ಇದು ನಿಸರ್ಗದತ್ತ ಕೊಡುಗೆ.. ನೆಮ್ಮದಿಯ ಉಸಿರು ಬಿಟ್ಟ ಮುಂಬೈ ಜನ!!

| Updated By: ಆಯೇಷಾ ಬಾನು

Updated on: Jun 05, 2020 | 3:27 PM

ಕೊರೊನಾ ಬಂದು ಇಡೀ ಜಗತ್ತನ್ನೇ ಗುಡಿಸಿ ಗುಂಡಾಂತರ ಮಾಡಿದೆ.. ಮೊನ್ನೆ, ಮೊನ್ನೆ ಅಂಫಾನ್-ನಿಸರ್ಗ ಬಂದು ಭಾರತದ ಕರಾವಳಿ ಪ್ರದೇಶಗಳನ್ನು ಗುಡಿಸಿ ಗುಂಡಾಂತರ ಮಾಡಿದೆ. ಇದು ಒಂದು ರೀತಿ ಆಂಗ್ಲಭಾಷೆಯಲ್ಲಿ ಹೇಳುವ ಹಾಗೆ Blessing in Disguise! ಮಾಲಿನ್ಯ ಕಣ್ಣಿಗೆ ಬೀಳುತ್ತಿಲ್ಲ; ಕಿವಿಗೆ ಅಪ್ಪಳಿಸುತ್ತಿಲ್ಲ! ಕೊರೊನಾ ಮಹಾಮಾರಿಯಿಂದಾಗಿ 2-3 ತಿಂಗಳಿಂದ ಜನಜೀವನ ಸ್ತಬ್ಧವಾಗಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈ ವೇಳೆ ನಗರವಾಸಿಗಳು ಅನುಭವಿಸಿದ ಆಹ್ಲಾದಕರ ವಾತಾವರಣ ಮತ್ತೆಂದೂ ದೊರಕದು ಎಂಬಂತಾಗಿದೆ. ಈ ಮಧ್ಯೆ ಮುಂಬೈ ಮಹಾನಗರ ಮತ್ತೊಂದು […]

ಇದು ನಿಸರ್ಗದತ್ತ ಕೊಡುಗೆ.. ನೆಮ್ಮದಿಯ ಉಸಿರು ಬಿಟ್ಟ ಮುಂಬೈ ಜನ!!
Follow us on

ಕೊರೊನಾ ಬಂದು ಇಡೀ ಜಗತ್ತನ್ನೇ ಗುಡಿಸಿ ಗುಂಡಾಂತರ ಮಾಡಿದೆ.. ಮೊನ್ನೆ, ಮೊನ್ನೆ ಅಂಫಾನ್-ನಿಸರ್ಗ ಬಂದು ಭಾರತದ ಕರಾವಳಿ ಪ್ರದೇಶಗಳನ್ನು ಗುಡಿಸಿ ಗುಂಡಾಂತರ ಮಾಡಿದೆ. ಇದು ಒಂದು ರೀತಿ ಆಂಗ್ಲಭಾಷೆಯಲ್ಲಿ ಹೇಳುವ ಹಾಗೆ Blessing in Disguise!

ಮಾಲಿನ್ಯ ಕಣ್ಣಿಗೆ ಬೀಳುತ್ತಿಲ್ಲ; ಕಿವಿಗೆ ಅಪ್ಪಳಿಸುತ್ತಿಲ್ಲ!
ಕೊರೊನಾ ಮಹಾಮಾರಿಯಿಂದಾಗಿ 2-3 ತಿಂಗಳಿಂದ ಜನಜೀವನ ಸ್ತಬ್ಧವಾಗಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈ ವೇಳೆ ನಗರವಾಸಿಗಳು ಅನುಭವಿಸಿದ ಆಹ್ಲಾದಕರ ವಾತಾವರಣ ಮತ್ತೆಂದೂ ದೊರಕದು ಎಂಬಂತಾಗಿದೆ. ಈ ಮಧ್ಯೆ ಮುಂಬೈ ಮಹಾನಗರ ಮತ್ತೊಂದು ನಿಸರ್ಗದತ್ತ ಕಂಟಕ ಎದುರಿಸಿದೆ. ಅಂದ್ರೆ ನಿಸರ್ಗ ಸೈಕ್ಲೋನ್ ಮಹಾರಾಷ್ಟ್ರವನ್ನು ನಡುಗಿಸಿತ್ತು.

ಆ ಮಹಾಮಳೆಯಲ್ಲಿ ವಾಣಿಜ್ಯನಗರಿ ಮುಂಬೈ ತೊಯ್ದುತೊಪ್ಪೆಯಾಗಿತ್ತು. ಹಾನಿ ಪ್ರಮಾಣವನ್ನು ಪಕ್ಕಕ್ಕಿಟ್ಟು ನೋಡುವುದಾದ್ರೆ ಚಂಡಮಾರುತದಿಂದಾಗಿ ಇಡೀ ನಗರ ಸ್ವಚ್ಛಗೊಂಡಂತಾಗಿದೆ. ಮಾಲಿನ್ಯ ಕಣ್ಣಿಗೆ ಬೀಳುತ್ತಿಲ್ಲ; ಕಿವಿಗೆ ಅಪ್ಪಳಿಸುತ್ತಿಲ್ಲ! ಮಾಲಿನ್ಯ ಎಷ್ಟರಮಟ್ಟಿಗೆ ಕಡಿಮೆಯಾಗಿದೆಯೆಂದ್ರೆ ವಾಯು ಗುಣಮಟ್ಟ ಸೂಚ್ಯಂಕ (AQI) 22ರಲ್ಲಿ ಸುರಕ್ಷಿತವಾಗಿದೆ! ಅಂದ್ರೆ ನಿಸರ್ಗ ಮಳೆಯಿಂದಾಗಿ ಆಹ್ಲಾದಕರ ವಾತಾವರಣ ಸೃಷ್ಟಿಯಾಗಿದ್ದು, ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ!

Published On - 1:29 pm, Fri, 5 June 20