ನೂಪುರ್ ಶರ್ಮಾ ಹತ್ಯೆ ಮಾಡಲು ಪಾಕ್ ಉಗ್ರ ಸಂಘಟನೆ ನಿಯೋಜಿಸಿದ್ದಉಗ್ರ ಬಂಧನ

| Updated By: ರಶ್ಮಿ ಕಲ್ಲಕಟ್ಟ

Updated on: Aug 12, 2022 | 8:27 PM

ಪ್ರವಾದಿ ಮೊಹಮ್ಮದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ನೂಪುರ್ ಶರ್ಮಾನನ್ನು ಹತ್ಯೆ ಮಾಡಲು ಪಾಕಿಸ್ತಾನ ನಿಯೋಜಿಸಿದ್ದ ಉಗ್ರನನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ.

ನೂಪುರ್ ಶರ್ಮಾ ಹತ್ಯೆ ಮಾಡಲು ಪಾಕ್ ಉಗ್ರ ಸಂಘಟನೆ ನಿಯೋಜಿಸಿದ್ದಉಗ್ರ ಬಂಧನ
Follow us on

ನೂಪುರ್ ಶರ್ಮಾ (Nupur Sharma) ಹತ್ಯೆ ಮಾಡಲು ಪಾಕಿಸ್ತಾನ (Pakistan) ಮೂಲದ ಜೈಷ್ ಎ ಮೊಹಮ್ಮದ್ ನಿಯೋಜಿಸಿದ್ದ ಉಗ್ರನನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ  (Uttar pradesh)ಪೊಲೀಸರು ಹೇಳಿದ್ದಾರೆ. ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಬಂಧಿತನಾದ ಉಗ್ರನಿಗೆ ನೂಪುರ್ ಶರ್ಮಾ ಹತ್ಯೆಯ ಹೊಣೆಯನ್ನು ವಹಿಸಲಾಗಿತ್ತು. ಆತನನ್ನು ಪಾಕ್ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ನಿಯಂತ್ರಿಸುತ್ತಿದೆ ಎಂದು ರಾಜ್ಯ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ನೂಪುರ್ ಶರ್ಮಾ ಅವರು ಪ್ರವಾದಿಯವರ ಕುರಿತಾದ ಹೇಳಿಕೆ ಖಂಡಿಸಿ ಭಾರತದಲ್ಲಿ ಭಾರೀ ಪ್ರತಿಭಟನೆಗಳು ನಡೆದಿತ್ತು. ಶರ್ಮಾ ಹೇಳಿಕೆ ಖಂಡಿಸಿ ಗಲ್ಫ್ ರಾಷ್ಟ್ರಗಳಿಂದ ಅಧಿಕೃತ ದೂರುಗಳು ಬಂದ ನಂತರ ಬಿಜೆಪಿ ವಕ್ತಾರರ ಸ್ಥಾನದಿಂದ ಶರ್ಮಾ ಅವರನ್ನು ಅಮಾನತುಗೊಳಿಸಿತ್ತು. ಉಗ್ರನನ್ನು  ಸಹರಾನ್‌ಪುರದ ಗಂಗೋಹ್ ಗ್ರಾಮದ ಮೊಹಮ್ಮದ್ ನದೀಮ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ನೂಪುರ್ ಶರ್ಮಾನನ್ನು ಕೊಲ್ಲಲು ಪಾಕಿಸ್ತಾನದ ಜೈಷ್ ಸಂಘಟನೆಯ ಉಗ್ರರು ತನ್ನನ್ನು ನಿಯೋಜಿಸಿರುವುದಾಗಿ  ಅವನು ಒಪ್ಪಿಕೊಂಡಿದ್ದಾನೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೊಹಮ್ಮದ್ ನದೀಮ್ ಶಸ್ತ್ರಾಸ್ತ್ರ ತರಬೇತಿಗಾಗಿ ಪಾಕಿಸ್ತಾನಕ್ಕೆ ತೆರಳಲು ಸಿದ್ಧನಾಗಿದ್ದ. ಆತ ತನ್ನ ಫೋನ್ ದಾಖಲೆಗಳು ಮತ್ತು ಸಂದೇಶಗಳನ್ನು ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈತನ ಫೋನ್ ದಾಖಲೆಗಳು ಸುಧಾರಿತ ಸ್ಫೋಟಕ ಸಾಧನ ಅಥವಾ ಐಇಡಿ ಅನ್ನು ಹೇಗೆ ನಿರ್ಮಿಸುವುದು ಎಂಬುದರ ಸಂಪೂರ್ಣ ಕೋರ್ಸ್ ಅನ್ನು ತೋರಿಸುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚುವರಿಯಾಗಿ, ಜೈಷ್ ಮತ್ತು ಥರೀಕ್-ಎ-ತಾಲಿಬಾನ್ ಜೊತೆಗಿನ ಚಾಟ್ ಮತ್ತು ಧ್ವನಿ ಸಂದೇಶಗಳನ್ನು ಮೊಹಮ್ಮದ್ ನದೀಮ್ ಫೋನ್‌ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಹಮ್ಮದ್ ನದೀಮ್ ವಾಟ್ಸಾಪ್, ಟೆಲಿಗ್ರಾಂ, ಫೇಸ್‌ಬುಕ್ ಮೆಸೆಂಜರ್, ಕ್ಲಬ್ ಹೌಸ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತೀಯ ಗ್ರಾಹಕರಿಗೆ 5ಜಿ ವಲಯದಲ್ಲಿ ಕ್ರಾಂತಿಕಾರಕ ಸೇವೆ ಒದಗಿಸುವ ನಿಟ್ಟಿನಲ್ಲಿ 19,867.8 ಮೆಗಾಹರ್ಟ್ಸ್‌ ಸ್ಪೆಕ್ಟ್ರಮ್‌ ಖರೀದಿಸಿದ ಏರ್‌ಟೆಲ್‌

Published On - 8:07 pm, Fri, 12 August 22