Mohan Bhagwat: ನಮ್ಮ ಸಮಾಜದ ಜನರನ್ನು ವಂಚನೆ ಮಾಡುತ್ತಿದೆ ಈ ಮಿಷನರಿಗಳು: ಮೋಹನ್ ಭಾಗವತ್

100 ವರ್ಷಗಳ ಅವಧಿಯಲ್ಲಿ, ಈ ಮಿಷನರಿ ಜನರು ಎಲ್ಲವನ್ನೂ ಬದಲಾಯಿಸಲು ಭಾರತಕ್ಕೆ ಬಂದರು ಎಂದು ಅವರು ಹೇಳುತ್ತಾರೆ. ನಮ್ಮ ದೇಶದಲ್ಲಿ ಅವರು ಶತಮಾನಗಳಿಂದ ಕೆಲಸ ಮಾಡುತ್ತಿದ್ದಾರೆ. ಆದರೆ ನಮ್ಮ ಪೂರ್ವಜರ ಪ್ರಯತ್ನದಿಂದ ನಮ್ಮ ಬೇರುಗಳು ಗಟ್ಟಿಯಾಗಿ ಉಳಿದಿದ್ದರಿಂದ ನಮ್ಮ ಸಂಸ್ಕೃತಿ, ಆಚರಣೆ, ತತ್ವಗಳನ್ನು ಎಂದಿಗೂ ಬದಲಾವಣೆ ಮಾಡಲು ಸಾಧ್ಯವಾಗಿಲ್ಲ ಎಂದು ಮೋಹನ್ ಭಾಗವತ್ ಹೇಳಿದರು.

Mohan Bhagwat: ನಮ್ಮ ಸಮಾಜದ ಜನರನ್ನು ವಂಚನೆ ಮಾಡುತ್ತಿದೆ ಈ ಮಿಷನರಿಗಳು: ಮೋಹನ್ ಭಾಗವತ್
ಮೋಹನ್ ಭಾಗವತ್
Follow us
| Updated By: Rakesh Nayak Manchi

Updated on:Apr 21, 2023 | 8:43 PM

ಬುರ್ಹಾನ್ಪುರ್: ನಮ್ಮ ಜತೆಗೆ ಈ ಸಮಾಜ ಇಲ್ಲ, ನಮ್ಮನ್ನು ಗೌರವದಿಂದ ಕಾಣುತ್ತಿಲ್ಲ ಎಂದು ಹೇಳುವ ಜನರನ್ನು ತನ್ನತ್ತ ಸೆಳೆಯುವ ಮೂಲಕ ಮಿಷನರಿಗಳು ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದರು. ಗೋವಿಂದನಾಥ ಮಹಾರಾಜರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಜನರು ನಮ್ಮ ಸಮಾಜ ಜನರ ಬಳಿ ಹೋಗುವುದಿಲ್ಲ, ಅವರ ಬಳಿ ಸಹಾಯ ಕೇಳುವುದಿಲ್ಲ, ಎಲ್ಲಿಂದಲೋ ಬಂದ ಈ ಮಿಷನರಿಗಳು ಜನರ ಬಳಿ ಹೋಗಿ ಸಹಾಯ ಕೇಳುತ್ತಾರೆ. ಹೀಗೆ ನಮ್ಮ ದೇಶಕ್ಕೆ ಬರುವ ಮಿಷನರಿಗಳೊಂದಿಗೆ ನಮ್ಮವರು ಅವರ ಭಾಷೆ ಮಾತನಾಡಲು ಆರಂಭಿಸುತ್ತಾರೆ, ಅವರ ಆಹಾರ ಕ್ರಮಗಳನ್ನು ಅನುಸರಿಸುತ್ತಾರೆ. ಇದನ್ನೇ ಲಾಭವನ್ನಾಗಿ ಮಾಡಿಕೊಳ್ಳುವ ಮಿಷನರಿಗಳು ಅಂತಹವರನ್ನು ಮತಾಂತರಿಸುತ್ತಾರೆ ಎಂದು ಹೇಳಿದರು.

100 ವರ್ಷಗಳ ಅವಧಿಯಲ್ಲಿ, ಈ ಮಿಷನರಿ ಜನರು ಎಲ್ಲವನ್ನೂ ಬದಲಾಯಿಸಲು ಭಾರತಕ್ಕೆ ಬಂದರು ಎಂದು ಅವರು ಹೇಳುತ್ತಾರೆ. ನಮ್ಮ ದೇಶದಲ್ಲಿ ಅವರು ಶತಮಾನಗಳಿಂದ ಕೆಲಸ ಮಾಡುತ್ತಿದ್ದಾರೆ. ಆದರೆ ನಮ್ಮ ಪೂರ್ವಜರ ಪ್ರಯತ್ನದಿಂದ ನಮ್ಮ ಬೇರುಗಳು ಗಟ್ಟಿಯಾಗಿ ಉಳಿದಿದ್ದರಿಂದ ನಮ್ಮ ಸಂಸ್ಕೃತಿ, ಆಚರಣೆ, ತತ್ವಗಳನ್ನು ಎಂದಿಗೂ ಬದಲಾವಣೆ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಅವರನ್ನು ಬೇರು ಸಮೇತ ಕಿತ್ತೊಗೆಯುವ ಪ್ರಯತ್ನಗಳು ನಡೆಯುತ್ತಿವೆ. ಆದ್ದರಿಂದ ಸಮಾಜ ಜನರು ಈ ಮೋಸವನ್ನು ಅರ್ಥ ಮಾಡಿಕೊಳ್ಳಬೇಕು. ನಂಬಿಕೆಯನ್ನು ಗಟ್ಟಿಗೊಳಿಸಬೇಕು ಎಂದರು.

ನಮ್ಮ ಸಮಾಜದ ಜನರನ್ನು ವಂಚನೆ ಮಾಡಿ. ಜನರು ನಂಬಿಕೆಯನ್ನು ಹಾಳು ಮಾಡುತ್ತಿದ್ದಾರೆ. ನಮ್ಮ ಧರ್ಮದ ಬಗ್ಗೆ ಈ ಮಿಷನರಿ ಜನರು ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ನಮ್ಮ ಸಮಾಜವು ಅಂತಹ ಜನರನ್ನು ಹಿಂದೆಂದೂ ಎದುರಿಸಲಿಲ್ಲ, ಆ ಕಾರಣದಿಂದ ನಮ್ಮ ಜನರನ್ನು ಹಾಗೂ ನಮ್ಮ ಧರ್ಮವನ್ನು ಅವಮಾನ ಮಾಡುತ್ತಿದ್ದಾರೆ. ನಾವು ಈ ದೌರ್ಬಲ್ಯವನ್ನು ತೊಡೆದುಹಾಕಬೇಕು ಎಂದು ಅವರು ಹೇಳಿದರು. ನಾವು ದೃಢವಾಗಿ ನಿಂತರೆ ಯಾರು ನಮ್ಮ ಸಮಾಜವನ್ನು ಅಲುಗಾಡಿಸುವುದಿಲ್ಲ. ಆದರೆ ನಂಬಿಕೆ ಕಳೆದುಕೊಂಡಾಗ ಮತ್ತು ಸಮಾಜವು ತಮ್ಮೊಂದಿಗೆ ಇಲ್ಲ ಎಂದು ಭಾವಿಸಿದಾಗ ಜನರು ಬದಲಾಗುತ್ತಾರೆ ಎಂದು ಭಾಗವತ್ ಹೇಳಿದರು.

ಇದನ್ನೂ ಓದಿ:Mohan Bhagwat: ನಾವು ನಮಗಾಗಿ ಮಾತ್ರ ಬದುಕುವವರಲ್ಲ, ದೇಶದ ಶಿಕ್ಷಣ, ಆರೋಗ್ಯ ವ್ಯವಸ್ಥೆ ನಾಶ ಮಾಡಿದ್ದು ಬ್ರಿಟಿಷರು

ಕಲ್ಯಾಣ ಆಶ್ರಮದಿಂದ (ಆರ್‌ಎಸ್‌ಎಸ್ ಬೆಂಬಲಿತ ಸ್ವಯಂಸೇವಾ ಸಂಸ್ಥೆ) ಸಹಾಯ ಪಡೆದು ಸ್ಥಳೀಯರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ 150 ವರ್ಷಗಳ ನಂತರ ಮಧ್ಯಪ್ರದೇಶದ ಇಡೀ ಗ್ರಾಮವು ಹಿಂದೂ ಧರ್ಮಕ್ಕೆ ಸೇರಿದೆ ಎಂದು ಹೇಳಿದ್ದಾರೆ.

ಮೋಹನ್ ಭಾಗವತ್ ಗುರುದ್ವಾರ ಬಡಿ ಸಂಗತ್‌ಗೆ ಪೂಜೆ ಸಲ್ಲಿಸಲು ಭೇಟಿ ನೀಡಿದರು. ಗುರುದ್ವಾರಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಗುರು ಗ್ರಂಥ ಸಾಹಿಬ್ ಹಿಂದೂಗಳಿಗೆ ಸ್ಫೂರ್ತಿಯ ಮೂಲವಾಗಿದೆ. ಸೋಮವಾರ, ಭಾಗವತ್ ಅವರು ಸರಸ್ವತಿ ನಗರದಲ್ಲಿ ಡಾ ಹೆಡ್ಗೆವಾರ್ ಸ್ಮಾರಕ ಸಮಿತಿಯ ಕಚೇರಿ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ ಮತ್ತು ಬುರ್ಹಾನ್‌ಪುರದಲ್ಲಿ ಸಂಘದ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:17 am, Mon, 17 April 23

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು