ಅಮರಿಂದರ್​ ಸಿಂಗ್​ರನ್ನು ಪಂಜಾಬ್​ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ

| Updated By: Lakshmi Hegde

Updated on: Feb 13, 2022 | 6:09 PM

2021ರ ಸೆಪ್ಟೆಂಬರ್​ನಲ್ಲಿ ಪಂಜಾಬ್​​ನಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಲಾಗಿದೆ. ಕ್ಯಾಪ್ಟನ್​ ಅಮರಿಂದರ್ ಸಿಂಗ್​​ರನ್ನು ಸ್ಥಾನದಿಂದ ಕೆಳಗಿಳಿಸಿ, ಚರಣಜಿತ್ ಸಿಂಗ್ ಛನ್ನಿಯವರನ್ನು ಮುಖ್ಯಮಂತ್ರಿ ಮಾಡಲಾಗಿದೆ.

ಅಮರಿಂದರ್​ ಸಿಂಗ್​ರನ್ನು ಪಂಜಾಬ್​ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ
Follow us on

ಕೊಟ್ಕಾಪುರ: ಪಂಜಾಬ್​​ನಲ್ಲಿಈ ಹಿಂದೆ ಇದ್ದ ಮುಖ್ಯಮಂತ್ರಿ ಅಮರಿಂದರ್ ಸಿಂಗ್​ ನೇತೃತ್ವದ ಸರ್ಕಾರವನ್ನು ದೆಹಲಿಯಿಂದ ಬಿಜೆಪಿ ಕೇಂದ್ರ ಸರ್ಕಾರ ನಿಯಂತ್ರಣ ಮಾಡುತ್ತಿತ್ತು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ. ಕೋಟ್ಕಾಪುರದಲ್ಲಿ ಇಂದು ನವಿ ಸೋಚ್​, ನವ ಪಂಜಾಬ್​ ರ್ಯಾಲಿಯಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಪಂಜಾಬ್​​ನಲ್ಲಿ ಅಮರಿಂದರ್ ಸಿಂಗ್ (Amarinder Singh) ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ಅಲ್ಲಿ ಅನೇಕ ಕುಂದುಕೊರತೆಗಳಿದ್ದವು. ಆಡಳಿತ ವಿಫಲವಾಗುತ್ತಿತ್ತು. ಕೇಂದ್ರದಲ್ಲಿದ್ದ ಬಿಜೆಪಿ ಸರ್ಕಾರ ಅಮರಿಂದರ್​ ಸಿಂಗ್​ರನ್ನು ನಿಯಂತ್ರಿಸುತ್ತಿತ್ತು. ಹಾಗಾಗಿಯೇ ಅವರನ್ನು ಬದಲಿಸಿ, ಚರಣಜಿತ್​ ಸಿಂಗ್ ಛನ್ನಿಯವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲಾಯಿತು ಎಂದು ತಿಳಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಅಮರಿಂದರ್​ ಸಿಂಗ್​ ಹೆಸರನ್ನು ಹೇಳದೆ ಇಷ್ಟು ಮಾತುಗಳನ್ನಾಡಿದ್ದಾರೆ. ಹಿಂದಿನ ಮುಖ್ಯಮಂತ್ರಿ ಎಂದು ಉಲ್ಲೇಖಿಸಿದ್ದಾರೆ. ನಮ್ಮ ಸರ್ಕಾರ ದೆಹಲಿಯಿಂದ ನಿಯಂತ್ರಿಸುತ್ತಿರುವುದು ಗೊತ್ತಾಗಿದ್ದಕ್ಕೆ ಈ ಕ್ರಮ ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ. ಹಾಗೇ, ಪಂಜಾಬ್​​ನಲ್ಲಿ ಇದೀಗ ಅಮರಿಂದರ್​ ಸಿಂಗ್​ ಅವರ ನೂತನ ಪಕ್ಷ ಪಂಜಾಬ್​ ಲೋಕ್​ ಕಾಂಗ್ರೆಸ್​ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರ ಬಗ್ಗೆಯೂ ಕೂಡ ಪ್ರಿಯಾಂಕಾ ಗಾಂಧಿ ಇದೇ ವೇಳೆ  ಮಾತನಾಡಿದ್ದಾರೆ.

2021ರ ಸೆಪ್ಟೆಂಬರ್​ನಲ್ಲಿ ಪಂಜಾಬ್​​ನಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಲಾಗಿದೆ. ಕ್ಯಾಪ್ಟನ್​ ಅಮರಿಂದರ್ ಸಿಂಗ್​​ರನ್ನು ಸ್ಥಾನದಿಂದ ಕೆಳಗಿಳಿಸಿ, ಚರಣಜಿತ್ ಸಿಂಗ್ ಛನ್ನಿಯವರನ್ನು ಮುಖ್ಯಮಂತ್ರಿ ಮಾಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಕಾಂಗ್ರೆಸ್​​ನ ವರಿಷ್ಠರು, ಅದರಲ್ಲೂ ಗಾಂಧಿ ಕುಟುಂಬದ ಯಾರೂ ಕೂಡ ಈ ಬಗ್ಗೆ ಮಾತನಾಡಿರಲಿಲ್ಲ. ಕಾಂಗ್ರೆಸ್​ ನ ಪಂಜಾಬ್​ ಪ್ರದೇಶ ಸಮಿತಿ ಅಧ್ಯಕ್ಷ ನವಜೋತ್​ ಸಿಂಗ್ ಸಿಧು ಮತ್ತು ಅಮರಿಂದರ್​ ಸಿಂಗ್​ ನಡುವಿನ ಮನಸ್ತಾಪ ಹೆಚ್ಚಾದ ಬೆನ್ನಲ್ಲೇ, ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಹೀಗಾಗಿ ಅಮರಿಂದರ್​ ಸಿಎಂ ಸ್ಥಾನ ಕಳೆದುಕೊಳ್ಳಲು ನವಜೋತ್​ ಸಿಂಗ್ ಸಿಧು​ ಕಾರಣ ಎಂದು ಹೇಳಲಾಗಿತ್ತು. ಅದಾದ ಮೇಲೆ ಕೂಡ ಕಾಂಗ್ರೆಸ್ ಸಧುರನ್ನು ಸಿಎಂ ಮಾಡದೆ, ಛನ್ನಿಯವರಿಗೆ ಆ ಸ್ಥಾನ ನೀಡಿತ್ತು. ಹಾಗೇ, ಮುಂದಿನ ಅವಧಿಗೂ ಕೂಡ ಛನ್ನಿಯವರೇ ಸಿಎಂ ಅಭ್ಯರ್ಥಿ.

ಇದನ್ನೂ ಓದಿ: ಮಹೇಶ್​ ಬಾಬು ದಿನವನ್ನು ಹಾಳು ಮಾಡಿದ ಮಗಳು ಸಿತಾರಾ; ವೈರಲ್​ ಆಯ್ತು ಫೋಟೋ

Published On - 5:57 pm, Sun, 13 February 22