ಎನ್​​ಸಿಬಿ ಸಾಕ್ಷಿ ಕಿರಣ್ ಗೋಸಾವಿ ವಿರುದ್ಧ ಪುಣೆಯಲ್ಲಿ  ಮೂರನೇ ಎಫ್ಐಆರ್ ದಾಖಲು

| Updated By: ರಶ್ಮಿ ಕಲ್ಲಕಟ್ಟ

Updated on: Oct 31, 2021 | 6:07 PM

ಈ ಪ್ರಕರಣದಲ್ಲಿ ಗೋಸಾವಿಯನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪುಣೆ ಪೊಲೀಸರು ಹೇಳಿದ್ದಾರೆ ಮತ್ತು 2019 ರಲ್ಲಿ ನ್ಯಾಯಾಲಯವು ಆತನನ್ನು ಪರಾರಿ ಎಂದು ಘೋಷಿಸಿತು. ಆದರೆ ಆರೋಪಿ ಆರ್ಯನ್ ಖಾನ್ ಜೊತೆಗಿನ ಅವರ ಸೆಲ್ಫಿ ವೈರಲ್ ಆದ ಬೆನ್ನಲ್ಲೇ ಮತ್ತೆ ಹಳೇ ಪ್ರಕರಣಗಳನ್ನು ಕೆದಕಲಾಯಿತು.

ಎನ್​​ಸಿಬಿ ಸಾಕ್ಷಿ ಕಿರಣ್ ಗೋಸಾವಿ ವಿರುದ್ಧ ಪುಣೆಯಲ್ಲಿ  ಮೂರನೇ ಎಫ್ಐಆರ್ ದಾಖಲು
ಕೆಪಿ ಗೋಸಾವಿ, ಆರ್ಯನ್ ಖಾನ್
Follow us on

ಮುಂಬೈ: ಕ್ರೂಸ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಎನ್‌ಸಿಬಿಯ ಸಾಕ್ಷಿಯಾಗಿರುವ ಕಿರಣ್ ಗೋಸಾವಿ ಮಲೇಷ್ಯಾದ ದೊಡ್ಡ ಹೋಟೆಲ್‌ನಲ್ಲಿ ಕೆಲಸ ನೀಡುವುದಾಗಿ ಸುಳ್ಳು ಭರವಸೆ ನೀಡಿ ವ್ಯಕ್ತಿಯೊಬ್ಬನಿಗೆ ವಂಚಿಸಿದ ಆರೋಪದ ಮೇಲೆ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಗೋಸಾವಿ ವಿರುದ್ಧ ಪುಣೆಯ ವನವಾಡಿಯಲ್ಲಿ ದಾಖಲಾದ ಇತ್ತೀಚಿನ ಪ್ರಕರಣದಲ್ಲಿ, ಅವರು ದೂರುದಾರರಿಗೆ ಬಂದೂಕಿನಿಂದ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಕುಖ್ಯಾತ ಉದ್ಯೋಗ ದರೋಡೆಕೋರ ಎಂದು ಆಪಾದಿಸಲ್ಪಟ್ಟ ಸ್ವಯಂ-ಶೈಲಿಯ ಪತ್ತೇದಾರಿ ಗೋಸಾವಿಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕಾರ್ಡೆಲಿಯಾ ಐಷಾರಾಮಿ ಹಡಗಿನಿಂದ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣದಲ್ಲಿ ‘ಸ್ವತಂತ್ರ ಸಾಕ್ಷಿ’ ಎಂದು ಉಲ್ಲೇಖಿಸಿದೆ. ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನ್ನು ಎನ್ ಸಿಬಿ ಬಂಧಿಸಿದಾಗ ಗೋಸಾವಿ ಆರ್ಯನ್ ಜತೆ ಸೆಲ್ಫಿ ಕ್ಲಿಕಿಸಿ ಸುದ್ದಿಯಾಗಿದ್ದರು. 2018 ರಲ್ಲಿ ಫರಸ್ಖಾನಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದಲ್ಲಿ ಗೋಸಾವಿಯನ್ನು ಪೊಲೀಸರು ಅಕ್ಟೋಬರ್ 28 ರಂದು ಬಂಧಿಸಿದ್ದರು.

ನಂತರ ಆತನನ್ನು ಹೆಚ್ಚಿನ ತನಿಖೆಗಾಗಿ ನ್ಯಾಯಾಲಯವು ನವೆಂಬರ್ 5 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿತು. ಏತನ್ಮಧ್ಯೆ, ಈತನ ವಿರುದ್ಧ ವಂಚನೆ ಮಾಡಿದ ಇನ್ನೂ ನಾಲ್ಕು ದೂರುಗಳು ಪೊಲೀಸರಿಗೆ ಬಂದವು. ಮೂರು ದೂರುಗಳ ಆಧಾರದ ಮೇಲೆ ಶನಿವಾರ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಮೊಹಮ್ಮದವಾಡಿ ನಿವಾಸಿಯೊಬ್ಬರು ನೀಡಿದ ಮತ್ತೊಂದು ದೂರಿನ ಮೇರೆಗೆ ವನವಾಡಿ ಪೊಲೀಸ್ ಠಾಣೆಯಲ್ಲಿ ಶನಿವಾರ ತಡರಾತ್ರಿ ಎಫ್‌ಐಆರ್ ದಾಖಲಾಗಿದೆ. ವನವಾಡಿ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ದೀಪಕ್ ಲಗಾಡ್ ಮಾತನಾಡಿ, ನಮ್ಮಲ್ಲಿ ದಾಖಲಾಗಿರುವ ಪ್ರಕರಣವು ಒಬ್ಬ ದೂರುದಾರ ಸಲ್ಲಿಸಿದ ಆರೋಪಕ್ಕೆ ಸಂಬಂಧಿಸಿದೆ. 2018-19ನೇ ಸಾಲಿನಲ್ಲಿ ಮಲೇಷ್ಯಾದಲ್ಲಿ ಕೆಲಸ ಕೊಡಿಸುವುದಾಗಿ ಗೋಸಾವಿಯಿಂದ ವಂಚಿಸಿದ್ದರು. ಗೋಸಾವಿ ಹಣ ವಾಪಸ್ ಕೇಳಲು ಹೋದಾಗ ಬಂದೂಕು ತೋರಿಸಿ ಬೆದರಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಈ ದೂರುದಾರರಿಂದ ಗೋಸಾವಿ 1.5 ಲಕ್ಷ ರೂ. ಪಡೆದಿದ್ದರು ಎಂಬ ಆರೋಪವಿದೆ.
ಗೋಸಾವಿ ವಿರುದ್ಧ ಫರಸ್ಖಾನಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಅನ್ನು ಪುಣೆಯ ಕಸ್ಬಾ ಪೇಠ್‌ನ ನಿವಾಸಿ ಹೋಟೆಲ್ ಮ್ಯಾನೇಜ್‌ಮೆಂಟ್ ಪದವೀಧರ ಚಿನ್ಮಯ್ ದೇಶಮುಖ್ (24) ಅವರು ಮೇ 29, 2018 ರಂದು ದಾಖಲಿಸಿದ್ದಾರೆ. ಮಲೇಷಿಯಾದ ಹೋಟೆಲ್‌ನಲ್ಲಿ ಕೆಲಸಕೊಡಿಸುವುದಾಗಿ ಗೋಸಾವಿ ಭರವಸೆ ನೀಡಿದ್ದರು ಎಂದು ಆರೋಪಿಸಲಾಗಿದೆ.

ಈ ಪ್ರಕರಣದಲ್ಲಿ ಗೋಸಾವಿಯನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪುಣೆ ಪೊಲೀಸರು ಹೇಳಿದ್ದಾರೆ ಮತ್ತು 2019 ರಲ್ಲಿ ನ್ಯಾಯಾಲಯವು ಆತನನ್ನು ಪರಾರಿ ಎಂದು ಘೋಷಿಸಿತು. ಆದರೆ ಆರೋಪಿ ಆರ್ಯನ್ ಖಾನ್ ಜೊತೆಗಿನ ಅವರ ಸೆಲ್ಫಿ ವೈರಲ್ ಆದ ಬೆನ್ನಲ್ಲೇ ಮತ್ತೆ ಹಳೇ ಪ್ರಕರಣಗಳನ್ನು ಕೆದಕಲಾಯಿತು. ನಂತರ ದೇಶವನ್ನು ತೊರೆಯದಂತೆ ತಡೆಯಲು ಪುಣೆ ನಗರ ಪೊಲೀಸರು ಅಕ್ಟೋಬರ್ 13 ರಂದು ಗೋಸಾವಿಯ ವಿರುದ್ಧ ಲುಕ್ ಔಟ್ ಸುತ್ತೋಲೆ ಹೊರಡಿಸಿದರು. ವಂಚನೆ ಪ್ರಕರಣದಲ್ಲಿ ಖಾತೆಗೆ ಹಣ ಹೋಗಿದೆ ಎಂದು ಆರೋಪಿಸಿ ಅಕ್ಟೋಬರ್ 18 ರಂದು ಪೊಲೀಸರು ಮುಂಬೈನ ಗೋವಂಡಿಯಿಂದ ಅವರ ಸಹಾಯಕ ಶೆರ್ಬಾನೊ ಖುರೇಷಿಯನ್ನು ಬಂಧಿಸಿದರು.

ಆತನ ಬಂಧನದ ನಂತರ, ಪೊಲೀಸರು ನ್ಯಾಯಾಲಯಕ್ಕೆ ಗೋಸಾವಿ ‘ಕುಖ್ಯಾತ ಉದ್ಯೋಗ ದರೋಡೆಕೋರ’ ಎಂದು ಹೇಳಿದರು, ಅವರು ಹಲವಾರು ನಿರುದ್ಯೋಗಿ ಯುವಕರಿಗೆ ವಿದೇಶಗಳಲ್ಲಿ ಉದ್ಯೋಗ ನೀಡುವುದಾಗಿ ಸುಳ್ಳು ಭರವಸೆ ನೀಡಿ ವಂಚಿಸಿದ್ದಾರೆ.

ಆತನ ಬಳಿಯಿದ್ದ ಸಿಮ್ ಕಾರ್ಡ್ ಅನ್ನು ನಕಲಿ ದಾಖಲೆಗಳನ್ನು ಸಲ್ಲಿಸಿ ಸಚಿನ್ ಸಿದ್ಧೇಶ್ವರ್ ಸೊಂಟಕ್ಕೆ ಎಂಬ ಗುರುತಿನ ಅಡಿಯಲ್ಲಿ ಪಡೆಯಲಾಗಿದೆ ಎಂದು ಪುಣೆ ಪೊಲೀಸರು ಪತ್ತೆ ಮಾಡಿದ್ದಾರೆ. ಗೋಸಾವಿ ಅವರು ಲಕ್ನೋ, ಕಾನ್ಪುರ, ಹೈದರಾಬಾದ್, ಸೋಲಾಪುರ, ಸತಾರಾ ಮತ್ತು ವಿಜಾಪುರ ಸೇರಿದಂತೆ ವಿವಿಧ ನಗರಗಳಲ್ಲಿ ಸಮಿತ್ ಪಾಟೀಲ್ ಎಂಬ ನಕಲಿ ಹೆಸರಿನಲ್ಲಿ ವಾಸಿಸುತ್ತಿದ್ದರು.

ಇದನ್ನೂ ಓದಿ: ಉದ್ಯೋಗ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕಿರಣ್ ಗೋಸಾವಿ ಸಹಾಯಕನ ಬಂಧನ