ಮಹಾರಾಷ್ಟ್ರದಲ್ಲಿ 45 ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆ; ಜಲಗಾಂವ್​ನಲ್ಲೇ ಜಾಸ್ತಿ ಇದೆ ಅಪಾಯಕಾರಿ ವೈರಸ್​

| Updated By: Lakshmi Hegde

Updated on: Aug 09, 2021 | 5:58 PM

Delta Plus: ಜಿನೋಮ್​ ಸಿಕ್ವೆನ್ಸಿಂಗ್​ಗಾಗಿ ಕಳಿಸಲಾಗಿದ್ದ ಮಾದರಿಗಳಲ್ಲಿ ಶೇ.80ರಷ್ಟರಲ್ಲಿ ಡೆಲ್ಟಾ ಪ್ಲಸ್​ ಸೋಂಕು ದೃಢಪಟ್ಟಿದೆ. ಒಟ್ಟೂ ಪತ್ತೆಯಾದ 45 ಪ್ರಕರಣಗಳಲ್ಲಿ ಜಲಗಾಂವ್​ನಲ್ಲಿ ಅತ್ಯಂತ ಹೆಚ್ಚು ಅಂದರೆ 13 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಮಹಾರಾಷ್ಟ್ರದಲ್ಲಿ 45 ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆ; ಜಲಗಾಂವ್​ನಲ್ಲೇ ಜಾಸ್ತಿ ಇದೆ ಅಪಾಯಕಾರಿ ವೈರಸ್​
ಡೆಲ್ಟಾ ಪ್ಲಸ್ ರೂಪಾಂತರಿ
Follow us on

ಮಹಾರಾಷ್ಟ್ರ (Maharashtra)ದಲ್ಲಿ ಜಿನೋಮ್​ ಸಿಕ್ವೆನ್ಸಿಂಗ್​ ನಡೆಸಿದಾಗಿ ಒಟ್ಟು 45 ಡೆಲ್ಟಾ ಪ್ಲಸ್​ (Delta Plus) ರೂಪಾಂತರ ವೈರಸ್​ ಪ್ರಕರಣಗಳು ಪತ್ತೆಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಹಾಗೇ, ಅದರಲ್ಲಿ ಒಬ್ಬ ಡೆಲ್ಟಾ ಪ್ಲಸ್​ (Delta) ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ ಎಂದೂ ಹೇಳಿದ್ದಾರೆ. ಜಲ್ಗನ್​ನಲ್ಲಿ ಅತಿ ಹೆಚ್ಚು ಅಂದರೆ 13 ಡೆಲ್ಟಾ ಪ್ಲಸ್​ ಸೋಂಕಿತರು ಪತ್ತೆಯಾಗಿದ್ದು ಅದು ಬಿಟ್ಟರೆ ರತ್ನಗಿರಿಯಲ್ಲೇ ಜಾಸ್ತಿ (11) ಜನರಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಜಿನೋಮ್​ ಸಿಕ್ವೆನ್ಸಿಂಗ್​ಗಾಗಿ ಕಳಿಸಲಾಗಿದ್ದ ಮಾದರಿಗಳಲ್ಲಿ ಶೇ.80ರಷ್ಟರಲ್ಲಿ ಡೆಲ್ಟಾ ಪ್ಲಸ್​ ಸೋಂಕು ದೃಢಪಟ್ಟಿದೆ. ಒಟ್ಟೂ ಪತ್ತೆಯಾದ 45 ಪ್ರಕರಣಗಳಲ್ಲಿ ಜಲಗಾಂವ್​ನಲ್ಲಿ 13, ರತ್ನಗಿರಿಯಲ್ಲಿ 11, ಮುಂಬೈ 6, ಥಾಣೆ 5 ಹಾಗೂ ಪುಣೆಯಲ್ಲಿ ಮೂವರಲ್ಲಿ ಡೆಲ್ಟಾ ಪ್ಲಸ್​ ಕಾಣಿಸಿಕೊಂಡಿದೆ. ಹಾಗೇ, ಫಾಲ್ಗರ್, ಸಿಂಧುದುರ್ಗ್​, ಸಾಂಘ್ಲಿ, ನಂದುರ್ಬಾರ್​, ಔರಂಗಾಬಾದ್​, ಕೊಲ್ಲಾಪುರ ಮತ್ತು ಬೀಡ್​​ಗಳಲ್ಲಿ ತಲಾ ಒಬ್ಬೊಬ್ಬರಲ್ಲಿ ಈ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ತ್ರಿಪುರದಲ್ಲಿ ಅಭಿಷೇಕ್ ಬ್ಯಾನರ್ಜಿ ಮೇಲಿನ ಹಲ್ಲೆ ಹಿಂದೆ ಅಮಿತ್ ಶಾ ಕೈವಾಡ; ಸಿಎಂ ಮಮತಾ ಬ್ಯಾನರ್ಜಿ ಆರೋಪ

ಮಂಜು ಜತೆ ಫ್ರೆಂಡ್​ಶಿಪ್​ ಹಾಳಾಗೋಕೆ ಚಕ್ರವರ್ತಿ ಕಾರಣ; ಪ್ರಶಾಂತ್​ ಸಂಬರಗಿ ಗಂಭೀರ ಆರೋಪ

Published On - 9:10 am, Mon, 9 August 21