ದೇಶದಲ್ಲಿ ಏಪ್ರಿಲ್ 1ರಿಂದ ಕೊರೊನಾ ನಿಯಂತ್ರಣ ನಿರ್ಬಂಧಗಳು ಯಾವವೂ ಇಲ್ಲ. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ನ್ನು ಕಡ್ಡಾಯವಾಗಿ ಧರಿಸಿ ಎಂದು ಕೇಂದ್ರ ಸರ್ಕಾರ ಹೇಳಿದ್ದರೂ ಕೂಡ ಕೆಲವು ರಾಜ್ಯಗಳಲ್ಲಿ ಮಾಸ್ಕ್ ಕೂಡ ಕಡ್ಡಾಯವಲ್ಲ. ಧರಿಸದೆ ಇದ್ದರೆ ದಂಡ ವಿಧಿಸುವುದಿಲ್ಲ ಎಂದು ಅಲ್ಲಿನ ಸರ್ಕಾರಗಳು ಹೇಳಿವೆ. ಆದರೆ ಈಗ ಮತ್ತೆ ಕೆಲವು ರಾಜ್ಯಗಳಲ್ಲಿ ಕೊರೊನಾ ಕೇಸ್ಗಳ ಸಂಖ್ಯೆ ನಿಧಾನಕ್ಕೆ ಏರಿಕೆಯಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ದೆಹಲಿ, ಮಹಾರಾಷ್ಟ್ರ ಮತ್ತು ಮಿಜೋರಾಂಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ದೆಹಲಿಯಲ್ಲಿ ಏಪ್ರಿಲ್ 14ರಂದು 325 ಕೊರೊನಾ ಕೇಸ್ಗಳು ದಾಖಲಾಗಿದೆ. ಅಲ್ಲಿ ಪಾಸಿಟಿವಿಟಿ ದರವೂ ಕೂಡ ಶೇ. 2.39ರಷ್ಟಿದೆ. ಹಾಗಿದ್ದಾಗ್ಯೂ ಜನರು ಗಾಬರಿಯಾಗುವ ಅಗತ್ಯವಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ವೈದ್ಯರು ಧೈರ್ಯ ತುಂಬುತ್ತಿದ್ದಾರೆ.
ಮಹಾರಾಷ್ಟ್ರದಲ್ಲೂ ಹೆಚ್ಚಳ
ಮಹಾರಾಷ್ಟ್ರದಲ್ಲಿ ಗುರುವಾರ 103 ಕೊರೊನಾ ಕೇಸ್ಗಳು ದಾಖಲಾಗಿವೆ. ಹಾಗೇ, ಐದು ಮಂದಿ ಕೊವಿಡ್ 19ನಿಂದ ಮೃತಪಟ್ಟಿದ್ದಾರೆ. ಮುಂಬೈ ನಗರದಲ್ಲಿ ಏಪ್ರಿಲ್ 14ರಂದು 56 ಹೊಸ ಕೇಸ್ಗಳು ದಾಖಲಾಗಿದ್ದವು. ಈ ಮೂಲಕ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ ಇಲ್ಲಿ 10,58,623 ಏರಿಕೆಯಾಗಿದೆ. ಸದ್ಯ ಮುಂಬೈನಲ್ಲಿ ಶೇ.98ರಷ್ಟು ಚೇತರಿಕೆ ಪ್ರಮಾಣವಿದ್ದು, 346 ಸಕ್ರಿಯ ಪ್ರಕರಣಗಳಿವೆ. ಮಿಜೋರಾಂನಲ್ಲಿ ಕೊವಿಡ್ 19 ಏರಿಕೆ ತುಸು ಏರಿಕೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 2,25,901ಕ್ಕೆ ತಲುಪಿದೆ.
ಇನ್ನುಳಿದಂತೆ ತಮಿಳುನಾಡಿನಲ್ಲಿ ನಿನ್ನೆ 25 ಹೊಸ ಕೊರೊನಾ ಕೇಸ್ಗಳು ದಾಖಲಾಗಿದ್ದವು. ಅದರಲ್ಲಿ ಒಬ್ಬರು ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ ಭಾರತಕ್ಕೆ ವಾಪಸ್ ಬಂದವರು. ಈ ರಾಜ್ಯದಲ್ಲಿ ಒಟ್ಟು 230 ಕೊರೊನಾ ಸಕ್ರಿಯ ಪ್ರಕರಣಗಳು ಇದ್ದು, ಇಲ್ಲಿಯವರೆಗೆ 34,14,933 ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇತ್ತೀಚೆಗೆ ಕೊರೊನಾದ ಎಕ್ಸ್ಇ ರೂಪಾಂತರಿ ವೈರಾಣು ಆತಂಕ ಸೃಷ್ಟಿಸಿರುವ ಬೆನ್ನಲ್ಲೇ, ದಕ್ಷಿಣ ಆಫ್ರಿಕಾದ ಬೋಟ್ಸ್‌ವಾನಾದಲ್ಲಿ ಒಮಿಕ್ರೋನ್ ಬಿಎ.4 ಹಾಗೂ ಬಿಎ.5 ಎಂಬ 2 ಹೊಸ ರೂಪಾಂತರಿಗಳು ಪತ್ತೆಯಾಗಿವೆ. ಇವು ಹೆಚ್ಚು ಅಪಾಯಕಾರಿ ಅಥವಾ ತೀವ್ರವಾಗಿ ಹರಡುವ ಸಾಮರ್ಥ್ಯ ಹೊಂದಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಇದರ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಇದನ್ನೂ ಓದಿ: Viral: ಸ್ಕರ್ಟ್ ಧರಿಸಿ ‘ಸಾಮಿ ಸಾಮಿ’ ಹಾಡಿಗೆ ಯುವಕನ ಭರ್ಜರಿ ಡಾನ್ಸ್; ಏನಿದು ಹೊಸ ಟ್ರೆಂಡ್?
ಆಲಿಯಾ-ರಣಬೀರ್ ಆಸ್ತಿ ಸೇರಿದರೆ ಆಗಲಿದೆ 840 ಕೋಟಿ ರೂಪಾಯಿ! ಇದರಲ್ಲಿ ಯಾರ ಪಾಲು ಎಷ್ಟು?