Sign In

By signing in or creating an account, you agree with Associated Broadcasting Company's Terms & Conditions and Privacy Policy.

Supreme Court: ಪಟಾಕಿ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದ ಸುಪ್ರೀಂ

ಪಟಾಕಿ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಶುದ್ಧ ಗಾಳಿಯನ್ನು ಉಸಿರಾಡೋಣ, ಪಟಾಕಿ ಹಣವನ್ನು ಸಿಹಿತಿಂಡಿಗೆ ಖರ್ಚು ಮಾಡಿ ಎಂದು ಸುಪ್ರೀಂ ಹೇಳಿದೆ.

Supreme Court: ಪಟಾಕಿ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದ ಸುಪ್ರೀಂ
ಪಟಾಕಿಗಳು (ಸಂಗ್ರಹ ಚಿತ್ರ)
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Oct 20, 2022 | 4:58 PM

ಮಾಲಿನ್ಯವನ್ನು ಉಲ್ಲೇಖಿಸಿ ದೀಪಾವಳಿಯನ್ನು (Diwali) ಆಚರಿಸಲು ಇತರ ಮಾರ್ಗಗಳಿವೆ ಎಂದು ಹೇಳುವ ಮೂಲಕ, ಅಕ್ಟೋಬರ್ 24 ರ ಹಬ್ಬಕ್ಕೆ ಮುಂಚಿತವಾಗಿ ದೆಹಲಿಯಲ್ಲಿ ಪಟಾಕಿ ನಿಷೇಧವನ್ನು ತೆಗೆದುಹಾಕಲು ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ. ಎಎಪಿ ಸರ್ಕಾರದ ನಿಷೇಧದ ವಿರುದ್ಧ ಬಿಜೆಪಿ ಸಂಸದ ಮನೋಜ್ ತಿವಾರಿ (Manoj Tiwari) ಅಕ್ಟೋಬರ್ 10 ರಂದು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯವು ಯಾವುದೇ ಹೊಸ ಆದೇಶಗಳನ್ನು ನೀಡಲು ನಿರಾಕರಿಸಿದ್ದು ಈಗಾಗಲೇ ನ್ಯಾಯಾಲಯ ಸ್ಪಷ್ಟ ಆದೇಶವನ್ನು ನೀಡಿದೆ ಎಂದು ಹೇಳಿದೆ. ತಿವಾರಿ ಅವರ ವಕೀಲ ಶಶಾಂಕ್ ಶೇಖರ್ ಝಾ ಅವರು ಇಂದು ಭೋಜನ ವಿರಾಮದ ಸಮಯದಲ್ಲಿ ತುರ್ತು ವಿಚಾರಣೆಯ ಮನವಿಯನ್ನು ಪ್ರಸ್ತಾಪಿಸಿದರು. ಆದರೆ ನ್ಯಾಯಾಲಯವು ಮತ್ತೊಮ್ಮೆ ವಿನಂತಿಯನ್ನು ತಿರಸ್ಕರಿಸಿದ್ದು ನಿಮ್ಮ ಹಣವನ್ನು ಸಿಹಿತಿಂಡಿಗಳಿಗೆ ಖರ್ಚು ಮಾಡಿ. ಜನರು ಶುದ್ಧ ಗಾಳಿಯನ್ನು ಉಸಿರಾಡಲಿ ಎಂದು ಹೇಳಿದರು. ಅಂದ ಹಾಗೆ ನ್ಯಾಯಾಲಯವು ಬಿಜೆಪಿ ಸಂಸದರ ಅರ್ಜಿಯನ್ನು ಈಗಾಗಲೇ ಬಾಕಿಯಿರುವ ಇತರ ಅರ್ಜಿಗಳೊಂದಿಗೆ ಸೇರಿಸಿದೆ.  ದೆಹಲಿ ಹೈಕೋರ್ಟ್ ಕೂಡ ಗುರುವಾರ ಜನವರಿ 1 ರವರೆಗೆ ನಿಷೇಧವನ್ನು ಪ್ರಶ್ನಿಸುವ ಮನವಿಯನ್ನು ಆಲಿಸಲು ನಿರಾಕರಿಸಿತು, ಇದೇ ರೀತಿಯ ಅರ್ಜಿಗಳು ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಉಳಿದಿವೆ.

“ಹಸಿರು ಪಟಾಕಿಗಳಾದರೂ ಪಟಾಕಿಯನ್ನು ನಾವು ಅನುಮತಿಸುವುದಾದರೂ ಹೇಗೆ? ನೀವು ದೆಹಲಿಯ ಮಾಲಿನ್ಯವನ್ನು ನೋಡಿದ್ದೀರಾ?” ಸುಪ್ರೀಂಕೋರ್ಟ್ ಅಕ್ಟೋಬರ್ 10 ರಂದು ಅರ್ಜಿದಾರ ಮನೋಜ್ ತಿವಾರಿಯಲ್ಲಿ ಕೇಳಿತ್ತು. ಕೆಲವು ಬಲಪಂಥೀಯ ಸಂಘಟನೆಗಳು ಈ ನಿಷೇಧವನ್ನು ಸಾಂಪ್ರದಾಯಿಕ ಆಚರಣೆಯ ವಿರುದ್ಧ ತಾರತಮ್ಯವೆಂದು ಕಾಣುತ್ತವೆ.

ಪಟಾಕಿಗಳನ್ನು ನಿಷೇಧಿಸಿರುವ ದೆಹಲಿಯ ಎಎಪಿ ಸರ್ಕಾರದ ವಿರುದ್ಧ ದೆಹಲಿ ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ವಾಗ್ದಾಳಿ ನಡೆಸಿದ್ದು ದೀಪಾವಳಿಯಂದು ಹಿಂದೂಗಳು ಪಟಾಕಿಗಳನ್ನು ಸುಟ್ಟರೆ ಮಾಲಿನ್ಯವಾಗುತ್ತದೆ, ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸುತ್ತಾರೆ, ಆದರೆ ದೆಹಲಿಯಲ್ಲಿಮಂತ್ರಿಯಾದ ಖುಷಿಯಲ್ಲಿ ಪಟಾಕಿಯನ್ನು ಸುಟ್ಟರೆ, ಅದರಿಂದ ಆಮ್ಲಜನಕ ಹೊರಬರುತ್ತದೆ” ಎಂದು ಕುಟುಕಿದ್ದಾರೆ. ರಾಜ್ ಕುಮಾರ್ ಆನಂದ್ ಅವರ ಕೆಲವು ಬೆಂಬಲಿಗರು ಅವರು ಮಂತ್ರಿಯಾಗುತ್ತಿರುವುದನ್ನು ಆಚರಿಸುತ್ತಿರುವ ವಿಡಿಯೊವನ್ನು ಬಗ್ಗಾ ಹಂಚಿಕೊಂಡಿದ್ದಾರೆ.

ಮಾಲಿನ್ಯಕಾರಕ ಪಟಾಕಿಗಳನ್ನು ಸುಡುವ ಬದಲು ಮುಂದಿನ ವಾರ ದೀಪಾವಳಿಯ ಮೊದಲು ಯುಪಿಯ ಅಯೋಧ್ಯೆಯಲ್ಲಿ “ಡಿಜಿಟಲ್ ಪಟಾಕಿ ಪ್ರದರ್ಶನ” ಕಾರ್ಯಕ್ರಮ ನಡೆಯಲಿದ್ದು ಪಿಎಂ ನರೇಂದ್ರ ಮೋದಿ ಅವರು ಇದರಲ್ಲಿ  ಭಾಗವಹಿಸಲಿದ್ದಾರೆ.

ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ಇತರರ ಹಬ್ಬ ಹರಿದಿನಗಳಲ್ಲಿ ಪಟಾಕಿಗಳ ಮಾರಾಟ, ಖರೀದಿ ಮತ್ತು ಬಳಕೆಯನ್ನು ನಿಷೇಧಿಸುವ ದೆಹಲಿ ಸರ್ಕಾರದ ಆದೇಶವನ್ನು ಮನೋಜ್ ತಿವಾರಿ ಅವರು ಪ್ರಶ್ನಿಸಿದ್ದಾರೆ.

Published On - 4:24 pm, Thu, 20 October 22

ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು
ಉಗ್ರರು ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿದ್ದು ಆಘಾತಕಾರಿ ಎಂದ ಪರಮೇಶ್ವರ್
ಉಗ್ರರು ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿದ್ದು ಆಘಾತಕಾರಿ ಎಂದ ಪರಮೇಶ್ವರ್
ಫಾರ್ಮ್​ಹೌಸ್​ನಲ್ಲಿ ಎತ್ತಿನಗಾಡಿ ಓಡಿಸಿದ ನಟ ದರ್ಶನ್; ದಾಸನ ಜಾಲಿ ಮೂಡ್
ಫಾರ್ಮ್​ಹೌಸ್​ನಲ್ಲಿ ಎತ್ತಿನಗಾಡಿ ಓಡಿಸಿದ ನಟ ದರ್ಶನ್; ದಾಸನ ಜಾಲಿ ಮೂಡ್
VIDEO: ಝಹೀರ್ ಖಾನ್ - ರಿಷಭ್ ಪಂತ್ ನಡುವೆ ಮಾತಿನ ಚಕಮಕಿ
VIDEO: ಝಹೀರ್ ಖಾನ್ - ರಿಷಭ್ ಪಂತ್ ನಡುವೆ ಮಾತಿನ ಚಕಮಕಿ