50 ಲಕ್ಷ ರೂ ವಜ್ರದ ಉಂಗುರ ಕದ್ದ ಆಸ್ಪತ್ರೆಯ ನರ್ಸ್: ಭಯಪಟ್ಟು ಕಮೋಡ್‌ನಲ್ಲಿ ಎಸೆದು, ಫ್ಲಶ್ ಮಾಡಿಬಿಟ್ಟರು! ಆಮೇಲೆ?
ಮೇಜಿನ ಮೇಲಿದ್ದ ಉಂಗುರವನ್ನು ಆಸ್ಪತ್ರೆಯ ಸಿಬ್ಬಂದಿಯೇ ಕದ್ದಿರಬಹುದು ಎಂದು ಪೊಲೀಸರು ಮೊದಮೊದಲು ಶಂಕಿಸಿದ್ದರು. ನಂತರ ಪೊಲೀಸರು ಒಬ್ಬ ಮಹಿಳಾ ನರ್ಸ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಪೊಲೀಸರ ವಿಚಾರಣೆಯಿಂದ ತಾನು ಸಿಕ್ಕಿಬೀಳುವ ಭಯದಲ್ಲಿ ಗಾಬರಿಗೊಂಡ ನರ್ಸ್, ಅದನ್ನು ಟಾಯ್ಲೆಟ್‌ಗೆ ಎಸೆದು ಫ್ಲಶ್ ಮಾಡಿದ್ದಳು.
ಹೈದರಾಬಾದ್: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಒಬ್ಬರು (Hospital Nurse) ಭಾರೀ ಕೈಚಳಕ ತೋರಿಸಿದ್ದಾರೆ. ಚಿಕಿತ್ಸೆಗೆ ಬಂದ ಮಹಿಳೆ ಧರಿಸಿದ್ದ 50 ಲಕ್ಷ ರೂಪಾಯಿ ಮೌಲ್ಯದ ವಜ್ರದ ಉಂಗುರವನ್ನು (diamond ring) ಯಾವುದೋ ಮಾಯದಲ್ಲಿ ಎಗರಿಸಿಬಿಟ್ಟಿದ್ದಾಳೆ. ಬಳಿಕ ಸಿಕ್ಕಿಬೀಳುವ ಭಯದಿಂದ ಬಾತ್ ರೂಂ ಕಮೋಡ್ ಗೆ ಎಸೆದು ಫ್ಲಶ್ ಮಾಡಿಬಿಟ್ಟಿದ್ದಾಳೆ ( commode and flush). ಘಟನೆ ಕುರಿತು ಪೊಲೀಸರು ತನಿಖೆ ನಡೆಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ. ಪೊಲೀಸರ ವಿವರಗಳ ಪ್ರಕಾರ…
ಜ್ಯುಬಿಲಿ ಹಿಲ್ಸ್‌ನಲ್ಲಿರುವ ಎಫ್‌ಎಂಎಸ್ ಎಂಬ ದಂತ ಚಿಕಿತ್ಸಾಲಯದಿಂದ 50 ಲಕ್ಷ ರೂಪಾಯಿ ಮೌಲ್ಯದ ವಜ್ರದ ಉಂಗುರವನ್ನು ಕಳವು ಮಾಡಲಾಗಿದೆ. ನರೇಂದ್ರ ಕುಮಾರ್ ಅಗರ್ವಾಲ್ ಅವರ ಸೊಸೆ ಜೂನ್ 27 ರಂದು ತಪಾಸಣೆಗಾಗಿ ಕ್ಲಿನಿಕ್‌ಗೆ ಬಂದಿದ್ದರು. ಚಿಕಿತ್ಸೆಯ ಸಮಯದಲ್ಲಿ ಅವರು ತಾವು ಬೆರಳಿಗೆ ಧರಿಸಿದ್ದ ವಜ್ರದ ಉಂಗುರವನ್ನು ತೆಗೆದು ಪಕ್ಕದ ಮೇಜಿನ ಮೇಲೆ ಇಟ್ಟಿದ್ದಾರೆ. ಆದರೆ ತಪಾಸಣೆಯ ನಂತರ ಅದನ್ನು ತೆಗೆದುಕೊಳ್ಳಲು ಮರೆತು ಬರಿಗೈಯಲ್ಲಿ ಹೊರಟುಹೋಗಿದ್ದಾರೆ.
ಮನೆಗೆ ಹಿಂದಿರುಗಿದ ನಂತರ, ಅವರು ಕ್ಲಿನಿಕ್‌ನಲ್ಲಿ ಉಂಗುರವನ್ನು ಮರೆತು ಹೋಗಿದ್ದು ಜ್ಞಾಪಿಸಿಕೊಂಡಿದ್ದಾರೆ. ತಕ್ಷಣ ಕ್ಲಿನಿಕ್‌ಗೆ ಓಡಿಹೋಗಿದ್ದಾರೆ. ಕ್ಲಿನಿಕ್ ಸಿಬ್ಬಂದಿಯನ್ನು ಉಂಗುರದ ಬಗ್ಗೆ ವಿಚಾರಿಸಿದಾಗ ಏನೂ ಪ್ರಯೋಜನವಾಗಿಲ್ಲ. ಜೊತೆಗೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಇದರಿಂದ ಅನುಮಾನಗೊಂಡು ನರೇಂದ್ರ ಕುಮಾರ್ ಅವರು ಜ್ಯುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆಯ ಅಂಗವಾಗಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಸಿಬ್ಬಂದಿಯನ್ನು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ.
ಪೊಲೀಸರ ವಿಚಾರಣೆಯ ಆರಂಭಕ್ಕೇ… ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ತನ್ನ ಪರ್ಸ್‌ನಲ್ಲಿ ಯಾರೋ ಟಿಶ್ಯೂ ಪೇಪರ್‌ನಲ್ಲಿ ಸುತ್ತಿದ ಉಂಗುರವನ್ನು ಹಾಕಿದ್ದರು. ಅದರಿಂದ ಭಯಗೊಂಡು ತಾನು ಅದನ್ನು ಕಮೋಡ್‌ನಲ್ಲಿ ಫ್ಲಶ್ ಮಾಡಿದ್ದಾಗಿಯೂ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ತಕ್ಷಣವೇ ಪ್ಲಂಬರ್ ಅನ್ನು ಕರೆದು ಕಮೋಡ್‌ಗೆ ಜೋಡಿಸಿದ ಪೈಪ್ ಅನ್ನು ತೆಗೆಸಿದ್ದಾರೆ. ಆಗ ಉಂಗುರ ಸಿಕ್ಕಿದ್ದು, ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ.
ಮೇಜಿನ ಮೇಲಿದ್ದ ಉಂಗುರವನ್ನು ಆಸ್ಪತ್ರೆಯ ಸಿಬ್ಬಂದಿಯೇ ಕದ್ದಿರಬಹುದು ಎಂದು ಪೊಲೀಸರು ಮೊದಮೊದಲು ಶಂಕಿಸಿದ್ದರು. ನಂತರ ಪೊಲೀಸರು ಒಬ್ಬ ಮಹಿಳಾ ನರ್ಸ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಪೊಲೀಸರ ವಿಚಾರಣೆಯಿಂದ ತಾನು ಸಿಕ್ಕಿಬೀಳುವ ಭಯದಲ್ಲಿ ಗಾಬರಿಗೊಂಡ ನರ್ಸ್, ಅದನ್ನು ಟಾಯ್ಲೆಟ್‌ಗೆ ಎಸೆದು ಫ್ಲಶ್ ಮಾಡಿದ್ದಳು.
ಇತರೆ ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ