ಈ ಬಂಧನ ಅಕ್ರಮವಲ್ಲ, ಅರವಿಂದ್​​ ಕೇಜ್ರಿವಾಲ್ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ನನ್ನ ಬಂಧನ ಅಕ್ರಮ, ಈ ಬಗ್ಗೆ ಹೈಕೋರ್ಟ್​​ ನನಗೆ ನ್ಯಾಯ ನೀಡಬೇಕು ಎಂದು ದೆಹಲಿ ಸಿಎಂ ಅರವಿಂದ್​​ ಕೇಜ್ರಿವಾಲ್​ ಅವರು ದೆಹಲಿ ಹೈಕೋರ್ಟ್​​​ಗೆ ಅರ್ಜಿ ಸಲ್ಲಿಸಿದರು. ಇದೀಗ ಈ ಅರ್ಜಿಯನ್ನು ಹೈಕೋರ್ಟ್​​​ ವಜಾ ಮಾಡಿದೆ.

ಈ ಬಂಧನ ಅಕ್ರಮವಲ್ಲ, ಅರವಿಂದ್​​ ಕೇಜ್ರಿವಾಲ್ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್
ಅರವಿಂದ್​​ ಕೇಜ್ರಿವಾಲ್

Updated on: Aug 05, 2024 | 3:52 PM

ದೆಹಲಿ, ಆ.5:  ದೆಹಲಿ ಮುಖ್ಯಮಂತ್ರಿ ಅರವಿಂದ್​​ ಕೇಜ್ರಿವಾಲ್ ಅವರನ್ನು ದೆಹಲಿ ಹೈಕೋರ್ಟಿಗೆ ಸಲ್ಲಿಸಿದ್ದ ಜಾಮೀನು ಅರ್ಜಿನ್ನು ಹೈಕೋರ್ಟ್​​​ ವಜಾಗೊಳಿಸಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐ ತನ್ನನ್ನು ಬಂಧಿಸಿ ಕಸ್ಟಡಿಗೆ ನೀಡಿರುವುದನ್ನು ಪ್ರಶ್ನಿಸಿ ಕೇಜ್ರಿವಾಲ್ ಅವರು ಅರ್ಜಿ ಸಲ್ಲಿಸಿದರು. ಇದೀಗ ಈ ಅರ್ಜಿಯನ್ನು ಹೈಕೋರ್ಟ್​​​ ವಜಾ ಮಾಡಿದೆ.

ಇದೀಗ ಹೈಕೋರ್ಟಿನ ಈ ನಿರ್ಧಾರ ಕೇಜ್ರಿವಾಲ್ ಅವರಿಗೆ ಭಾರೀ ಹಿನ್ನಡೆ ಉಂಟು ಮಾಡಿದೆ. ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ನೇತೃತ್ವದ ಪೀಠವು “ಸಮರ್ಥನೀಯ ಕಾರಣಗಳಿಲ್ಲದೆ” ಬಂಧನವಾಗಿಲ್ಲ ಎಂಬುದನ್ನು ಸಿಬಿಐ ವರದಿಯನ್ನು ನೋಡಿ ಈ ತೀರ್ಪು ನೀಡಿದ್ದಾರೆ.

ಸಿಬಿಐನ ಕ್ರಮವನ್ನು ಕಾನೂನುಬಾಹಿರ ಎಂದು ಕರೆಯಲಾಗುವುದಿಲ್ಲ. ಯಾವುದೇ ಸಮರ್ಥನೀಯ ಕಾರಣಗಳಿಲ್ಲದೆ ಅಥವಾ ಕಾನೂನುಬಾಹಿರವಾಗಿ ಬಂಧನವಾಗಿದೆ ಎಂದು ಹೇಳಲಾಗುವುದಿಲ್ಲ ಎಂದು ಪೀಠ ಹೇಳಿದೆ. ಇದರ ಜತೆಗೆ ಹೈಕೋರ್ಟ್ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯನ್ನು ವಿಚಾರಣೆ ಮಾಡಿದೆ. ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಲು ಅವರಿಗೆ ಸ್ವಾತಂತ್ರ್ಯವನ್ನು ನೀಡಿದೆ.

ಕೇಜ್ರಿವಾಲ್ ಅವರು ತನ್ನ ಬಂಧನ ಅಕ್ರಮವಾಗಿದೆ ಎಂದು ಕಳೆದ ತಿಂಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ನೇಶ್ ಕುಮಾರ್ ವಿರುದ್ಧ ಬಿಹಾರ ರಾಜ್ಯ ಮತ್ತು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 41 ಎ ಎಂಬ ಸುಪ್ರೀಂ ಕೋರ್ಟ್‌ನ ತೀರ್ಪಿನ ಮಾರ್ಗಸೂಚಿಗಳಿಗೆ ವಿರುದ್ಧವಾಗಿರುವ ಕಾರಣ ಅವರ ಬಂಧನ ಕಾನೂನುಬಾಹಿರ ಎಂದು ಅವರು ನ್ಯಾಯಾಲಯದ ಮುಂದೆ ವಾದಿಸಿದ್ದರು.

ಇದನ್ನೂ ಓದಿ: ವಕ್ಫ್​ ಕಾಯ್ದೆ ಎಂದರೇನು? ವಕ್ಫ್​ ಮಂಡಳಿ ಯಾರದ್ದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದೇ? ಇಲ್ಲಿದೆ ಮಾಹಿತಿ

ದೆಹಲಿ ಅಬಕಾರಿ ನೀತಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಡಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾಮೀನು ಪಡೆದ ಕೂಡಲೇ ಸಿಬಿಐ ಕೇಜ್ರಿವಾಲ್ ಅವರನ್ನು ಬಂಧಿಸಿತು. ಈ ಮೂಲಕ ನ್ಯಾಯಾಲಯ ಅವರ ಜಾಮೀನು ಆದೇಶವನ್ನು ತಡೆಹಿಡಿಯಿತು. ನಂತರ ಸಿಬಿಐ ಈ ಅಕ್ರಮದ ಮೂಲ ವ್ಯಕ್ತಿ ಅರವಿಂದ್​​​ ಕೇಜ್ರಿವಾಲ್ ಎಂದು ಹೇಳಿತ್ತು. ಸಿಬಿಐ ಪ್ರಕಾರ, ಕೇಜ್ರಿವಾಲ್ ಅವರು ಈ ವಿಷಯದಲ್ಲಿ ನೇರವಾದ ಹಸ್ತಕ್ಷೇಪ ಮಾಡಿದ್ದಾರೆ ಎಂದು ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  

Published On - 2:59 pm, Mon, 5 August 24

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us