ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಮಾಣ ವಚನ ನಾಳೆ, ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ 500 ಮಂದಿ

Kerala Cabinet: ಕೊವಿಡ್ ನಿಯಂತ್ರಣಕ್ಕಾಗಿ  ಟ್ರಿಪಲ್ ಲಾಕ್ ಲಾಕ್‌ಡೌನ್ ಹೇರಿರುವ ತಿರುವನಂತಪುರಂನಲ್ಲಿ 500 ಜನರನ್ನು ಸೇರಿಸಿ  ಪ್ರಮಾಣ ವಚನ ಸಮಾರಂಭವನ್ನು ನಡೆಸಲು  ನಿರ್ಧರಿಸಿರುವುದಕ್ಕೆ  ಹೈಕೋರ್ಟ್ ರಾಜ್ಯ ಸರ್ಕಾರದಿಂದ ವಿವರಣೆ ಕೋರಿದೆ.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಮಾಣ ವಚನ ನಾಳೆ, ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ 500 ಮಂದಿ
ಪಿಣರಾಯಿ ವಿಜಯನ್ (ಕೃಪೆ: ಪಿಣರಾಯಿ ವಿಜಯನ್ ಅವರ ಫೇಸ್​ಬುಕ್ ಖಾತೆ )
Follow us
ರಶ್ಮಿ ಕಲ್ಲಕಟ್ಟ
|

Updated on: May 19, 2021 | 2:01 PM

ತಿರುವನಂತಪುರಂ: ಕೇರಳದಲ್ಲಿ ಎರಡನೇ ಬಾರಿ ಅಧಿಕಾರಕ್ಕೇರುತ್ತಿರುವ ಪಿಣರಾಯಿ ವಿಜಯನ್ ಮತ್ತು ನೂತನ ಸಚಿವರ ಪ್ರಮಾಣ ವಚನ ನಾಳೆ ತಿರುವನಂತಪುರಂ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆಯಲಿದೆ . ಈ ಕಾರ್ಯಕ್ರಮದಲ್ಲಿ 500 ಮಂದಿ ಭಾಗಿಯಾಗುವುದಾಗಿ ಎಲ್ ಡಿಎಫ್ ಹೇಳಿದೆ. ಆದಾಗ್ಯೂ,ರಾಜ್ಯದಲ್ಲಿ ಕೊವಿಡ್ ಲಾಕ್ ಡೌನ್ ಇರುವಾಗ ಇಷ್ಟೊಂದು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರ ಬಗ್ಗೆ ಟೀಕೆ ಕೇಳಿ ಬಂದಿದೆ. ಪಿಣರಾಯಿ ವಿಜಯನ್ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಇಷ್ಟೊಂದು ಜನರು ಭಾಗಿಯಾಗುತ್ತಿರುವುದು ಅಜಾರೂಕತೆಯ ಕಾರ್ಯ. ಇದಕ್ಕೆ ತಡೆಯೊಡ್ಡಬೇಕು ಎಂದು ಹಿರಿಯ ವಿಜ್ಞಾನಿಯೊಬ್ಬರು ಮಂಗಳವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಕೇರಳದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಹೇರಿ ಸಾಮಾನ್ಯ ಜನರು ಮನೆಯೊಳಗೆ ಕುಳಿತುಕೊಳ್ಳುವಂತೆ ಮಾಡಲಾಗಿದೆ ಎಂದು ನಿವೃತ್ತ ವಿಜ್ಞಾನಿ ಸಲ್ಲಿಸಿದ ಅರ್ಜಿಯಲ್ಲಿ ಹೇಳಲಾಗಿದೆ.

ರಾಜಕಾರಣಿಗಳು ಮತ್ತು ಅಧಿಕಾರದಲ್ಲಿ ಕುಳಿತವರು ಪದೇ ಪದೇ ಲಾಕ್‌ಡೌನ್ ಮಾನದಂಡಗಳನ್ನು ಉಲ್ಲಂಘಿಸುತ್ತಿದ್ದಾರೆ ಮತ್ತು ಜನರು ತಮ್ಮ ಕಾರ್ಯಗಳಲ್ಲಿ ಭಾಗವಹಿಸದಂತೆ ಮತ್ತು ದೈಹಿಕ ಅಂತರ ಕಾಪಾಡುವಂತೆ ಆದೇಶಿಸುತ್ತಿದ್ದಾರೆ. ಇದು ಬೇಲಿಯೇ ಎದ್ದು ಹೊಲವ ಮೇಯ್ದಂತೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ . ನ್ಯಾಯಲಯ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ನಿವೃತ್ತ ವಿಜ್ಞಾನಿ ಮತ್ತು ಸಾರ್ವಜನಿಕ ನೀತಿ ಕಾರ್ಯಕರ್ತರು ಆಗಿರುವ ಎಂ.ಶಜಹಾನ್ ಉನ್ನತ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ.

ಪಿಣರಾಯಿ ವಿಜಯನ್ ಅವರು ಗುರುವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 40 ವರ್ಷಗಳಲ್ಲಿ ಮೊದಲ ಬಾರಿಗೆ ಸತತ ಎರಡನೇ ಅವಧಿಯನ್ನು ಎಲ್​ಡಿಎಫ್ ಸರ್ಕಾರ ಮುಂದುವರಿಸಿದ. ಗುರುವಾರ ತಿರುವನಂತಪುರಂ ಸೆಂಟ್ರಲ್ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು 50 ಕ್ಕೂ ಹೆಚ್ಚು ಜನರ ಸಾರ್ವಜನಿಕ ಕೂಟಗಳನ್ನು ನಿಷೇಧಿಸುವ ನಿಯಮವನ್ನು ಸಡಿಲಿಸಿದ್ದಾರೆ. ಈ ಸ್ಥಳದಲ್ಲಿ ಸುಮಾರು 500 ಅತಿಥಿಗಳಿಗೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ.  ಗುರುವಾರ ಸಂಜೆ 3.30ಕ್ಕೆ  ಕಾರ್ಯಕ್ರಮ ನಡೆಯಲಿದೆ .

ವಿವರಣೆ  ಕೇಳಿದ  ಹೈಕೋರ್ಟ್

ಕೊವಿಡ್ ನಿಯಂತ್ರಣಕ್ಕಾಗಿ  ಟ್ರಿಪಲ್ ಲಾಕ್ ಲಾಕ್‌ಡೌನ್ ಹೇರಿರುವ ತಿರುವನಂತಪುರಂನಲ್ಲಿ 500 ಜನರನ್ನು ಸೇರಿಸಿ  ಪ್ರಮಾಣ ವಚನ ಸಮಾರಂಭವನ್ನು ನಡೆಸಲು  ನಿರ್ಧರಿಸಿರುವುದಕ್ಕೆ  ಹೈಕೋರ್ಟ್ ರಾಜ್ಯ ಸರ್ಕಾರದಿಂದ ವಿವರಣೆ ಕೋರಿದೆ. ಅಫಿಡವಿಟ್ ವಿರುದ್ಧ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿ ನ್ಯಾಯಾಲಯ ಸರ್ಕಾರದಿಂದ ವಿವರಣೆ ಕೋರಿತು.

ಪಿಣರಾಯಿ ವಿಜಯನ್ ನೇತೃತ್ವದ ಸಚಿವ ಸಂಪುಟದಲ್ಲಿರು ಸಚಿವರಿವರು ಪಿಣರಾಯಿ ವಿಜಯನ್ – ಸಾರ್ವಜನಿಕ ಆಡಳಿತ, ಗೃಹ ವ್ಯವಹಾರ, ವಿಜಿಲೆನ್ಸ್, ಐಟಿ ಮತ್ತು ಪರಿಸರ ಕೆ.ಎನ್. ಬಾಲಗೋಪಾಲ್- ವಿತ್ತ  ಸಚಿವ ವೀಣಾ ಜಾರ್ಜ್- ಆರೋಗ್ಯ ಪಿ. ರಾಜೀವ್- ಕೈಗಾರಿಕೆ ಕೆ.ರಾಧಾಕೃಷ್ಣನ್ – ದೇವಸ್ವಂ, ಸಂಸದೀಯ ವ್ಯವಹಾರ, ಹಿಂದುಳಿದ ಕಲ್ಯಾಣ ಆರ್. ಬಿಂದು- ಉನ್ನತ ಶಿಕ್ಷಣ ವಿ.ಶಿವಂಕುಟ್ಟಿ –  ಶಿಕ್ಷಣ, ಉದ್ಯೋಗ ಎಂ.ವಿ. ಗೋವಿಂದನ್- ಸ್ಥಳೀಯ ಸಂಸ್ಧೆ,ಅಬಕಾರಿ ಪಿ.ಎ. ಮೊಹಮ್ಮದ್ ರಿಯಾಜ್- ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ವಿ.ಎನ್. ವಾಸವನ್- ಸಹಕಾರ ಕೆ. ಕೃಷ್ಣಂಕುಟ್ಟಿ- ವಿದ್ಯುತ್ ಆಂಟನಿ ರಾಜು- ಸಾರಿಗೆ ಎ.ಕೆ. ಶಶೀಂದ್ರನ್ – ಅರಣ್ಯ ಇಲಾಖೆ ರೋಶಿ ಅಗಸ್ಟೀನ್- ಜಲಸಂಪನ್ಮೂಲ ಇಲಾಖೆ ಅಹ್ಮದ್ ದೇವರ್ ಕೋವಿಲ್- ಬಂದರು ಸಜಿ ಚೆರಿಯನ್- ಮೀನುಗಾರಿಕೆ ಮತ್ತು ಸಂಸ್ಕೃತಿ ವಿ. ಅಬ್ದುರೆಹಿಮಾನ್ – ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಲಸಿಗ ವ್ಯವಹಾರಗಳು ಜೆ.ಚಿಂಜುರಾಣಿ – ಡೈರಿ ಇಲಾಖೆ, ಪಶುಸಂಗೋಪನೆ ಕೆ.ರಾಜನ್ – ರೆವೆನ್ಯೂ ಪಿ.ಪ್ರಸಾದ್- ಕೃಷಿ ಜಿ.ಆರ್.ಅನಿಲ್ – ಸಿವಿಲ್ ಸಪ್ಲೈ

ಇದನ್ನೂ ಓದಿ: ಕೇರಳ ವಿಧಾನಸಭೆ: ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದಲ್ಲಿ ಕೆ.ಕೆ.ಶೈಲಜಾಗಿಲ್ಲ ಸಚಿವ ಸ್ಥಾನ, ಹೊಸಬರಿಗೆ ಮಣೆ

ಕೆ.ಕೆ ಶೈಲಜಾ ನಿರ್ವಹಿಸಿದ್ದ ಕೇರಳದ ಆರೋಗ್ಯ ಸಚಿವರ ಸ್ಥಾನಕ್ಕೆ ಮಾಜಿ ಪತ್ರಕರ್ತೆ ವೀಣಾ ಜಾರ್ಜ್

(500 people to attend swearing-in ceremony of Kerala CM Pinarayi Vijayan Retd scientist moves SC against oath event)

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್