ಮಾಜಿ ಸಚಿವ ಇಟಾಲಾ ರಾಜೇಂದರ್ ಬಿಜೆಪಿಗೆ ಸೇರ್ಪಡೆ; ಭೂಕಬಳಿಕೆ ಆರೋಪದಡಿ ಟಿಆರ್​ಎಸ್​ ತೊರೆದಿದ್ದರು..

ರಾಜೇಂದರ್​ ಟಿಆರ್​ಎಸ್​ನಲ್ಲಿ ಪ್ರಭಾವಿ ನಾಯಕರಾಗಿದ್ದರು. ಹಣಕಾಸು ಮತ್ತು ಆರೋಗ್ಯ ಇಲಾಖೆಯಂತ ಉನ್ನತ ಇಲಾಖೆಗಳ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ ಇವರ ಕುಟುಂಬದ ವಿರುದ್ಧ ಭೂಕಬಳಿಕೆ ಆರೋಪ ಕೇಳಿಬಂದಿತ್ತು.

ಮಾಜಿ ಸಚಿವ ಇಟಾಲಾ ರಾಜೇಂದರ್ ಬಿಜೆಪಿಗೆ ಸೇರ್ಪಡೆ; ಭೂಕಬಳಿಕೆ ಆರೋಪದಡಿ ಟಿಆರ್​ಎಸ್​ ತೊರೆದಿದ್ದರು..
ಬಿಜೆಪಿಗೆ ಸೇರ್ಪಡೆಯಾದ ಇಟಾಲಾ ರಾಜೇಂದರ್​​
Follow us
TV9 Web
| Updated By: Lakshmi Hegde

Updated on:Jun 14, 2021 | 2:27 PM

ದೆಹಲಿ: ಇತ್ತೀಚೆಗಷ್ಟೇ ಟಿಆರ್​ಎಸ್​ ಪಕ್ಷಕ್ಕೆ ರಾಜೀನಾಮೆ ನೀಡಿದ್ದ, ತೆಲಂಗಾಣ ಮಾಜಿ ಸಚಿವ ಇಟಾಲಾ ರಾಜೇಂದರ್​ ಇಂದು ಬಿಜೆಪಿಗೆ ಸೇರ್ಪಡೆಯಾದರು. ಹುಜುರಾಬಾದ್​ ಕ್ಷೇತ್ರದ ಶಾಸಕರೂ ಆಗಿದ್ದ ಇವರು ಟಿಆರ್​ಎಸ್​ ಸರ್ಕಾರದ ಸಂಪುಟದಲ್ಲಿ ಆರೋಗ್ಯ ಇಲಾಖೆ ಸಚಿವರಾಗಿದ್ದರು. ಆದರೆ ಭೂಕಬಳಿಕೆ ಆರೋಪದಡಿ ರಾಜೇಂದರ್​​ರನ್ನು ಸಂಪುಟದಿಂದ ಉಚ್ಚಾಟಿಸಲಾಗಿತ್ತು. ಅದಾದ ಬಳಿಕ ರಾಜೇಂದರ್​ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿಯಾಗಿದ್ದರು. ಇಟಾಲಾ ರಾಜೇಂದರ್​ ಬಿಜೆಪಿ ಸೇರ್ಪಡೆ ಬಗ್ಗೆ ತುಂಬದಿನಗಳಿಂದಲೂ ಊಹಾಪೋಹಗಳು ಹರಿದಾಡುತ್ತಲೇ ಇದ್ದವು.

ಇಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್​ ಸಮ್ಮುಖದಲ್ಲಿ ಇಟಾಲಾ ರಾಜೇಂದರ್​ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಳಿಕ ಮಾತನಾಡಿದ ಪ್ರಧಾನ್​, ನಾವು ಇಟಾಲಾ ರಾಜೇಂದರ್​ ಅವರನ್ನು ಸಂತೋಷದಿಂದ ಬಿಜೆಪಿಗೆ ಸ್ವಾಗತಿಸುತ್ತೇವೆ. ಮುಂದಿನ ವರ್ಷ ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಖಂಡಿತ ನಾವು ಅಧಿಕಾರ ಹಿಡಿಯುತ್ತೇವೆ ಎಂದು ಹೇಳಿದರು.

ರಾಜೇಂದರ್​ ಟಿಆರ್​ಎಸ್​ನಲ್ಲಿ ಪ್ರಭಾವಿ ನಾಯಕರಾಗಿದ್ದರು. ಹಣಕಾಸು ಮತ್ತು ಆರೋಗ್ಯ ಇಲಾಖೆಯಂತ ಉನ್ನತ ಇಲಾಖೆಗಳ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ ಇವರ ಕುಟುಂಬದ ವಿರುದ್ಧ ಭೂಕಬಳಿಕೆ ಆರೋಪ ಕೇಳಿಬಂದಿತ್ತು. ಮೇದಕ್​ ಜಿಲ್ಲೆಯ ಹೊರವಲಯ ಅಚಾಂಪೇಟ್​​ನಲ್ಲಿರುವ ಭೂಮಿಯನ್ನು ಇಟೆಲಾ ರಾಜೇಂದರ್​ ಅವರ ಕುಟುಂಬಕ್ಕೆ ಸೇರಿದ ಜಮುನಾ ಹ್ಯಾಚರೀಸ್​ ಸಂಸ್ಥೆ ಕಬಳಿಸಿದೆ ಎಂಬ ಆರೋಪ ಕೇಳಿಬರುತ್ತಿದ್ದಂತೆ, ಇಟಾಲಾರನ್ನು ಆರೋಗ್ಯ ಇಲಾಖೆ ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಈ ಬಗ್ಗೆ ರಾಜೇಂದರ್ ತೀವ್ರ ಅಸಮಾಧಾನ ಹೊರಹಾಕಿದ್ದರು. ನನ್ನ ವಿರುದ್ಧ ಆರೋಪದ ವಿಚಾರಣೆ ಮುಗಿಯುವ ಮೊದಲೇ ಸಂಪುಟದಿಂದ ಕೈಬಿಡಲಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಭೂಕಬಳಿಕೆ ಆರೋಪ ಎದುರಿಸುತ್ತಿರುವ ತೆಲಂಗಾಣ ಮಾಜಿ ಸಚಿವ ಇಟಾಲಾ ರಾಜೇಂದರ್​ ರಾಜೀನಾಮೆ; ಶೀಘ್ರವೇ ಬಿಜೆಪಿ ಸೇರ್ಪಡೆ?

150 ಅಡಿ ಆಳದ ಬೋರ್​ವೆಲ್​ಗೆ ಬಿದ್ದ 4 ವರ್ಷದ ಮಗು; ಪೊಲೀಸರಿಂದ ರಕ್ಷಣಾ ಕಾರ್ಯಾಚಾರಣೆ

Published On - 2:13 pm, Mon, 14 June 21