ದಿ ಕಾಶ್ಮೀರ್ ಫೈಲ್ಸ್ ಸೆನ್ಸಾರ್ ಮಾಡುವುದು ಸ್ವಾತಂತ್ರ್ಯದ ಮೇಲಿನ ದಾಳಿ: ನ್ಯೂಜಿಲೆಂಡ್​ನ ಮಾಜಿ ಉಪ ಪ್ರಧಾನಿ

| Updated By: ರಶ್ಮಿ ಕಲ್ಲಕಟ್ಟ

Updated on: Mar 20, 2022 | 10:05 PM

ಮುಸ್ಲಿಂ ಸಮುದಾಯದ ಸದಸ್ಯರು ಚಿತ್ರದ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಮುಖ್ಯ ಸೆನ್ಸಾರ್ ಚಿತ್ರದ ವರ್ಗೀಕರಣವನ್ನು ಪರಿಶೀಲಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

ದಿ ಕಾಶ್ಮೀರ್ ಫೈಲ್ಸ್ ಸೆನ್ಸಾರ್ ಮಾಡುವುದು ಸ್ವಾತಂತ್ರ್ಯದ ಮೇಲಿನ ದಾಳಿ: ನ್ಯೂಜಿಲೆಂಡ್​ನ ಮಾಜಿ ಉಪ ಪ್ರಧಾನಿ
ದಿ ಕಾಶ್ಮೀರ್ ಫೈಲ್ಸ್
Follow us on

ದೆಹಲಿ: ಭಾರೀ ಚರ್ಚೆಗೆ ಗ್ರಾಸವಾಗಿರುವ ಬಾಲಿವುಡ್ ಸಿನಿಮಾ ‘ದಿ ಕಾಶ್ಮೀರ್ ಫೈಲ್ಸ್‘ (The Kashmir Files) ಬಿಡುಗಡೆಯನ್ನು ನ್ಯೂಜಿಲೆಂಡ್‌ನಲ್ಲಿ (New Zealand) ತಡೆಹಿಡಿಯಲಾಗಿದೆ. ಈ ಹಿಂದೆ ಚಲನಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದ ದೇಶದ ಸೆನ್ಸಾರ್ ಮಂಡಳಿಯು ಕೆಲವು ಸಮುದಾಯದ ಗುಂಪುಗಳನ್ನು ಸಂಪರ್ಕಿಸಿದ ನಂತರ ತನ್ನ ನಿರ್ಧಾರವನ್ನು ಪರಿಶೀಲಿಸಲು ನಿರ್ಧರಿಸಿದೆ. ದೇಶದ ಸೆನ್ಸಾರ್ ಮಂಡಳಿಯು ‘ದಿ ಕಾಶ್ಮೀರ್ ಫೈಲ್ಸ್’ಗೆ 16 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ವೀಕ್ಷಿಸಲು ಅವಕಾಶ ನೀಡುವ ಪ್ರಮಾಣಪತ್ರವನ್ನು ನೀಡಿತ್ತು. ಆದರೆ ಮಂಡಳಿಯು ತನ್ನ ನಿರ್ಧಾರವನ್ನು ಪರಿಶೀಲಿಸಲು ನಿರ್ಧರಿಸಿದೆ ಮತ್ತು ಚಿತ್ರದ ಪ್ರದರ್ಶನವನ್ನು ತಡೆಹಿಡಿಯಲು ನಿರ್ಧರಿಸಿದೆ. 1990 ರ ದಶಕದಲ್ಲಿ ಕಣಿವೆಯಿಂದ ಕಾಶ್ಮೀರಿ ಪಂಡಿತರ (Kashmiri Pandits)ವಲಸೆಯನ್ನು ಕೇಂದ್ರೀಕರಿಸಿದ ಈ ಚಲನಚಿತ್ರವು ಮಾರ್ಚ್ 11 ರಂದು ಬಿಡುಗಡೆಯಾದಾಗಿನಿಂದ ವಿವಾದದ ಸುಳಿಯಲ್ಲಿ ಸಿಲುಕಿದೆ. ಮುಸ್ಲಿಂ ಸಮುದಾಯದ ಸದಸ್ಯರು ಚಿತ್ರದ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಮುಖ್ಯ ಸೆನ್ಸಾರ್ ಚಿತ್ರದ ವರ್ಗೀಕರಣವನ್ನು ಪರಿಶೀಲಿಸುತ್ತಿದೆ ಎಂದು ವರದಿಗಳು ತಿಳಿಸಿವೆ.  ನ್ಯೂಜಿಲೆಂಡ್‌ನ ಮಾಜಿ ಉಪಪ್ರಧಾನಿ ವಿನ್‌ಸ್ಟನ್ ಪೀಟರ್ಸ್ ಚಲನಚಿತ್ರ ಮಂಡಳಿಯ ವಿರುದ್ಧ ವಾಗ್ದಾಳಿ ನಡೆಸಿದ್ದು ಚಿತ್ರವನ್ನು ಸೆನ್ಸಾರ್ ಮಾಡುವುದು ನ್ಯೂಜಿಲೆಂಡ್‌ನವರ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ ಎಂದು ಹೇಳಿದ್ದಾರೆ.  “ಈ ಚಿತ್ರವನ್ನು ಸೆನ್ಸಾರ್ ಮಾಡುವುದು ನ್ಯೂಜಿಲೆಂಡ್‌ನಲ್ಲಿ ಮಾರ್ಚ್ 15 ರ ದೌರ್ಜನ್ಯದ ಮಾಹಿತಿಗಳು ಅಥವಾ ಚಿತ್ರಗಳನ್ನು ಸೆನ್ಸಾರ್ ಮಾಡುವುದಕ್ಕೆ ಸಮನಾಗಿರುತ್ತದೆ ಅಥವಾ ಅದಕ್ಕಾಗಿ 9/11 ಮೇಲಿನ ದಾಳಿಯ ಎಲ್ಲಾ ಚಿತ್ರಗಳನ್ನು ಸಾರ್ವಜನಿಕರಿಗೆ ಸಿಗದಂತೆ ತೆಗೆದುಹಾಕಿದಂತೆ ಎಂದು ಪೀಟರ್ಸ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

“ಭಯೋತ್ಪಾದನೆಯು ಅದರ ಎಲ್ಲಾ ರೂಪಗಳಲ್ಲಿರುತ್ತದೆ, ಅದರ ಮೂಲ ಏನೇ ಇರಲಿ, ಅದನ್ನು ಬಹಿರಂಗಪಡಿಸಬೇಕು ಮತ್ತು ವಿರೋಧಿಸಬೇಕು. ಆಯ್ದ ಸೆನ್ಸಾರ್‌ಶಿಪ್‌ನ ಈ ಪ್ರಯತ್ನವು ನ್ಯೂಜಿಲೆಂಡ್‌ನವರು ಮತ್ತು ಪ್ರಪಂಚದಾದ್ಯಂತದ ಜನರ ಸ್ವಾತಂತ್ರ್ಯದ ಮೇಲೆ ಮತ್ತೊಂದು ದಾಳಿಗೆ ಕಾರಣವಾಗುತ್ತದೆ” ಎಂದು ಅವರು ಹೇಳಿದರು.

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲಿ ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ಮುಂತಾದವರು ನಟಿಸಿದ್ದಾರೆ.

ದೇಶದಾದ್ಯಂತ ಹಲವಾರು ರಾಜ್ಯಗಳ ಸರ್ಕಾರದ ಬೆಂಬಲ ಮತ್ತು ತೆರಿಗೆ ವಿನಾಯಿತಿ ಪಡೆದಿರುವ ಈ ಸಿನಿಮಾ ಬಾಕ್ಸ್ ಆಫೀಸಲ್ಲಿ ಯಶಸ್ಸನ್ನು ಗಳಿಸಿದೆ. ಇದಲ್ಲದೆ, ಚಿತ್ರದ ಸೂಕ್ಷ್ಮ ರಾಜಕೀಯ ಸ್ವರೂಪ ಮತ್ತು ಉದ್ದೇಶಪೂರ್ವಕವಾಗಿ ಸತ್ಯಗಳನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂಬ ಆರೋಪವೂ ಈ ಚಿತ್ರದ ಮೇಲಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಚಲನಚಿತ್ರ ಮಂದಿರಗಳ ಒಳಗೆ ಮತ್ತು ಹೊರಗಿನ ಜನರ ವಿಡಿಯೊಗಳು ಹರಿದಾಡುತ್ತಿದ್ದು ಅಲ್ಲಿ ಜನರು ಮುಸ್ಲಿಮರಿಗೆ ನಿಂದನೀಯ ಭಾಷೆಯನ್ನು ಬಳಸುವುದನ್ನು ಕಾಣಬಹುದು.

ಇದನ್ನೂ ಓದಿ: ‘ದಿ ಕಾಶ್ಮೀರ್​ ಫೈಲ್ಸ್​’ಗಿಂತಲೂ ಹೆಚ್ಚು IMDb ರೇಟಿಂಗ್​ ಪಡೆದ ‘ಜೇಮ್ಸ್​’; 10ಕ್ಕೆ 9.9 ನೀಡಿದ ಪ್ರೇಕ್ಷಕರು