ನಿಜಾಮಾಬಾದ್​​ನಲ್ಲಿರುವ ಮನೆಯೊಂದರಿಂದ ನಗದು, ಚಿನ್ನ ಜತೆ ಫ್ರಿಡ್ಜ್​​​ನಲ್ಲಿರಿಸಿದ ಟೊಮೆಟೊ ಕದ್ದ ಕಳ್ಳರು

ದರೋಡೆಕೋರರು ಚಿನ್ನಾಭರಣ, ನಗದು ಜತೆ ಟೊಮೆಟೊ ಕದ್ದುಕೊಂಡು ಹೋಗಿರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಪೊಲೀಸರಿಗೆ ದೂರು ನೀಡಿದ ರಫಿ ಚಿನ್ನ, ನಗದು ಜತೆಗೆ ಟೊಮೆಟೊ ಕಳ್ಳತನವಾಗಿದೆ ಎಂದು ನಮೂದಿಸಿರುವುದು ಗಮನಾರ್ಹ.

ನಿಜಾಮಾಬಾದ್​​ನಲ್ಲಿರುವ ಮನೆಯೊಂದರಿಂದ ನಗದು, ಚಿನ್ನ ಜತೆ ಫ್ರಿಡ್ಜ್​​​ನಲ್ಲಿರಿಸಿದ ಟೊಮೆಟೊ ಕದ್ದ ಕಳ್ಳರು
ಟೊಮೆಟೊ
ರಶ್ಮಿ ಕಲ್ಲಕಟ್ಟ

Updated on: Jul 12, 2023 | 3:02 PM

ದೇಶಾದ್ಯಂತ ಟೊಮೆಟೊಗೆ ಭಾರೀ ಬೇಡಿಕೆ ಇದ್ದು, ಟೊಮೆಟೊ (tomatoes) ಕಳ್ಳತನವಾಗಿರುವ ಬಗ್ಗೆಯೂ ವರದಿಯಾಗುತ್ತಿದೆ. ಇತ್ತೀಚೆಗಷ್ಟೇ ತೆಲಂಗಾಣ (Telangana) ನಿಜಾಮಾಬಾದ್ (Nizamabad) ಜಿಲ್ಲೆಯ ಬೋಧನ್​​​​ನಲ್ಲಿ ಇಂಥದ್ದೇ ವಿಚಿತ್ರ ಘಟನೆ ನಡೆದಿದೆ. ಬೋಧನ್ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರ ರಫಿ ಮನೆಯಲ್ಲಿ ಕಳ್ಳತನ ನಡೆದಿದೆ. ಗೌಡ್ಸ್ ಕಾಲೊನಿಯಲ್ಲಿ ವಾಸವಾಗಿರುವ ರಫಿ ಕುಟುಂಬಸ್ಥರು ಮನೆಗೆ ಬೀಗ ಹಾಕಿ ಸಿದ್ದಿಪೇಟೆಗೆ ತೆರಳಿದ್ದರು. ಈ ವೇಳೆ ಮಧ್ಯರಾತ್ರಿ ಕಳ್ಳರು ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿದ್ದ 12 ತೊಲೆ ಬಂಗಾರ ಸೇರಿ 1 ಲಕ್ಷ ರೂ.ನಗದು ಕಳ್ಳತನವಾಗಿದೆ. ಕುಟುಂಬ ಮನೆಗೆ ಹಿಂದಿರುಗಿದಾಗ ಕಳ್ಳತನ ನಡೆದಿರುವುದನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಇಷ್ಟೇ ಅಲ್ಲ ಫ್ರಿಡ್ಜ್ ನಲ್ಲಿಟ್ಟಿದ್ದ ಕೆಜಿಗಟ್ಟಲೆ ಟೊಮೆಟೊವನ್ನೂ ಕಳ್ಳರು ತೆಗೆದುಕೊಂಡು ಹೋಗಿದ್ದಾರೆ.

ದರೋಡೆಕೋರರು ಚಿನ್ನಾಭರಣ, ನಗದು ಜತೆ ಟೊಮೆಟೊ ಕದ್ದುಕೊಂಡು ಹೋಗಿರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಪೊಲೀಸರಿಗೆ ದೂರು ನೀಡಿದ ರಫಿ ಚಿನ್ನ, ನಗದು ಜತೆಗೆ ಟೊಮೆಟೊ ಕಳ್ಳತನವಾಗಿದೆ ಎಂದು ನಮೂದಿಸಿರುವುದು ಗಮನಾರ್ಹ.

ಇದನ್ನೂ ಓದಿ: Tomato: ಬೆಲೆ ಏರಿಕೆಯಾದಾಗಿಂದ ಟೊಮೆಟೊವನ್ನು ಕಾಪಾಡಿಕೊಳ್ಳಲು ರೈತರ ಸಾಹಸ: ರಾಜಸ್ಥಾನದಲ್ಲಿ ಒಂದೂವರೆ ಕ್ವಿಂಟಾಲ್ ಕಳ್ಳತನ

ಟೊಮೆಟೊ ಕೂಡ ನಾಪತ್ತೆಯಾಗಿರುವುದು ತಿಳಿದು ಬೆಚ್ಚಿಬಿದ್ದೆವು. ಅಡುಗೆ ಮಾಡಲು ಫ್ರಿಡ್ಜ್ ತೆರೆದಾಗ ಟೊಮೆಟೊ ಕಾಣೆಯಾಗಿತ್ತು. ಒಂದೆಡೆ ಚಿನ್ನ, ನಗದು ಕಳೆದುಕೊಂಡ ನೋವಿನಲ್ಲಿದ್ದ ನಮಗೆ ಟೊಮೆಟೊ ಕೂಡ ಕಳ್ಳತನವಾಗಿರುವುದು ಅಚ್ಚರಿ ಮೂಡಿಸಿದೆ ಎಂದು ರಫಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:38 pm, Wed, 12 July 23

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us