ಕಾಶ್ಮೀರ ಕಣಿವೆಯಲ್ಲಿರುವ ಭಯೋತ್ಪಾದನೆ (Terrorism) ಅತಿಶೀಘ್ರದಲ್ಲೇ ಭಯೋತ್ಪಾದನೆ ಕೊನೆಗೊಳ್ಳಲಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ(Farooq Abdullah) ಆಶಯ ವ್ಯಕ್ತಪಡಿಸಿದ್ದಾರೆ. ಗಂಧೇರ್ಬಾಲ್ ಜಿಲ್ಲೆಯ ಸೋನಾಮಾರ್ಗ್ನಲ್ಲಿ ನಡೆದ ಭದ್ರತೆ ಮತ್ತು ಶಕ್ತಿ ಎಂಬ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ಶೀಘ್ರದಲ್ಲೇ ಕೊನೆಗಾಣಲಿದೆ. ನಾವು ಬದುಕಬೇಕು ಮತ್ತು ದೇಶವನ್ನು ಉಳಿಸಬೇಕು..ಎಂದು ಹೇಳಿದರು.
ಜಮ್ಮು-ಕಾಶ್ಮೀರ ಭೂಮಿಯ ಮೇಲಿನ ಸ್ವರ್ಗ. ಆದರೂ ಇಂದಿಗೂ ಜನರು ಇಲ್ಲಿಗೆ ಬರಲು ಭಯಪಡುತ್ತಾರೆ. ಇಲ್ಲಿ ನಡೆಯುತ್ತಿರುವ ಹಿಂಸಾಚಾರ, ಭಯೋತ್ಪಾದನೆಗೆ ಜನರು ಅಂಜುತ್ತಿದ್ದಾರೆ. ನಾವಿಲ್ಲಿ ಬಂದರೆ ವಾಪಸ್ ಮನೆಗೆ ಹೋಗುತ್ತೇವೆ ಎಂಬ ನಂಬಿಕೆಯೇ ಅವರಲ್ಲಿ ಇಲ್ಲ. ಹಾಗಾಗಿ ಇದು ಸ್ವರ್ಗವಾದರೂ ಜನ ಬರಲು ಇಚ್ಛಿಸುವುದಿಲ್ಲ ಎಂದು ಹೇಳಿದರು.
ನನಗೆ ನವಭಾರತ ನೋಡಲು ತುಂಬ ಇಷ್ಟ. ಇದು ಎಲ್ಲರ ಭಾರತವಾಗಿರಬೇಕು. ದೇವರು ಇರುವುದು ದೇವಸ್ಥಾನದಲ್ಲಾಗಲೀ, ಮಸೀದಿಯಲ್ಲಾಗಲಿ ಅಲ್ಲ. ಆ ಅಲ್ಲಾ ನಮ್ಮೆಲ್ಲರಲ್ಲಿ ಇದ್ದಾನೆ. ನಾವು ಒಟ್ಟಾಗಿ ಬದುಕಬೇಕು ಮತ್ತು ಒಟ್ಟಿಗೆ ಬೆಳೆಯಬೇಕು ಎಂಬುದು ನನ್ನ ಹೃತ್ಪೂರ್ವಕ ಹಾರೈಕೆ. ಪ್ರತಿಯೊಬ್ಬರ ಕಷ್ಟಕ್ಕೂ ನಿಲ್ಲುವ ದೇಶವಾಗಿ ಭಾರತ ರೂಪುಗೊಂಡಿದೆ. ಅಮೆರಿಕದಂತ ಶ್ರೀಮಂತ ರಾಷ್ಟ್ರಗಳೇ ಕೊವಿಡ್ 19 ಸೋಂಕಿನಿಂದ ತತ್ತರಿಸಿದವು. ಆದರೆ ಬಡತನವಿದ್ದರೂ ಭಾರತ ತುಂಬ ಯಶಸ್ವಿಯಾಗಿ ಅದನ್ನು ನಿಭಾಯಿಸಿತು ಎಂದು ಅಬ್ದುಲ್ಲಾ ಹೇಳಿದ್ದಾರೆ.
ಇದನ್ನೂ ಓದಿ: Cheteshwar Pujara: 968 ದಿನಗಳ ಬಳಿಕ ಪೂಜಾರ ಬ್ಯಾಟ್ನಿಂದ- 645 ದಿನಗಳ ಬಳಿಕ ಕೊಹ್ಲಿ ಬ್ಯಾಟ್ನಿಂದ ಸಿಡಿಯುವುದೇ ಶತಕ?
Published On - 11:31 am, Sat, 28 August 21