ಹೈದರಾಬಾದ್: ಪಶುವೈದ್ಯೆ ದಿಶಾಳ ಸಾಮೂಹಿಕ ಅತ್ಯಾಚಾರ, ಹತ್ಯೆ ಇಡೀ ದೇಶವನ್ನೇ ಬೆಚ್ಚಿಬೀಳುವಂತೆ ಮಾಡಿತ್ತು. ಅದರ ಪ್ರತಿ ಉತ್ತರವಾಗಿ ದುರ್ಜನರನ್ನು ಮಟ್ಟ ಹಾಕಲು ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನ್ ನಾಲ್ವರೂ ಅತ್ಯಾಚಾರಿ-ಹಂತಕ ಆರೋಪಿಗಳನ್ನು ಎನ್ಕೌಂಟರ್ ಮಾಡಿದ್ದರು.
ಈ ಪ್ರಕರಣ ವಿಚಾರಣೆ ತೆಲಂಗಾಣ ಕೋರ್ಟ್ನಲ್ಲಿ ನಡೆಯಿತಾದರೂ ಕೋರ್ಟ್, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ. ಹಾಗಾಗಿ ಆರೋಪಿಗಳ ಮೃತದೇಹವನ್ನ ಮೆಹಬೂಬ ನಗರದಿಂದ ಗಾಂಧಿ ಆಸ್ಪತ್ರೆಗೆ ಸಾಗಿಸಿ, ಸಂರಕ್ಷಿಸಿಡಲು ಆದೇಶ ನೀಡಿದೆ. ಕೋರ್ಟ್ ಆದೇಶದಂತೆ ಆ್ಯಂಬುಲೆನ್ಸ್ನಲ್ಲಿ ದೇಹಗಳನ್ನು ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೀಗಾಗಿ ಪಾಪಿ ಆರೋಪಿಗಳ ದೇಹ ಮಣ್ಣು ಸೇರದೆ ಇನ್ನೂ ಹಾಗೆಯೇ ಇದೆ.