ಉತ್ತರ ಪ್ರದೇಶ: ಮದ್ಯ ಮಾಫಿಯಾ ಬಗ್ಗೆ ವರದಿ ಮಾಡಿದ್ದ ಪತ್ರಕರ್ತ ನಿಗೂಢ ರೀತಿಯಲ್ಲಿ ಸಾವು

| Updated By: ರಶ್ಮಿ ಕಲ್ಲಕಟ್ಟ

Updated on: Jun 14, 2021 | 1:58 PM

Sulabh Srivastava: ತಮ್ಮ ವರದಿಯನ್ನು ಪ್ರಕಟಿಸಿದ ನಂತರ ಮದ್ಯ ಮಾಫಿಯಾದ ಜನರು ತನ್ನ ಮೇಲೆ ಕೋಪಗೊಂಡಿದ್ದಾರೆ ಅವರು ನನಗೆ ಮತ್ತು ನನ್ನ ಕುಟುಂಬಕ್ಕೆ ಹಾನಿ ಮಾಡಲು ಬಯಸಿದ್ದಾರೆ ಎಂದು ಸುಲಭ್ ಶ್ರೀವಾತ್ಸವ ದೂರು ನೀಡಿರುವುದಾಗಿ ಮೂಲಗಳಿಂದ ತಿಳಿಸಿವೆ.

ಉತ್ತರ ಪ್ರದೇಶ: ಮದ್ಯ ಮಾಫಿಯಾ ಬಗ್ಗೆ ವರದಿ ಮಾಡಿದ್ದ ಪತ್ರಕರ್ತ ನಿಗೂಢ ರೀತಿಯಲ್ಲಿ ಸಾವು
ಸುಲಭ್ ಶ್ರೀವಾತ್ಸವ (ಟ್ವಿಟರ್ ಚಿತ್ರ)
Follow us on

ಲಕ್ನೋ: ಉತ್ತರ ಪ್ರದೇಶದ ಪ್ರತಾಪಗಡ ಜಿಲ್ಲೆಯ ಟೆಲಿವಿಷನ್ ಪತ್ರಕರ್ತರೊಬ್ಬರು ಭಾನುವಾರ ರಾತ್ರಿ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾರೆ. ಎಬಿಪಿ ನ್ಯೂಸ್ ಮತ್ತು ಎಬಿಪಿ ಗಂಗಾ ವಾಹಿನಿಯ ಪತ್ರಕರ್ತರಾಗಿದ್ದ ಸುಲಭ್ ಶ್ರೀವಾತ್ಸವ  ಮೃತಪಟ್ಟಿದ್ದು ಒಂದು ದಿನ ಮುಂಚೆ ತನಗೆ ಜೀವ ಬೆದರಿಕೆ ಇದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಪ್ರತಾಪಗಡದಲ್ಲಿನ ಮದ್ಯ ಮಾಫಿಯಾ ಬಗ್ಗೆ ವರದಿ ಮಾಡಿದ್ದ ನಂತರ ಶ್ರೀವಾತ್ಸವ ಅವರಿಗೆ ಜೀವ ಬೆದರಿಕೆ ಬಂದಿತ್ತು.

ತಮ್ಮ ವರದಿಯನ್ನು ಪ್ರಕಟಿಸಿದ ನಂತರ ಮದ್ಯ ಮಾಫಿಯಾದ ಜನರು ತನ್ನ ಮೇಲೆ ಕೋಪಗೊಂಡಿದ್ದಾರೆ ಅವರು ನನಗೆ ಮತ್ತು ನನ್ನ ಕುಟುಂಬಕ್ಕೆ ಹಾನಿ ಮಾಡಲು ಬಯಸಿದ್ದಾರೆ ಎಂದು ಸುಲಭ್ ಶ್ರೀವಾತ್ಸವ ದೂರು ನೀಡಿರುವುದಾಗಿ ಮೂಲಗಳಿಂದ ತಿಳಿಸಿವೆ.

ಆದಾಗ್ಯೂ, ಶ್ರೀವಾತ್ಸವ ಅವರ ಮೋಟಾರ್ ಸೈಕಲ್ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಶ್ರೀವಾತ್ಸವ ಅವರು ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಕೆಲಸ ಮುಗಿಸಿ ನಂತರ ತಮ್ಮ ಮೋಟಾರ್‌ಸೈಕಲ್‌ನಲ್ಲಿ ಹಿಂದಿರುಗುತ್ತಿದ್ದರು. ಇಟ್ಟಿಗೆ ಗೂಡು ಬಳಿ ಅವರು ಮೋಟಾರ್ ಸೈಕಲ್ ನಿಂದ ಬಿದ್ದಿದ್ದಾರೆ. ಕೆಲವು ಕಾರ್ಮಿಕರು ಅವರನ್ನು ರಸ್ತೆಯಿಂದ ಮೇಲಕ್ಕೆತ್ತಿ ನಂತರ ಅವರ ಸ್ನೇಹಿತರಿಗೆ ಕರೆ ಮಾಡಿದ್ದಾರೆ. ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಶ್ರೀವಾತ್ಸವ ಅನರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಪ್ರತಾಪಗಡ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶ್ರೀವಾತ್ಸವ ಅವರ ಬೈಕ್ ರಸ್ತೆ ಬದಿಯ ಹ್ಯಾಂಡ್‌ಪಂಪ್‌ಗೆ ಡಿಕ್ಕಿ ಹೊಡೆದ ನಂತರ ಬಿದ್ದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಈ ವಿಷಯದಲ್ಲಿ ಇತರ ಕೋನಗಳನ್ನು ಸಹ ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರು.


ಏತನ್ಮಧ್ಯೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸರ್ಕಾರವನ್ನು ಮದ್ಯ ಮಾಫಿಯಾ ಅಲಿಗಡದಿಂದ ಪ್ರತಾಪಗಡದವರೆಗೆ ಹತ್ಯೆಮಾಡಿದೆ ಆದರೆ ಉತ್ತರ ಪ್ರದೇಶ ಸರ್ಕಾರ ಮೌನವಾಗಿದೆ ಅವರು ಟ್ವೀಟ್​ನಲ್ಲಿ ಮಾಡಿದ್ದಾರೆ. “ಜಂಗಲ್ ರಾಜ್” ಅನ್ನು ಪೋಷಿಸುವ ಉತ್ತರಪ್ರದೇಶ ಸರ್ಕಾರವು ಪತ್ರಕರ್ತ ಸುಲಭ್ ಶ್ರೀವಾತ್ಸವ ಅವರ ಕುಟುಂಬ ಸದಸ್ಯರ ಕಣ್ಣೀರಿಗೆ ಏನಾದರೂ ಉತ್ತರವನ್ನು ನೀಡುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:  ಉತ್ತರ ಪ್ರದೇಶ ಚುನಾವಣೆಯಲ್ಲಿ ಲವ್ ಜಿಹಾದ್, ಗೋ ಭಯೋತ್ಪಾದನೆ ವರ್ಕೌಟ್ ಆಗಲ್ಲ: ಆರ್​ಎಲ್​ಡಿ ಮುಖ್ಯಸ್ಥ ಜಯಂತ್ ಚೌಧರಿ

( Television journalist based in Uttar Pradesh found dead under mysterious circumstance after liquor mafia’s threat)

Published On - 12:33 pm, Mon, 14 June 21