ನೀನು ನಾನು ಎಂಬ ಜಗಳ ಉತ್ತರ ಪ್ರದೇಶದಲ್ಲಿಲ್ಲ, ಇಲ್ಲಿ ಗಲಭೆಗೆ ಜಾಗವಿಲ್ಲ: ಯೋಗಿ ಆದಿತ್ಯನಾಥ

ಆದಿತ್ಯನಾಥ ಪ್ರಕಾರ ಇದು ಯುಪಿಯ ಹೊಸ ಅಭಿವೃದ್ಧಿ ಕಾರ್ಯಸೂಚಿಯ ಸಂಕೇತವಾಗಿದೆ. ಇನ್ನು ಗಲಭೆ, ಅನಾಚಾರ ಅಥವಾ ಗೂಂಡಾಗಿರಿಗೆ ಇಲ್ಲಿ ಜಾಗವಿಲ್ಲ ಎಂದು ಅವರು ಹೇಳಿದ್ದಾರೆ.

ನೀನು ನಾನು ಎಂಬ ಜಗಳ ಉತ್ತರ ಪ್ರದೇಶದಲ್ಲಿಲ್ಲ, ಇಲ್ಲಿ ಗಲಭೆಗೆ ಜಾಗವಿಲ್ಲ: ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ
Edited By:

Updated on: Apr 13, 2022 | 2:30 PM

ಲಖನೌ: ಹಲವಾರು ರಾಜ್ಯಗಳಲ್ಲಿ ರಾಮನವಮಿ (Ram Navami) ಆಚರಣೆಯ ಸಂದರ್ಭದಲ್ಲಿ ಕೋಮು ಹಿಂಸಾಚಾರದ ಘಟನೆಗಳು ವರದಿಯಾಗಿದ್ದರೂ, ಉತ್ತರ ಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanath) ಅವರು ತಮ್ಮ ರಾಜ್ಯದಲ್ಲಿ ಹಿಂದೂ ಹಬ್ಬವು ಮುಸ್ಲಿಂ ಪವಿತ್ರ ತಿಂಗಳ ರಂಜಾನ್‌ನೊಂದಿಗೆ ಹೊಂದಿಕೆಯಾಗಿದ್ದರೂ ಸಹ ಅಂತಹ ಯಾವುದೇ ಹಿಂಸಾಚಾರ ಸಂಭವಿಸಿಲ್ಲ ಎಂದು ಹೇಳಿದ್ದಾರೆ. “ಇಲ್ಲಿ ಎಲ್ಲಿಯೂ ನಾನು ನೀನೆಂಬ ಜಗಳಗಳು ನಡೆದಿಲ್ಲ” ಎಂದ ಆದಿತ್ಯನಾಥ  ಇಲ್ಲಿ ದಂಗೆ,ಜಗಳಗಳಿಗೆ ಜಾಗವಿಲ್ಲ ಎಂದಿದ್ದಾರೆ. ಆದಿತ್ಯನಾಥ ಪ್ರಕಾರ ಇದು ಯುಪಿಯ ಹೊಸ ಅಭಿವೃದ್ಧಿ ಕಾರ್ಯಸೂಚಿಯ ಸಂಕೇತವಾಗಿದೆ. ಇನ್ನು ಗಲಭೆ, ಅನಾಚಾರ ಅಥವಾ ಗೂಂಡಾಗಿರಿಗೆ ಇಲ್ಲಿ ಜಾಗವಿಲ್ಲ ಎಂದು ಅವರು ಹೇಳಿದ್ದಾರೆ. ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಹಿಂಸಾತ್ಮಕ ಕೋಮು ಘರ್ಷಣೆಗಳಿಂದ ಆಚರಣೆಗಳನ್ನು ಹಾಳುಮಾಡಿದರು. ಇದರಲ್ಲಿ ಇಬ್ಬರು ಸಾವನ್ನಪ್ಪಿದರು ಮತ್ತು ಹಲವರು ಗಾಯಗೊಂಡ ಉದಾಹರಣೆಗಳನ್ನು ಉಲ್ಲೇಖಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಈ ಮಾತನ್ನು ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ, ಖಾರಗೋನ್ ಪ್ರದೇಶದ ವಿವಿಧ ಪ್ರದೇಶಗಳಲ್ಲಿ ರಾಮ ನವಮಿ ಮೆರವಣಿಗೆಯ ಸಂದರ್ಭದಲ್ಲಿ ಭುಗಿಲೆದ್ದ ಘರ್ಷಣೆಯಲ್ಲಿ ಕನಿಷ್ಠ 10 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಿದ್ಧಾರ್ಥ್ ಚೌಧರಿ ಸೇರಿದಂತೆ ಎರಡು ಡಜನ್‌ಗೂ ಹೆಚ್ಚು ಜನರು ಗಾಯಗೊಂಡಿದ್ದಾರೆ.


ಏತನ್ಮಧ್ಯೆ, ಗುಜರಾತ್‌ನಲ್ಲಿ ಹಿಮ್ಮತ್‌ನಗರ ಮತ್ತು ಖಂಭತ್ ನಗರಗಳಲ್ಲಿ ಎರಡು ಸಮುದಾಯಗಳ ನಡುವೆ ಕೋಮು ಘರ್ಷಣೆಗಳು ನಡೆದಿವೆ. ಒಬ್ಬರ ಮೇಲೆ ಒಬ್ಬರು ಕಲ್ಲು ತೂರಾಟ ನಡೆಸುತ್ತಿದ್ದ ಗುಂಪನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು ಮತ್ತು ಈ ಪ್ರಕ್ರಿಯೆಯಲ್ಲಿ ಅಂಗಡಿಗಳು ಮತ್ತು ವಾಹನಗಳು ಹಾನಿಗೊಳಗಾದವು. ಹಿಮ್ಮತ್‌ನಗರದಲ್ಲಿ ಸಿಆರ್ ಪಿಸಿ ಸೆಕ್ಷನ್ 144 ಜಾರಿಯಲ್ಲಿದೆ.

ಇದನ್ನೂ ಓದಿ: ವರ್ಗಾವಣೆ ಬೇಕಿದ್ದರೆ ರಾತ್ರಿ ನಿನ್ನ ಹೆಂಡತಿಯನ್ನು ಕಳಿಸಿಕೊಡು ಎಂದ ಬಾಸ್; ಮನನೊಂದ ಉದ್ಯೋಗಿ ಆತ್ಮಹತ್ಯೆ