AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟಿಷರ ನಿದ್ದೆ ಕಸಿದುಕೊಂಡಿದ್ದ ವಂದೇ ಮಾತರಂ ಗೀತೆಗೆ 150 ವರ್ಷ, ಈ ಹಾಡಿನ ಹಿಂದಿನ ಸ್ವಾರಸ್ಯಕರ ಕಥೆ ಇಲ್ಲಿದೆ

Vande Mataram: ‘ವಂದೇಮಾತರಂ ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ’ ಈ ಸಾಲುಗಳನ್ನು ನೀವು ಕೇಳಿರದೆ ಇರಲು ಸಾಧ್ಯವೇ ಇಲ್ಲ. ಈ ವಂದೇ ಮಾತರಂ ಗೀತೆಗೆ 150 ವರ್ಷ. ಈ ಗೀತೆಯು ಬ್ರಿಟಿಷರ ನಿದ್ದೆ ಕಸಿದುಕೊಂಡಿತ್ತು ಎಂಬುದು ಕೂಡ ಅಷ್ಟೇ ಸತ್ಯ. ಈ ಗೀತೆ 150 ವರ್ಷಗಳನ್ನು ಪೂರೈಸಿದೆ, ಈ ಹೊತ್ತಿನಲ್ಲಿ ಈ ಹಾಡಿನ ಹಿನ್ನೆಲೆ, ರಚನಕಾರರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ವಂದೇ ಮಾತರಂ ಕೇವಲ ಹಾಡಲ್ಲ, ಅದು ಭಾರತದ ಸ್ವಾತಂತ್ರ್ಯ ಹೋರಾಟದ ಒಂದು ಆತ್ಮ ಇದ್ದಂತೆ. ಈ ವರ್ಷ ನವೆಂಬರ್ 7ರಂದು ವಂದೇ ಮಾತರಂ ತನ್ನ 150ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.

ಬ್ರಿಟಿಷರ ನಿದ್ದೆ ಕಸಿದುಕೊಂಡಿದ್ದ ವಂದೇ ಮಾತರಂ ಗೀತೆಗೆ 150 ವರ್ಷ, ಈ ಹಾಡಿನ ಹಿಂದಿನ ಸ್ವಾರಸ್ಯಕರ ಕಥೆ ಇಲ್ಲಿದೆ
ತ್ರಿವರ್ಣ ಧ್ವಜ Image Credit source: Timesnow
ನಯನಾ ರಾಜೀವ್
|

Updated on: Nov 07, 2025 | 8:10 AM

Share

ನವದೆಹಲಿ, ನವೆಂಬರ್ 07: ಜನಗಣಮನದ ರೀತಿಯಲ್ಲೇ ಸದಾ ಹಾಡುವ ಮತ್ತು ನೆನಪಿನಲ್ಲಿ ಉಳಿದಿರುವ ಗೀತೆ ಎಂದರೆ ಅದು ವಂದೇ ಮಾತರಂ(Vande Mataram). ಗೀತೆಯು ಬ್ರಿಟಿಷರ ನಿದ್ದೆ ಕಸಿದುಕೊಂಡಿತ್ತು ಎಂಬುದು ಕೂಡ ಅಷ್ಟೇ ಸತ್ಯ. ಗೀತೆ 150 ವರ್ಷಗಳನ್ನು ಪೂರೈಸಿದೆ, ಹೊತ್ತಿನಲ್ಲಿ ಹಾಡಿನ ಹಿನ್ನೆಲೆ, ರಚನಕಾರರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ವಂದೇ ಮಾತರಂ ಕೇವಲ ಹಾಡಲ್ಲ, ಅದು ಭಾರತದ ಸ್ವಾತಂತ್ರ್ಯ ಹೋರಾಟದ ಒಂದು ಆತ್ಮ ಇದ್ದಂತೆ.

ವರ್ಷ ನವೆಂಬರ್ 7ರಂದು ವಂದೇ ಮಾತರಂ ತನ್ನ 150ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಇದು ಅಸಂಖ್ಯಾತ ತಲೆಮಾರುಗಳ ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಾಷ್ಟ್ರ ನಿರ್ಮಾಣಕಾರರಿಗೆ ಸ್ಪೂರ್ತಿ ನೀಡಿದ ಸಂಯೋಜನೆ ಎಂದೇ ಹೇಳಬಹುದು.

ಇದು ಭಾರತದ ರಾಷ್ಟ್ರೀಯ ಗುರುತು ಮತ್ತು ಶೌರ್ಯದ ಶಾಶ್ವತ ಸಂಕೇತವಾಗಿದೆ. ಆದರೆ ಈ ಹಾಡನ್ನು ಯಾವಾಗ ರಚಿಸಲಾಯಿತು ಎಂದು ನಿಮಗೆ ತಿಳಿದಿದೆಯೇ? ಅದು ಬ್ರಿಟಿಷರ ನಿದ್ರೆಯನ್ನು ಹೇಗೆ ಕಸಿದುಕೊಂಡಿತು? ಮತ್ತು ಅದು ಸ್ವಾತಂತ್ರ್ಯ ಚಳವಳಿಯ ಸಂಕೇತವಾಗಿದ್ದು ಹೇಗೆ? ಇಂದಿಗೂ ನಮ್ಮ ಹೃದಯದಲ್ಲಿ ಅಚ್ಚೊತ್ತಿದ ವಂದೇ ಮಾತರಂ ಇತಿಹಾಸದ ಪುಟಗಳನ್ನೊಮ್ಮೆ ನೋಡಿ ಬರೋಣ.

ನವೆಂಬರ್ 7 ರಂದು ಬಂಗದರ್ಶನ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು

ಪಿಐಬಿ ಪ್ರಕಾರ, ವಂದೇ ಮಾತರಂ ಅನ್ನು ಬಂಕಿಮ್ ಚಂದ್ರ ಚಟರ್ಜಿ ರಚಿಸಿದ್ದಾರೆ. ಇದು ಮೊದಲು ನವೆಂಬರ್ 7, 1875 ರಂದು ಸಾಹಿತ್ಯ ನಿಯತಕಾಲಿಕೆ ಬಂಗದರ್ಶನ್‌ನಲ್ಲಿ ಪ್ರಕಟವಾಯಿತು. ನಂತರ ಬಂಕಿಮ್ ಚಂದ್ರ ಚಟರ್ಜಿ ಇದನ್ನು 1882 ರಲ್ಲಿ ಪ್ರಕಟವಾದ ತಮ್ಮ ಅಮರ ಕಾದಂಬರಿ ಆನಂದಮಠದಲ್ಲಿ ಸೇರಿಸಿದರು.

ಮತ್ತಷ್ಟು ಓದಿ:  ನಾಳೆ ಭಾರತೀಯರ ದೇಶಭಕ್ತಿಯನ್ನು ಬಡಿದೆಬ್ಬಿಸಿದ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ

ಬಂಕಿಮ್ ಚಂದ್ರ 1875 ರಲ್ಲಿ ದೇಶಭಕ್ತಿ ಗೀತೆ ‘ವಂದೇ ಮಾತರಂ’ ರಚನೆ

ಈ ಸಂಯೋಜನೆಯ ಹಿಂದೆ ಒಂದು ಕುತೂಹಲಕಾರಿ ಕಥೆ ಇದೆ. ವರದಿಗಳ ಪ್ರಕಾರ, ಬ್ರಿಟಿಷ್ ಆಡಳಿತಗಾರರು ಪ್ರತಿ ಸಮಾರಂಭದಲ್ಲಿ ಇಂಗ್ಲೆಂಡ್ ರಾಣಿಗೆ ಗೌರವ ಸಲ್ಲಿಸುವ ಸೇವ್ದಿ ಕ್ವೀನ್ಎಂಬ ಹಾಡನ್ನು ಹಾಡುವುದನ್ನು ಕಡ್ಡಾಯಗೊಳಿಸಿದ್ದರು. ಇದು ಬಂಕಿಮ್ ಚಂದ್ರ ಸೇರಿದಂತೆ ಅನೇಕ ದೇಶವಾಸಿಗಳನ್ನು ಕೆರಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಅವರು 1874 ರಲ್ಲಿ ವಂದೇ ಮಾತರಂ ಎಂಬ ಹಾಡನ್ನು ರಚಿಸಿದರು. ಈ ಹಾಡಿನ ಕೇಂದ್ರ ವಿಷಯವೆಂದರೆ ಭಾರತದ ಭೂಮಿಯನ್ನು ತಾಯಿ ಎಂದು ಸಂಬೋಧಿಸುವುದು. ಈ ಹಾಡನ್ನು ನಂತರ ಅವರ 1882 ರ ಕಾದಂಬರಿ ‘ಆನಂದಮಠ’ದಲ್ಲಿ ಸೇರಿಸಲಾಯಿತು. ಐತಿಹಾಸಿಕ ಮತ್ತು ಸಾಮಾಜಿಕ ರಚನೆಗಳಿಂದ ಹೆಣೆಯಲಾದ ಈ ಕಾದಂಬರಿಯು ದೇಶದಲ್ಲಿ ರಾಷ್ಟ್ರೀಯತೆಯ ಚೈತನ್ಯವನ್ನು ಜಾಗೃತಗೊಳಿಸಲು ಗಮನಾರ್ಹವಾಗಿ ಕೊಡುಗೆ ನೀಡಿತು.

ವಂದೇ ಮಾತರಂ ಅನ್ನು ಮೊದಲ ಬಾರಿಗೆ ಹಾಡಿದ್ದು

1896 ರಲ್ಲಿ  ಕೋಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಹಾಡನ್ನು ಹಾಡಲಾಯಿತು. ಅಲ್ಪಾವಧಿಯಲ್ಲಿಯೇ, ದೇಶಭಕ್ತಿಯ ಸಂಕೇತವಾದ ಈ ಹಾಡು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಭಾರತೀಯ ಕ್ರಾಂತಿಕಾರಿಗಳ ನೆಚ್ಚಿನ ಹಾಡು ಮತ್ತು ಮುಖ್ಯ ಘೋಷಣೆಯಾಯಿತು. ದೇಶಾದ್ಯಂತ, ಕ್ರಾಂತಿಕಾರಿ ಮಕ್ಕಳು, ಯುವಕರು, ವಯಸ್ಕರು ಮಾತ್ರವಲ್ಲದೆ, ಭಾರತೀಯ ಮಹಿಳೆಯರು ಸಹ ಸ್ವಾತಂತ್ರ್ಯ ಹೋರಾಟದ ಅದೇ ಘೋಷಣೆಯನ್ನು ಪ್ರತಿಧ್ವನಿಸಿದರು.

ವಂದೇ ಮಾತರಂ ರಾಗ ನೀಡಿದ್ದು ಠಾಗೋರ್

ಬಂಕಿಮ್ ಚಂದ್ರ ರಚಿಸಿದ ವಂದೇ ಮಾತರಂ ಗೀತೆ ಅವರ ಜೀವಿತಾವಧಿಯಲ್ಲಿ ಹೆಚ್ಚು ಖ್ಯಾತಿಯನ್ನು ಗಳಿಸಲಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ. ರವೀಂದ್ರನಾಥ ಠಾಗೋರ್(ಟ್ಯಾಗೋರ್)ಹಾಡಿನ ರಾಗವನ್ನು ರಚಿಸಿದ್ದಾರೆ ಎಂದು ಹೇಳಲಾಗುತ್ತದೆ. ಜನವರಿ 24, 1950 ರಂದು, ಸ್ವತಂತ್ರ ಭಾರತದಲ್ಲಿ, ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ವಂದೇ ಮಾತರಂಗೆ ರಾಷ್ಟ್ರಗೀತೆ ಸ್ಥಾನಮಾನವನ್ನು ಕಲ್ಪಿಸಿದರು.

ಶಾಲೆಗಳಲ್ಲಿ ಹಾಡುವುದನ್ನು ನಿಷೇಧಿಸಲಾಗಿತ್ತು

ಬ್ರಿಟಿಷ್ ಆಳ್ವಿಕೆಯ ವಿರುದ್ಧ ಭಾರತೀಯ ಏಕತೆಯ ಸಂಕೇತವಾಗಿ ವಂದೇ ಮಾತರಂ ಗೀತೆ ರೂಪುಗೊಂಡಿತು. ಸರ್ಕಾರವು ಶಾಲೆಗಳಲ್ಲಿ ಹಾಡುವುದನ್ನು ನಿಷೇಧಿಸಲಾಯಿತು ಮತ್ತು ವಿದ್ಯಾರ್ಥಿಗಳನ್ನು ಸಹ ಶಿಕ್ಷೆಗೆ ಒಳಪಡಿಸಲಾಗಿತ್ತು. ಇದು ಸ್ವದೇಶಿ ಚಳವಳಿಯ ಮೂಲಕ ದೇಶಾದ್ಯಂತ ಹರಡಿತು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಈ ಹಾಡು ಕ್ರಾಂತಿಕಾರಿಗಳ ಶಕ್ತಿ ಮತ್ತು ಉತ್ಸಾಹದ ಸಂಕೇತವಾಗಿ ಮಾರ್ಪಟ್ಟಿದ್ದರಿಂದ ಬ್ರಿಟಿಷರು ನಿದ್ರೆ ಕಳೆದುಕೊಳ್ಳುವಂತೆ ಮಾಡಿತು .

ಜನವರಿ 14, 1950 ರಂದು ನಡೆದಿದ್ದೇನು?

ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಜನವರಿ 24, 1950 ರಂದು ಸಂವಿಧಾನ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ವಂದೇ ಮಾತರಂ ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿರುವುದರಿಂದ ಅದಕ್ಕೆ ರಾಷ್ಟ್ರಗೀತೆ ಜನ ಗಣ ಮನದಂತೆಯೇ ಸ್ಥಾನಮಾನ ಮತ್ತು ಗೌರವವನ್ನು ನೀಡಬೇಕು ಎಂದು ಹೇಳಿದರು. ಇಂದಿಗೂ, ವಂದೇ ಮಾತರಂ ನಮ್ಮ ದೇಶದ ಬಗ್ಗೆ ಹೆಮ್ಮೆ, ಪ್ರೀತಿ ಮತ್ತು ಭಕ್ತಿಯ ಜ್ಞಾಪಕವಾಗಿಯೇ ಉಳಿದಿದೆ. ಈ ಹಾಡನ್ನು ನಾವು ಹಾಡುತ್ತಿರುವಾಗ ಪ್ರತಿಯೊಬ್ಬ ಭಾರತೀಯನಲ್ಲೂ ಉತ್ಸಾಹ ಮತ್ತು ದೇಶಭಕ್ತಿ ಉಕ್ಕುತ್ತದೆ.

ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್