ನಮ್ಮ ಕಚೇರಿಗೆ ಬಂದು ಮಮತಾ ಬ್ಯಾನರ್ಜಿ ಭಯದ ವಾತಾವರಣ ನಿರ್ಮಾಣ ಮಾಡಿದರು: ಸಿಬಿಐ

|

Updated on: May 19, 2021 | 3:28 PM

Narada Case: ತನಿಖಾ ಸಂಸ್ಥೆಯನ್ನು ಭಯಭೀತಗೊಳಿಸುವ ಮತ್ತು ಅದರ ಶಾಸನಬದ್ಧ ಕಾರ್ಯಗಳನ್ನು ಮುಕ್ತವಾಗಿ ಮತ್ತು ನಿರ್ಭಯವಾಗಿ ನಿರ್ವಹಿಸುವುದನ್ನು ತಡೆಯುವ ಹುನ್ನಾರದ ಭಾಗವಾಗಿದೆ ಇದು ಎಂದು ಸಿಬಿಐ ತಮ್ಮ ಅರ್ಜಿಯಲ್ಲಿ ಹೇಳಿದೆ.

ನಮ್ಮ ಕಚೇರಿಗೆ ಬಂದು ಮಮತಾ ಬ್ಯಾನರ್ಜಿ ಭಯದ ವಾತಾವರಣ ನಿರ್ಮಾಣ ಮಾಡಿದರು: ಸಿಬಿಐ
ಸಿಬಿಐ ಕಚೇರಿ ಮುಂದೆ ಮಮತಾ ಬ್ಯಾನರ್ಜಿ
Follow us on

ಕೊಲ್ಕತ್ತಾ: ನಾರದ ಲಂಚ ಪ್ರಕರಣಕ್ಕೆ ಸಂಬಂಧಿಸಿಕಲ್ಕತ್ತಾ ಹೈಕೋರ್ಟ್‌ನಲ್ಲಿ ಇಂದು ನಡೆದ ವಿಚಾರಣೆಯ ವೇಳೆ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅವರ ಕಾನೂನು ಸಚಿವ ಮೊಲೊಯ್ ಘಾಟಕ್ ಮತ್ತು ಪಕ್ಷದ ಮುಖಂಡ ಕಲ್ಯಾಣ್ ಬ್ಯಾನರ್ಜಿ ಹಾಜರಿದ್ದರು. ಪ್ರಸ್ತುಚ ಪ್ರಕರಣವನ್ನು ರಾಜ್ಯದಿಂದ ವರ್ಗಾವಣೆ ಮಾಡಲು ಕೋರಿರುವ ಸಿಬಿಐ, ಈ ವಾರದ ಆರಂಭದಲ್ಲಿ ಬಂಧನಕ್ಕೊಳಗಾದ ಮತ್ತು ಈಗ ಜೈಲಿನಲ್ಲಿದ್ದ ನಾಲ್ವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಬೇಕೆಂದು ಕೇಳಿದೆ.

ಸೋಮವಾರ ನಾವು ಬಂಧಿಸಿದ ಆ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆಯಲು ಸಾಧ್ಯವಾಗಲಿಲ್ಲ. ಬಂಧಿತ ಆರೋಪಿಗಳ ಪರವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಇತರರು ಭಯದ ವಾತಾವರಣ ನಿರ್ಮಾಣ ಮಾಡಿದ್ದರು ಎಂದು ಸಿಬಿಐ ಹೈಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದೆ.

ಬಂಗಾಳ ಸಚಿವರಾದ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ, ತೃಣಮೂಲ ಶಾಸಕ ಮದನ್ ಮಿತ್ರ ಮತ್ತು ಸೋವನ್ ಚಟರ್ಜಿ ಅವರ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿದ ನಂತರ ಸೋಮವಾರ ನಾರದ ಪ್ರಕರಣದಲ್ಲಿ ಸಿಬಿಐ ಬಂಧಿಸಿತ್ತು.

ಬಂಧನದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಒಂದು ದೊಡ್ಡ ಗುಂಪು ಸಿಬಿಐನ ಕೋಲ್ಕತಾ ಕಚೇರಿಯ ಹೊರಗೆ ಜಮಾಯಿಸಿತ್ತು. ಅಲ್ಲಿಗೆ ತೆರಳಿದ ಮುಖ್ಯಮಂತ್ರಿಗಳು ಸ್ಥಳದಲ್ಲಿಯೇ ಧರಣಿ ನಡೆಸಿದ್ದರು, ಮಂತ್ರಿಗಳನ್ನು ಬಂಧಿಸಿದ ರೀತಿ “ಸರಿಯಾದ ಕಾರ್ಯವಿಧಾನವಿಲ್ಲ” ಎಂದು ಆರೋಪಿಸಿದ್ದ ಮಮತಾ ನನ್ನನ್ನೂ ಬಂಧಿಸಿ ಎಂದು ವಾದಿಸಿದ್ದರು.

ಸಿಬಿಐ ಕಚೇರಿಯ ಹೊರಗೆ ಸಾವಿರಾರು ದುಷ್ಕರ್ಮಿಗಳು ಮತ್ತು ಮಾಧ್ಯಮದವರು ಇರುವಂತೆ ಮುಖ್ಯಮಂತ್ರಿ ನೋಡಿಕೊಂಡರು ಎಂದು ಸಿಬಿಐ ಹೇಳಿದೆ.  ತನಿಖಾ ಸಂಸ್ಥೆಯನ್ನು ಭಯಭೀತಗೊಳಿಸುವ ಮತ್ತು ಅದರ ಶಾಸನಬದ್ಧ ಕಾರ್ಯಗಳನ್ನು ಮುಕ್ತವಾಗಿ ಮತ್ತು ನಿರ್ಭಯವಾಗಿ ನಿರ್ವಹಿಸುವುದನ್ನು ತಡೆಯುವ ಹುನ್ನಾರದ ಭಾಗವಾಗಿದೆ ಇದು ಎಂದು ಸಿಬಿಐ ತಮ್ಮ ಅರ್ಜಿಯಲ್ಲಿ ಹೇಳಿದೆ.

ಈ ಸಂದರ್ಭಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವುದು ಮತ್ತು ಅವರನ್ನು ಬೇರೆಡೆಗೆ ಕರೆದೊಯ್ಯುವ ಪ್ರಕ್ರಿಯೆ ಕಾನೂನು ಸುವ್ಯವಸ್ಥೆಗೆ ಕಾರಣವಾಗಬಹುದು.

ಬಂಧಿತ ನಾಲ್ವರು ನಾಯಕರು ಸೋಮವಾರ ಏಳು ಗಂಟೆಗಳ ನಾಟಕೀಯ ಬೆಳವಣಿಗೆ ನಂತರ ಜಾಮೀನು ಪಡೆದಿದ್ದರು. ಆದರೆ ಸಿಬಿಐ ಮೇಲ್ಮನವಿಯ ನಂತರ ಅದೇ ದಿನ ಸಂಜೆ ಅದನ್ನು ಹೈಕೋರ್ಟ್ ತಡೆಹಿಡಿಯಿತು.ಹೈಕೋರ್ಟ್ ತಮ್ಮ ಆದೇಶವನ್ನು ಹಿಂಪಡೆಯಪಬೇಕು ಎಂದು ಸಚಿವರು ಮನವಿ ಸಲ್ಲಿಸಿದ ಕೂಡಲೇ ಸಿಬಿಐ ಸುಪ್ರೀಂಕೋರ್ಟ್ ನಲ್ಲಿ ಕೇವಿಯಟ್ ದಾಖಲಿಸಿದೆ.

ಏನಿದು ನಾರದ ಕಾರ್ಯಾಚರಣೆ?
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಯ ಉನ್ನತ ಶ್ರೇಣಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡು ಮ್ಯಾಥ್ಯೂ ಸ್ಯಾಮುಯೆಲ್ ನಡೆಸಿದ ಕುಟುಕು ಕಾರ್ಯಾಚರಣೆಯೇ ನಾರದಾ ಕುಟುಕು ಕಾರ್ಯಾಚರಣೆ. ಇದು ಹಲವಾರು ರಾಜಕಾರಣಿಗಳು ಮತ್ತು ಉನ್ನತ ದರ್ಜೆಯ ಪೊಲೀಸ್ ಅಧಿಕಾರಿಯೊಬ್ಬರು  ಕಂಪನಿಗೆ ಅನಧಿಕೃತ ಸಹಾಯವನ್ನು ನೀಡುವ ಬದಲು ನಗದು ಲಂಚ ಸ್ವೀಕರಿಸುವುದನ್ನು ತೋರಿಸಿದೆ.  ಭಾರತೀಯ ಸುದ್ದಿ ಪತ್ರಿಕೆ ತೆಹಲ್ಕಾಕ್ಕಾಗಿ 2014 ರಲ್ಲಿ ಮಾಡಿದ ಈ ಕುಟುಕು ಕಾರ್ಯಾಚರಣೆ 2016 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ತಿಂಗಳುಗಳ ಮೊದಲು ಖಾಸಗಿ ವೆಬ್‌ಸೈಟ್‌ನಲ್ಲಿ ಪ್ರಕಟವಾಯಿತು.

ಜೂನ್ 2017 ನಿಂದ ಕೇಂದ್ರ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಂಸದೀಯ ನೀತಿ ಸಮಿತಿ ಈ ಪ್ರಕರಣದ ತನಿಖೆ ನಡೆಸುತ್ತಿವೆ. ತೃಣಮೂಲ ಕಾಂಗ್ರೆಸ್ ಆರೋಪಗಳನ್ನು ತಿರಸ್ಕರಿಸಿದ್ದು, ದೇಣಿಗೆ ನೀಡುವ ರೀತಿಯಲ್ಲಿ ಹಣವನ್ನು ಸ್ವೀಕರಿಸಲಾಗಿದೆ ಎಂದು ಹೇಳಿಕೊಂಡಿದೆ.

ಇದನ್ನೂ ಓದಿ: ಪಶ್ವಿಮ ಬಂಗಾಳ: ನಾರದಾ ಲಂಚ ಪ್ರಕರಣ ಸುಪ್ರೀಮ್ ಕೋರ್ಟ್​ ಅಂಗಳ ತಲುಪಿತು!

Narada Sting Case: ಸುವೇಂದು ಅಧಿಕಾರಿಯೂ ಲಂಚ ಸ್ವೀಕರಿಸಿದ್ದರು, ಅವರನ್ನೇಕೆ ಬಂಧಿಸಿಲ್ಲ; ಪತ್ರಕರ್ತ ಮ್ಯಾಥ್ಯೂ ಸ್ಯಾಮುಯೆಲ್ ಪ್ರಶ್ನೆ

(Terror Created By West Bengal CM Mamata Banerjee in Kolkata office says CBI In Narada Case Plea)

 

Published On - 3:16 pm, Wed, 19 May 21