡಿದವರೂ ಇದ್ದಾರೆ.

ಇದನ್ನೂ ಓದಿ: 85 ಲಕ್ಷ ರೂ. ಕಾರಿನ ಬಗ್ಗೆ ಮಾತಾಡಿ ಕಣ್ಣೀರು ಹಾಕಿದ ಅಲ್ಲು ಅರ್ಜುನ್​; ವೇದಿಕೆಯಲ್ಲಿ ನಡೆದಿದ್ದೇನು?

Follow us on

Related Stories

Most Read Stories

Click on your DTH Provider to Add TV9 Kannada