AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿರುಪತಿ ಟಿಟಿಡಿ‌ ಬೋರ್ಡ್ ಅಧ್ಯಕ್ಷರಾಗಿ ಸಿಎಂ ಜಗನ್ ಸಂಬಂಧಿ​ ಸುಬ್ಬಾರೆಡ್ಡಿ ಮರು ನೇಮಕ

ವೈ.ವಿ ಸುಬ್ಬಾರೆಡ್ಡಿ ಅವರ 2 ವರ್ಷದ ಅಧಿಕಾರ ಈ ವರ್ಷ (2021) ಜೂನ್ ತಿಂಗಳಲ್ಲಿಯೇ ಅಂತ್ಯವಾಗಬೇಕಾಗಿತ್ತು. ಆದರೆ ಮರು ನೇಮಕದೊಂದಿಗೆ ವೈ.ವಿ ಸುಬ್ಬಾರೆಡ್ಡಿ ಮತ್ತೆ ಟಿಟಿಡಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ.

ತಿರುಪತಿ ಟಿಟಿಡಿ‌ ಬೋರ್ಡ್ ಅಧ್ಯಕ್ಷರಾಗಿ ಸಿಎಂ ಜಗನ್ ಸಂಬಂಧಿ​ ಸುಬ್ಬಾರೆಡ್ಡಿ ಮರು ನೇಮಕ
ವೈ.ವಿ ಸುಬ್ಬಾರೆಡ್ಡಿ
TV9 Web
| Edited By: |

Updated on:Aug 09, 2021 | 9:14 AM

Share

ತಿರುಪತಿ: ಆಂಧ್ರಪ್ರದೇಶದ ಸರ್ಕಾರ ನಿನ್ನೆ ( ಆಗಸ್ಟ್ 8 ) ತಿರುಪತಿ ತಿರುಮಲ ದೇಗುಲದ ಆಡಳಿತ ಮಂಡಳಿಯ ( ಟಿಟಿಡಿ) ಅಧ್ಯಕ್ಷರನ್ನಾಗಿ ವೈ.ವಿ ಸುಬ್ಬಾರೆಡ್ಡಿಯವರನ್ನು ಮರು ನೇಮಕ ಮಾಡಿದೆ. ವೈ.ವಿ ಸುಬ್ಬಾರೆಡ್ಡಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿಯವರ ಸಂಬಂಧಿಯಾಗಿದ್ದು, ಸರ್ಕಾರದ ಆದೇಶದ ಮೇರೆಗೆ ಮತ್ತೊಮ್ಮೆ ಟಿಟಿಡಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.

ವೈ.ವಿ ಸುಬ್ಬಾರೆಡ್ಡಿ ಅವರ 2 ವರ್ಷದ ಅಧಿಕಾರ ಈ ವರ್ಷ (2021) ಜೂನ್ ತಿಂಗಳಲ್ಲಿಯೇ ಅಂತ್ಯವಾಗಬೇಕಾಗಿತ್ತು. ಆದರೆ ಮರು ನೇಮಕದೊಂದಿಗೆ ವೈ.ವಿ ಸುಬ್ಬಾರೆಡ್ಡಿ ಮತ್ತೆ ಟಿಟಿಡಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ.

ಶೀಘ್ರ ಟಿಟಿಡಿ ಬೋರ್ಡ್ ಸದಸ್ಯರನ್ನು ನೇಮಿಸಲಿರುವ ಸರ್ಕಾರ ನಿನ್ನೆ ಈ ವಿಚಾರವಾಗಿ ಪ್ರಧಾನ ಕಾರ್ಯದರ್ಶಿ ಜಿ. ವಾಣಿ ಮೋಹನ್ ಆದೇಶ ಹೋರಡಿಸಿದ್ದು, ನೂತನ ಟಿಟಿಡಿ ಆಡಳಿತ ಮಂಡಳಿಯ ಇತರ ಸದಸ್ಯರನ್ನು ಶೀಘ್ರವೇ ನೇಮಕ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ತಿರುಪತಿ ಹುಂಡಿಯಲ್ಲಿ ಅಧಿಕ ಪ್ರಮಾಣದ ಆದಾಯ ಸಂಗ್ರಹ ಕೊರೊನಾ ಎರಡನೇ ಅಲೆಯ ಲಾಕ್​ಡೌನ್​ ನಂತರದಲ್ಲಿ ದೇವಾಲಯದ ಪ್ರವೇಶಕ್ಕೆ ಅವಕಾಶ ದೊರೆತಿದ್ದು, ಭಕ್ತರು ದೇವರ ದರ್ಶನಕ್ಕೆ ಮುಂದಾಗಿದ್ದಾರೆ. ಇದರ ಅನುಸಾರ ಆಂಧ್ರಪ್ರದೇಶದಲ್ಲಿನ ತಿರುಮಲದ‌ ಬಾಲಾಜಿ ದೇವಾಲಯವೂ ಕೂಡ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ಆ ಪ್ರಕಾರ ಕಳೆದ‌ 24 ಗಂಟೆಗಳಲ್ಲಿ ತಿರುಮಲದ‌ ಬಾಲಾಜಿ ದೇವಾಲಯದ ಹುಂಡಿಯಲ್ಲಿ ಅಧಿಕ ಪ್ರಮಾಣದ ಆದಾಯ‌ ಸಂಗ್ರಹವಾಗಿದೆ. ನಿನ್ನೆ (ಆಗಸ್ಟ್, 08) 2.50 ಕೋಟಿ ರೂಪಾಯಿ ಹುಂಡಿಗೆ‌ ಆದಾಯ ಸಂಗ್ರಹವಾಗಿದ್ದು, 20,466 ಭಕ್ತರು ಬಾಲಾಜಿಯ ದರ್ಶನ ಪಡೆದುಕೊಂಡಿದ್ದಾರೆ. ಅಲ್ಲದೆ 8610 ಭಕ್ತರು ತಿರುಮಲದ‌ ಬಾಲಾಜಿ ದೇವಾಲಯದಲ್ಲಿ ತಲೆಕೂದಲು ಸಮರ್ಪಣೆ ಮಾಡಿದ್ದಾರೆ.

ಕಳೆದ ಬಾರಿ ಅಂದರೆ ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲಿನ ಲಾಕ್​ಡೌನ್​ಗೂ ಮುನ್ನ ತಿರುಮಲದ ಬಾಲಾಜಿ ದೇವಸ್ಥಾನದಲ್ಲಿ 800 ಕೋಟಿ ರೂಪಾಯಿ ಹುಂಡಿ ಹಣ ಸಂಗ್ರಹವಾಗುತ್ತಿತ್ತು. ನಂತರ ಅಂದರೆ ಮೊದಲ ಕೊರೊನಾ ಅಲೆಯ ಅನ್​ಲಾಕ್​ ಬಳಿಕ (ಜೂನ್ 2020 ರಲ್ಲಿ )ಕೊವಿಡ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಹಲವಾರು ನಿರ್ಬಂಧಗಳೊಂದಿಗೆ ಈ ದೇವಾಲಯವನ್ನು ತೆರೆಯಲಾಯಿತು. ಅದರಂತೆ ಟಿಕೆಟ್ ಸಂಗ್ರಹಣೆ, ಪ್ರಸಾದಗಳ ಮಾರಾಟ, ವಸತಿ ಸೌಕರ್ಯಗಳು ಮತ್ತು ಹುಂಡಿ ಸಂಗ್ರಹಗಳು ಸೇರಿದಂತೆ ಒಟ್ಟಾರೆ ಆದಾಯದ ಮೇಲೆ ಪರಿಣಾಮ ಬೀರಿತು. ಆ ಪ್ರಕಾರ 100-150 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ.

ಇದನ್ನೂ ಓದಿ: Infosys Sudha Murty: ಇದೇನು ಇನ್ಫೋಸಿಸ್ ಸುಧಾ ಮೂರ್ತಿ ತಿರುಪತಿ ಟಿಟಿಡಿ ಮಂಡಳಿ ಅಧ್ಯಕ್ಷರಾಗಿ ನೇಮಕವಾದರಾ!?

Tirupati Temple : ತಿರುಪತಿ ದೇವಾಲಯದ ಹುಂಡಿ ಹಣ ಎಣಿಕೆ; 24 ಗಂಟೆಗಳಲ್ಲಿ 1.80 ಕೋಟಿ ರೂ. ಸಂಗ್ರಹ

Published On - 8:31 am, Mon, 9 August 21

Follow Us
TV9 Web
TV9 Web

TV9 Kannada

Read More
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’