ಹೊಸ ಕೊರೊನಾ ವೈರಸ್ ಸೋಂಕಿನ ಲಕ್ಷಣಗಳೇನು? ಇಲ್ಲಿದೆ ಮಾಹಿತಿ

ಹಳೆಯ ಕೊರೊನಾ ವೈರಸ್​ಗೆ ಹೋಲಿಸಿದರೆ, ಬ್ರಿಟನ್​ನ ರೂಪಾಂತರಗೊಂಡ ಕೊರೊನಾ ವೈರಸ್ ಶೇ.70 ರಷ್ಟು ವೇಗವಾಗಿ ಹರಡುತ್ತೆ ಎನ್ನುವುದು ಈಗ ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ ಎರಡೂ ವೈರಸ್​ಗಳ ನಡುವಿನ ಲಕ್ಷಣವೇನು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

ಹೊಸ ಕೊರೊನಾ ವೈರಸ್ ಸೋಂಕಿನ ಲಕ್ಷಣಗಳೇನು? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 29, 2020 | 9:50 PM

ನವದೆಹಲಿ: ಇಂಗ್ಲೆಂಡ್‌ನ ರೂಪಾಂತರಗೊಂಡ ಕೊರೊನಾ ವೈರಸ್ ಭಾರತಕ್ಕೂ ಎಂಟ್ರಿ ಕೊಟ್ಟಿರುವುದು ಮಂಗಳವಾರ ಬೆಳಗ್ಗೆ ಖಚಿತವಾಗಿದೆ. ಭಾರತದಲ್ಲಿ ಆರು ಮಂದಿಗೆ ಬ್ರಿಟನ್​ನ ರೂಪಾಂತರಗೊಂಡ ಕೊರೊನಾ ಸೋಂಕು ತಗುಲಿರುವುದನ್ನು ಇಂದು ಬೆಳಿಗ್ಗೆ ಕೇಂದ್ರ ಸರ್ಕಾರ ದೃಢಪಡಿಸಿದೆ. ಹಳೆಯ ಕೊರೊನಾ ವೈರಸ್​ಗೆ ಹೋಲಿಸಿದರೆ, ಬ್ರಿಟನ್​ನ ರೂಪಾಂತರಗೊಂಡ ಕೊರೊನಾ ವೈರಸ್ ಶೇ.70 ರಷ್ಟು ವೇಗವಾಗಿ ಹರಡುತ್ತೆ ಎನ್ನುವುದು ಈಗ ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ ಎರಡೂ ವೈರಸ್​ಗಳ ನಡುವಿನ ಲಕ್ಷಣವೇನು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

ಈ ಮೊದಲು ಭಾರತಕ್ಕೆ ಬಂದಿದ್ದ ಕೊರೊನಾ ದೇಹ ಪ್ರವೇಶಿಸಿದರೆ, ಜ್ವರ, ನೆಗಡಿ, ಕೆಮ್ಮು, ಶೀತ, ಸ್ನಾಯು ನೋವು ಕಾಣಿಸಿಕೊಳ್ಳುತ್ತದೆ. ನಾಲಗೆ ರುಚಿ ಕಂಡು ಹಿಡಿಯುವುದಿಲ್ಲ. ಗಂಟಲು ಒಣಗುವುದು, ಒಣ ಕಫ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದರ ಜೊತೆಗೆ ಉಸಿರಾಟದ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತದೆ.

ಇನ್ನು, ರೂಪಾಂತರಗೊಂಡ ಕೊರೊನಾದ ಲಕ್ಷಣಗಳೆಂದರೆ, ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ನಿರಂತರವಾಗಿ ಎದೆನೋವು ಕಾಣಿಸಿಕೊಳ್ಳುತ್ತದೆ. ವಿಪರೀತವಾಗಿ ಸುಸ್ತಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

6 ಮಂದಿಗೆ ರೂಪಾಂತರಿ ಕೊರೊನಾ ಕಳೆದ ಎಂಟು ಹತ್ತು ದಿನಗಳಿಂದ ಭಾರತದಲ್ಲಿ ಬ್ರಿಟನ್​ನ ರೂಪಾಂತರಗೊಂಡ ಕೊರೊನಾ ವೈರಸ್ ಸಾಕಷ್ಟು ಆತಂಕ ಸೃಷ್ಟಿಸಿದೆ . ಬ್ರಿಟನ್ ರೂಪಾಂತರಗೊಂಡ ಕೊರೊನಾ ವೈರಸ್ ಭಾರತಕ್ಕೆ ಎಂಟ್ರಿ ಕೊಡದಂತೆ ತಡೆಯಲು ಕೇಂದ್ರ ಸರ್ಕಾರ ಸಾಕಷ್ಟು ಕ್ರಮಗಳನ್ನ ತೆಗೆದುಕೊಂಡಿದೆ. ಬ್ರಿಟನ್​ನೊಂದಿಗಿನ ವಿಮಾನ ಸಂಚಾರ ಸ್ಥಗಿತಗೊಳಿಸಿದೆ. ನವೆಂಬರ್ 23 ರಿಂದ ಬ್ರಿಟನ್ ನಿಂದ ಬಂದವರನ್ನೆಲ್ಲಾ ಪತ್ತೆ ಹಚ್ಚಿ ಆರ್‌ಟಿ-ಪಿಸಿಆರ್ ಪರೀಕ್ಷೆಗೊಳಪಡಿಸುತ್ತಿದೆ. ಜತೆಗೇ ಐಸೋಲೇಷನ್​​ನಲ್ಲಿರಲು ಸೂಚಿಸಿದೆ. ಆದರೂ, ಬ್ರಿಟನ್ ನ ರೂಪಾಂತರಗೊಂಡ ಕೊರೊನಾ ವೈರಸ್ ಭಾರತಕ್ಕೆ ಪ್ರವೇಶಿಸಲು ತಡೆಯಲು ಸಾಧ್ಯವಾಗಿಲ್ಲ.

ಬ್ರಿಟನ್​ನಿಂದ ಭಾರತಕ್ಕೆ ಬಂದಿರುವ ಆರು ಮಂದಿಯಲ್ಲಿ ರೂಪಾಂತರಗೊಂಡ ಕೊರೊನಾ ಸೋಂಕು ಇರುವುದು ಇಂದು ದೃಢಪಟ್ಟಿದೆ. ಇಂದು ಬೆಳಿಗ್ಗೆ ಕೇಂದ್ರ ಸರ್ಕಾರವೇ ಅಧಿಕೃತವಾಗಿ ಭಾರತದಲ್ಲಿ ಆರು ಮಂದಿಯಲ್ಲಿ ಬ್ರಿಟನ್ ನ ರೂಪಾಂತರಗೊಂಡ ಕೊರೊನಾ ಸೋಂಕು ತಗುಲಿದೆ ಎನ್ನುವುದು ಜೆನೋಮಿಕ್ ಸಿಕ್ವೇನ್ಸ್ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಪ್ರಕಟಿಸಿತು. ಆರು ಮಂದಿಯಲ್ಲಿ ಮೂವರು ಬೆಂಗಳೂರಿನವರು. ತಮಿಳುನಾಡಿನ ರಾಜಧಾನಿ ಚೆನ್ನೈನ ಓರ್ವ ವ್ಯಕ್ತಿ, ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಓರ್ವ ವ್ಯಕ್ತಿ ಹಾಗೂ ತೆಲಂಗಾಣದ ವಾರಂಗಲ್ ಜಿಲ್ಲೆಯ ಓರ್ವ ವ್ಯಕ್ತಿಯಲ್ಲಿ ಬ್ರಿಟನ್ ನ ರೂಪಾಂತರಗೊಂಡ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಆರು ಮಂದಿಯೂ ದಕ್ಷಿಣ ಭಾರತದವರಾಗಿರುವುದು ವಿಶೇಷ. ಆರು ಮಂದಿಯನ್ನು ಪ್ರತೇಕವಾಗಿ ಐಸೋಲೇಷನ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬ್ರಿಟನ್ ನ ರೂಪಾಂತರಗೊಂಡ ಕೊರೊನಾ ವೈರಸ್ ವಿರುದ್ಧ ಈಗಾಗಲೇ ಸಿದ್ದವಾಗಿರುವ ಲಸಿಕೆಗಳು ಕೆಲಸ ಮಾಡಲಿವೆ ಎಂದು ಇಂದು ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಡಾಕ್ಟರ್ ವಿಜಯ ರಾಘವನ್ ಹೇಳಿದ್ದಾರೆ.

ನವಂಬರ್ 25 ರಿಂದ ಡಿಸೆಂಬರ್ 23 ರವರೆಗೆ ಬ್ರಿಟನ್ ನಿಂದ ಸುಮಾರು 30 ಸಾವಿರ ಜನರು ಭಾರತಕ್ಕೆ ಬಂದಿದ್ದಾರೆ. ಈಗ 30 ಸಾವಿರ ಜನರ ಮೇಲೆ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ನಿಗಾವಹಿಸಿವೆ . ಹಳೆಯ ಕೊರೊನಾ ವೈರಸ್ ಗೆ ನೀಡಿದ ಚಿಕಿತ್ಸೆಯನ್ನೇ ಹೊಸ ಕೊರೊನಾ ವೈರಸ್​​ಗೂ ನೀಡಬೇಕು. ಜೆನೋಮಿಕ್ ಸ್ವೀಕ್ವೇನ್ಸ್ ಪರೀಕ್ಷೆಗಾಗಿ ದೇಶದಲ್ಲಿ ಹತ್ತು ಲ್ಯಾಬ್ ಸ್ಥಾಪಿಸಲಾಗಿದೆ .

ಈಗಾಗಲೇ ಸಂಶೋಧನೆಯಿಂದ ಇಂಗ್ಲೆಂಡ್, ಆಮೆರಿಕಾ ದೇಶಗಳಲ್ಲಿ ಮಾರುಕಟ್ಟೆಗೆ ಬಂದಿರುವ ಫೈಜರ್, ಮಾಡೆರ್ನಾ ಕಂಪನಿಯ ಲಸಿಕೆಗಳು ಹೊಸ ಪ್ರಭೇದದ ವಿರುದ್ಧವೂ ಕೆಲಸ ಮಾಡಲಿವೆ ಎಂದಿರುವುದು ಸಮಾಧಾನಕರ. ಭಾರತಕ್ಕೆ ಇಂಗ್ಲೆಂಡ್‌ನ ಹೊಸ ಪ್ರಭೇದದ ಕೊರೊನಾ ವೈರಸ್ ಎಂಟ್ರಿ ನಿರೀಕ್ಷಿತ . ಏಕೆಂದರೇ, ವೈರಸ್ ರೂಪಾಂತರ ಸಹಜ. ನಾವು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ನೀತಿ ಆಯೋಗದ ಸದಸ್ಯ ವಿನೋದ್ ಕುಮಾರ್ ಪೌಲ್ ಹೇಳಿದ್ದಾರೆ.

ರೂಪಾಂತರಿ ಕೊರೊನಾ ವೈರಸ್​ ಬಗ್ಗೆ ಅತಿ ಭಯ ಬೇಡ: ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ